ರಾಜ್ಯದ 49 ಕಾರಾಗೃಹಗಳ ಪೈಕಿ 39 ರಲ್ಲಿ ಕೊರೋನಾ ಸೋಂಕು ಇಲ್ಲ!

ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಕೋವಿಡ್ ಸೋಂಕು ಕಡಿಮೆಯಾಗುತ್ತಿದ್ದು, ಕರ್ನಾಟಕದ 49 ಕಾರಾಗೃಹಗಳ ಪೈಕಿ 39 ರಲ್ಲಿ ಸೋಂಕು ಶೂನ್ಯವಾಗಿದೆ.
ಪರಪ್ಪನ ಆಗ್ರಹಾರ ಕಾರಾಗೃಹ
ಪರಪ್ಪನ ಆಗ್ರಹಾರ ಕಾರಾಗೃಹ
Updated on

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಕೋವಿಡ್ ಸೋಂಕು ಕಡಿಮೆಯಾಗುತ್ತಿದ್ದು, ಕರ್ನಾಟಕದ 49 ಕಾರಾಗೃಹಗಳ ಪೈಕಿ 39 ರಲ್ಲಿ ಸೋಂಕು ಶೂನ್ಯವಾಗಿದೆ.

ರಾಜ್ಯದ 10 ಕಾರಾಗೃಹದಲ್ಲಿ ಕೆಲವು ಸೋಂಕಿನ ಕೇಸ್ ಇದೆ ಎಂದು ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಐದು ಕೈದಿಗಳು ಸೋಂಕಿತರಾಗಿದ್ದು ಅವರನ್ನು ಕ್ವಾರಂಟೈನ್ ನಲ್ಲಿಡಲಾಗಿದೆ ಎಂದು ತಿಳಿಸಿದ್ದಾರೆ. ಕಾರಾಗೃಹದ ಹೊಸ ಕಟ್ಟಡವನ್ನು ಕ್ವಾರಂಟೈನ್ ಕೇಂದ್ರವಾಗಿಸಿದ್ದು, ಸೋಂಕಿತ ಕೈದಿಗಳನ್ನು ಅಲ್ಲಿ ಪ್ರತ್ಯೇಕವಾಗಿರಿಸಲಾಗುತ್ತದೆ.

ಕಾರಾಗೃಹ ಇಲಾಖೆಯು ಕೈದಿಗಳಿಗೆ ವ್ಯಾಕ್ಸಿನೇಷನ್ ಚಾಲನೆಯನ್ನು ಮತ್ತಷ್ಟು ಹೆಚ್ಚಿಸಿದೆ. ನಾವು 18 ಮತ್ತು 44 ವರ್ಷದೊಳಗಿನ 99% ರಷ್ಟು ಕೈದಿಗಳಿಗೆ ಲಸಿಕೆ ನೀಡಿದ್ದೇವೆ. ಕೈದಿಗಳು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 45 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಕೈದಿಗಳು ತಮ್ಮ ಮೊದಲ ವ್ಯಾಕ್ಸಿನೇಷನ್ ತೆಗೆದುಕೊಂಡಿದ್ದಾರೆ. ಪರಿಷ್ಕೃತ ವ್ಯಾಕ್ಸಿನೇಷನ್ ನಿಯಮಗಳ ಪ್ರಕಾರ ಅವರು ತಮ್ಮ ಎರಡನೇ ಪ್ರಮಾಣವನ್ನು ಪಡೆಯುತ್ತಾರೆ.ಅಲ್ಲಿರುವ ಕೆವವು ಕೈದಿಗಳು ತಮ್ಮ ಎರಡನೆಯ ಡೋಸ್ ಸಹ ಪಡೆದಿರಬಹುದು ಎಂದು ಅಲೋಕ್ ಮೋಹನ್ ತಿಳಿಸಿದ್ದಾರೆ.

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಸುಮಾರು 15 ಸಾವಿರ ಕೈದಿಗಳಿದ್ದು ಸಾಮೂಹಿಕವಾಗಿ ಅವರೆಲ್ಲರಿಗೂ ಲಸಿಕೆ ಹಾಕಲಾಗುವುದು, 2,167 ಮಂದಿ 45 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದು, ಜೈಲುಗಳಲ್ಲಿ ಲಸಿಕೆ ಹಾಕುವಿಕೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾಡಳಿತದ ಸಹಾಯದಿಂದ ನಡೆಸಲಾಗುತ್ತಿದೆ.

ಸುಪ್ರೀಂಕೋರ್ಟ್ ನಿರ್ದೇಶನದಂತೆ ಕರ್ನಾಟಕದಲ್ಲಿ 1,120 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ, "1,120 ಕೈದಿಗಳಲ್ಲಿ 625 ಜನರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ, 370 ಮಂದಿಯನ್ನು ಪೆರೋಲ್ ಮತ್ತು 125 ಜನರನ್ನು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ ಬಿಡುಗಡೆ ಮಾಡಲಾಗಿದೆ" ಎಂದು ಕಾರಾಗೃಹದ ಡಿಜಿ ಹೇಳಿದ್ದಾರೆ. ಉಳಿದವರು ಜೀವಾವಧಿ ಮತ್ತು 14 ವರ್ಷಗಳ ಜೈಲು ಶಿಕ್ಷೆಯನ್ನು ಪೂರೈಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com