ಅರಣ್ಯ ಇಲಾಖೆ "ಮೌಂಟೇನ್" ಸ್ಥಳಾಂತರಿಸಿದ್ದು ಹೇಗೆ...?: ಇಲ್ಲಿದೆ ಮಾಹಿತಿ

ಸಕಲೇಶಪುರದಿಂದ ತಪ್ಪಿಸಿಕೊಂಡಿದ್ದ ಸಲಗ ಮೌಂಟೇನ್ ನ್ನು ಇತ್ತೀಚಿಗೆ ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿ ಕಾವೇರಿ ವನ್ಯಜೀವಿ ಅಭಯಾರಣ್ಯ (ಸಿಡಬ್ಲ್ಯುಎಸ್) ಗೆ ಮರಳಿ ಬಿಟ್ಟಿದ್ದರು. 
ಅಭಯಾರಣ್ಯಕ್ಕೆ 'ಮೌಂಟೇನ್'ನ್ನು ವಾಪಸ್ ಕಳಿಸುವ ಕಾರ್ಯಾಚರಣೆಯ ಚಿತ್ರ
ಅಭಯಾರಣ್ಯಕ್ಕೆ 'ಮೌಂಟೇನ್'ನ್ನು ವಾಪಸ್ ಕಳಿಸುವ ಕಾರ್ಯಾಚರಣೆಯ ಚಿತ್ರ
Updated on

ಬೆಂಗಳೂರು: ಸಕಲೇಶಪುರದಿಂದ ತಪ್ಪಿಸಿಕೊಂಡಿದ್ದ ಸಲಗ ಮೌಂಟೇನ್ ನ್ನು ಇತ್ತೀಚಿಗೆ ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿ ಕಾವೇರಿ ವನ್ಯಜೀವಿ ಅಭಯಾರಣ್ಯ (ಸಿಡಬ್ಲ್ಯುಎಸ್) ಗೆ ಮರಳಿ ಬಿಟ್ಟಿದ್ದರು. 

ಈಗ ಮತ್ತೊಮ್ಮೆ ಮೌಂಟೇನ್ ನ್ನು ಕದಲಿಸಲಾಗಿದ್ದು, ಬೇರೆ ಪ್ರದೇಶಕ್ಕೆ ಬಿಡಲಾಗಿದೆ. ಈ ಕಾರ್ಯಾಚರಣೆಯ ವಿವರ ಇಲ್ಲಿದೆ.

ಸಿಡಬ್ಲ್ಯುಎಸ್ ನಿಂದ ಹೊರ ಬಂದಿದ್ದ ಸಲಗ ಮೌಂಟೇನ್ ತನ್ನ ಊರು (ಸಕಲೇಶಪುರ)ಕ್ಕೆ ಮರಳಿ ಹೋಗುವುದಕ್ಕೆ ಯತ್ನಿಸುತ್ತಿತ್ತು. ಸೋಮವಾರ ಬೆಳಿಗ್ಗೆ ಚೆನ್ನಪಟ್ಟಣದ ಹತ್ತಿರ ಮಾನವ ಸಂಚಾರವುಳ್ಳ ಪ್ರದೇಶಕ್ಕೆ ತೀರಾ ಹತ್ತಿರದಲ್ಲಿ  ಅದನ್ನು ಹಿಡಿಯಲಾಗಿದೆ.

ನಾಲ್ಕು ದಿನಗಳಲ್ಲಿ ಮೌಂಟೇನ್(20) 100 ಕ್ಕೂ ಹೆಚ್ಚು ಕಿ.ಮೀ ಸಂಚರಿಸಿದ್ದು, ಕಾವೇರಿ ಹರಿಯುವ ಪ್ರದೇಶದಾದ್ಯಂತ ಆತ ಸಂಚರಿಸಿದ್ದಾನೆ. (10-12 ದಿನಗಳ ಕಾಲ ಅಲ್ಲಿಯೇ ಉಳಿದಿದ್ದು) ನಂತರದ ದಿನಗಳಲ್ಲಿ ಸಂಗಮ, ಕೊಕ್ಕರೆಬೆಳ್ಳೂರು ಪಕ್ಷಿಧಾಮ ಹಾಗೂ ಮೈಸೂರಿನ ರಾಜ್ಯ ರಸ್ತೆ ಹೆದ್ದಾರಿಯ ಮೂಲಕ ಚೆನ್ನಪಟ್ಟಣ ತಲುಪಿದ್ದಾನೆ. 

ಅವ್ವೇರಹಳ್ಳಿಯಲ್ಲಿ ಮೌಂಟೇನ್ ನ್ನು ಲಾರಿ ಹತ್ತಿಸುವುದಕ್ಕೆ  ಕ್ರೇನ್ ಸಹಾಯದಿಂದ ನಡೆದ ಸಿದ್ಧತೆ
ಅವ್ವೇರಹಳ್ಳಿಯಲ್ಲಿ ಮೌಂಟೇನ್ ನ್ನು ಲಾರಿ ಹತ್ತಿಸುವುದಕ್ಕೆ  ಕ್ರೇನ್ ಸಹಾಯದಿಂದ ನಡೆದ ಸಿದ್ಧತೆ

ಸಿಡಬ್ಲ್ಯುಎಸ್ ನಿಂದ ಹೊರಗೆ ತೆರಳಲು ಮೌಂಟೇನ್ ಯತ್ನಿಸಿದಾಗ ಆತನನ್ನು ವಾಪಸ್ ಅಭಯಾರಣ್ಯದೊಳಗೆ ಬಿಡಲಾಗಿತ್ತು. ಮತ್ತೊಮ್ಮೆ ಆತ ಹೊರಬರಲು ಯತ್ನಿಸಿದಾಗ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಅಲರ್ಟ್ ಬಂದಿತ್ತು. ನೇಮಕ ಮಾಡಲಾಗಿದ್ದ 60 ಮಂದಿಯ ವಿಶೇಷ ತಂಡ ಆತನ ಮೇಲೆ ನಿಗಾವಹಿಸುತ್ತಿತ್ತು. 

"ಅದೃಷ್ಟವಶಾತ್ ಆತ ಸಂಚರಿಸಿದ ಪ್ರದೇಶದಲ್ಲಿ ಮಾನವರೊಂದಿಗೆ ಯಾವುದೇ ಘರ್ಷಣೆ ಸಂಭವಿಸಿಲ್ಲ. ಹಸಿರು ಹೆಚ್ಚಾಗಿದ್ದ ಪ್ರದೇಶದಲ್ಲಿ ಮೌಂಟೇನ್ ಸಂಚರಿಸಿದ್ದು, ಎರಡು ಬಾರಿ ಹೆದ್ದಾರಿ ದಾಟಿದ್ದ, ಈ ಪ್ರದೇಶ ಹೊಸತಾಗಿದ್ದರಿಂದ ಸಮಸ್ಯೆ ಎದುರಾಗಿತ್ತು. ಆದರೆ ಲಾಕ್ ಡೌನ್, ಕರ್ಫ್ಯುಗಳಿಂದಾಗಿ ಮಾನವ ಸಂಚಾರ ಕಡಿಮೆ ಇದ್ದ ಪರಿಣಾಮ ಯಾವುದೇ ಅವಘಡ ಸಂಭವಿಸಿಲ್ಲ" ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ ಕುಮಾರ್ ಗೋಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ಸಲಗಗಳು ಸಾಮಾನ್ಯವಾಗಿ ಅರಣ್ಯದ ಒಳಗೆ ಅಡ್ಡಾಡುತ್ತವೆ. ಆದರೆ ಮೌಂಟೇನ್ ಮನುಷ್ಯ ಸಂಚಾರವಿದ್ದ ಪ್ರದೇಶಕ್ಕೆ ತೀರಾ ಹತ್ತಿರಕ್ಕೆ ಬಂದಿದ್ದ. ಆತನ ಚಲನವಲನಗಳನ್ನು ಪತ್ತೆ ಮಾಡುವುದಕ್ಕೆ ರೇಡಿಯೋ ಕಾಲರ್ ಸಹಕಾರಿಯಾಯಿತು" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com