ಟ್ವಿಟರ್ ವರ್ಸಸ್ ಉತ್ತರ ಪ್ರದೇಶ ಪೊಲೀಸರು: ವಿಚಾರಣೆ ಮುಂದೂಡಿದ ಕರ್ನಾಟಕ ಹೈಕೋರ್ಟ್

ಉತ್ತರಪ್ರದೇಶದ ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲಿನ ಹಲ್ಲೆ ವಿಡಿಯೋ ಟ್ವೀಟಗಳು ವೈರಲ್ ಸಂಬಂಧ ಟ್ವೀಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿಗೆ ಗಾಜಿಯಾಬಾದ್ ಪೊಲೀಸರ ಸಮನ್ಸ್  ಸಂಬಂಧದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮುಂದೂಡಿದೆ. 
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಉತ್ತರಪ್ರದೇಶದ ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲಿನ ಹಲ್ಲೆ ವಿಡಿಯೋ ಟ್ವೀಟಗಳು ವೈರಲ್ ಸಂಬಂಧ ಟ್ವೀಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿಗೆ ಗಾಜಿಯಾಬಾದ್ ಪೊಲೀಸರ ಸಮನ್ಸ್  ಸಂಬಂಧದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮುಂದೂಡಿದೆ. 

ಇತ್ತೀಚೆಗೆ ಉತ್ತರ ಪ್ರದೇಶ ಪೊಲೀಸರ ಪರ ಹಾಜರಾದ ವಕೀಲ ಪಿ. ಪ್ರಸನ್ನ ಕುಮಾರ್ ಅವರು ವಿಚಾರಣೆ ಮುಂದೂಡದಂತೆ ಕೋರಿದ್ದರು. ಆದರೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಅರ್ಜಿಯನ್ನು ಇನ್ನಷ್ಟು ಪರಿಶೀಲಿಸಿ ವಿಚಾರಣೆ ನಡೆಸಬೇಕಿದೆ ಎಂದು ಹೇಳಿರುವ ನ್ಯಾಯಮೂರ್ತಿ ಜಿ. ನರೇಂದ್ರ ಅವರ ಏಕ ಪೀಠವು ಜುಲೈ 5ಕ್ಕೆ ಮುಂದೂಡಿದೆ.

ಕರ್ನಾಟಕದ ಬೆಂಗಳೂರು ನಿವಾಸಿಯಾಗಿರುವ ಮಹೇಶ್ವರಿ ಅವರಿಗೆ ಈ ಹಿಂದೆ ಗಾಜಿಯಾಬಾದ್ ಪೊಲೀಸರು ನೋಟಿಸ್ ನೀಡಿದ್ದು, ಈ ಸಂಬಂಧ ತಮ್ಮ ಹೇಳಿಕೆಯನ್ನು ದಾಖಲಿಸಲು ಜೂನ್ 24ಕ್ಕೆ ಲೋನಿ ಬಾರ್ಡರ್ ಪೊಲೀಸ್ ಠಾಣೆಗೆ ಆಗಮಿಸುವಂತೆ ತಿಳಿಸಲಾಗಿತ್ತು. ಅಷ್ಟರಲ್ಲಿ ಮಹೇಶ್ವರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಕೋರ್ಟ್ ಮಹೇಶ್ವರಿ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಸೂಚಿಸಿತ್ತು. 

ಜೂನ್ 14ರಂದು ಸಾಮಾಜಿಕ ಮಾಧ್ಯಮದಲ್ಲಿ ಹಿರಿಯ ಮುಸ್ಲಿಂ ವ್ಯಕ್ತಿ ಅಬ್ದುಲ್ ಶಮದ್ ಸೈಫಿ ಮೇಲಿನ ಹಲ್ಲೆ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ಕೆಲವು ಯುವಕರು ತನ್ನನ್ನು ಥಳಿಸಿದ್ದು ಅಲ್ಲದೆ 'ಜೈ ಶ್ರೀ ರಾಮ್' ಎಂದು ಜಪಿಸಲು ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು. 

ಈ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಗಾಜಿಯಾಬಾದ್ ಪೊಲೀಸರು ಜೂನ್ 15ರಂದು ಟ್ವಿಟರ್ ಇಂಕ್, ಟ್ವಿಟರ್ ಕಮ್ಯುನಿಕೇಷನ್ಸ್ ಇಂಡಿಯಾ, ನ್ಯೂಸ್ ವೆಬ್‌ಸೈಟ್ ದಿ ವೈರ್, ಪತ್ರಕರ್ತರಾದ ಮೊಹಮ್ಮದ್ ಜುಬೈರ್ ಮತ್ತು ರಾಣಾ ಅಯೂಬ್, ಕಾಂಗ್ರೆಸ್ ನ ಸಲ್ಮಾನ್ ನಿಜಾಮಿ, ಮಸ್ಕೂರ್ ಉಸ್ಮಾನಿ, ಡಾ.ಸಾಮ ಮೊಹಮ್ಮದ್ ಮತ್ತು ಬರಹಗಾರ ಸಬಾ ನಖ್ವಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.

ಈ ವಿಡಿಯೋ ಮೂಲಕ ಕೋಮು ಅಶಾಂತಿ ಸೃಷ್ಟಿಸಲು ಹಂಚಿಕೊಳ್ಳಲಾಗಿದೆ ಎಂದು ಉತ್ತರಪ್ರದೇಶ ಪೊಲೀಸರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com