ಪಾಳು ಬಿದ್ದ ಮಕ್ಕಳ ಆಸ್ಪತ್ರೆ ಕಟ್ಟಡವನ್ನು ಕೋವಿಡ್‌ ಕೇರ್ ಕೇಂದ್ರ ಮಾಡಿ: ಸರ್ಕಾರಕ್ಕೆ ಆರ್‌.ಆರ್‌.ನಗರದ ನಿವಾಸಿಗಳ ಒತ್ತಾಯ

ರಾಜರಾಜೇಶ್ವರಿ ನಗರದಲ್ಲಿ ಬಳಕೆಯಾಗದೇ ಪಾಳು ಬಿದ್ದಿರುವ ಮಕ್ಕಳ ಆಸ್ಪತ್ರೆ ಕಟ್ಟಡವನ್ನು ಕೋವಿಡ್‌ ಕೇರ್ ಕೇಂದ್ರವಾಗಿ ಮಾರ್ಪಡಿಸಬೇಕೆಂದು ಸ್ಥಳೀಯ ನಿವಾಸಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. 
ಪಾಳು ಬಿದ್ದಿರುವ ಮಕ್ಕಳ ಆಸ್ಪತ್ರೆ
ಪಾಳು ಬಿದ್ದಿರುವ ಮಕ್ಕಳ ಆಸ್ಪತ್ರೆ

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಬಳಕೆಯಾಗದೇ ಪಾಳು ಬಿದ್ದಿರುವ ಮಕ್ಕಳ ಆಸ್ಪತ್ರೆ ಕಟ್ಟಡವನ್ನು ಕೋವಿಡ್‌ ಕೇರ್ ಕೇಂದ್ರವಾಗಿ ಮಾರ್ಪಡಿಸಬೇಕೆಂದು ಸ್ಥಳೀಯ ನಿವಾಸಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಪಾಳು ಬಿದ್ದಿರುವ ಕಟ್ಟಡ 2008ರಲ್ಲಿ ಮಕ್ಕಳ ಆಸ್ಪತ್ರೆಯಾಗಿತ್ತು. ಆಸ್ಪತ್ರೆ ನಡೆಸಲು ಮಲೇಷ್ಯಾ ವೈದ್ಯರ ಸಂಘವೊಂದು ಹಣವನ್ನು ನೀಡುತ್ತಿತ್ತು. ಬಳಿಕ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆ ಖರೀದಿ ಮಾಡಿತ್ತು. ಬಳಿಕ ಆಸ್ಪತ್ರೆಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುತ್ತಿರಲಿಲ್ಲ. ನಿಧಾನಗತಿಯಲ್ಲಿ ಆಸ್ಪತ್ರೆ ಮುಚ್ಚ ತೊಡಗಿತ್ತು. ಪಾಳುಬಿದ್ದಿರುವ ಈ ಆಸ್ಪತ್ರೆಯನ್ನು ಆರು ತಿಂಗಳು ಅಥವಾ ವರ್ಷದ ಮಟ್ಟಿಗೆ ಪಡೆದು 400 ಹಾಸಿಗೆಗಳ ಕೋವಿಡ್‌ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಬಹುದು ಅಥವಾ ಮೇಕ್‌ ಶಿಫ್ಟ್‌ ಆಗಿಯೂ ಬಳಸಿಕೊಳ್ಳಲು ಸಾಧ್ಯವಿದೆ’ ಎಂದು ವೈದ್ಯ ಡಾ.ರಾಘವೇಂದ್ರ ರಾವ್‌ ಹೇಳಿದ್ದಾರೆ.

ಕಲ್ಯಾಣ ಮಂಟಪ ಇತ್ಯಾದಿಗಳನ್ನು ಪಡೆದುಕೊಳ್ಳುವುದಕ್ಕಿಂತ ಈ ಕಟ್ಟಡವನ್ನು ಸ್ವಚ್ಛ ಮಾಡಿ ಬಳಸಿಕೊಳ್ಳಬಹುದು. ಇಲ್ಲಿ ಶೌಚಾಲಯವನ್ನು ಹೊಂದಿದ ಸಿಂಗಲ್‌ ರೂಮ್‌ಗಳಿವೆ. ಐಸೋಲೇಷನ್‌ ಮಾಡುವುದಕ್ಕೂ ಸುಲಭವಾಗುತ್ತದೆ. ಈ ಭಾಗದಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಇದನ್ನು ಸರ್ಕಾರ ಪಡೆದುಕೊಂಡರೆ ಸುಲಭವಾಗುತ್ತದೆ’ ಎಂದು ತಿಳಿಸಿದ್ದಾರೆ. 

ಒಂದು ದೊಡ್ಡ ಆಸ್ಪತ್ರೆಯಲ್ಲಿ ಇರುವ ಎಲ್ಲ ಸೌಲಭ್ಯಗಳು ಇವೆ. ಆಕ್ಸಿಜನ್‌ ಪೂರೈಕೆಗೆ ಅಗತ್ಯ ಸೌಕರ್ಯಗಳಿವೆ. ಹೀಗಾಗಿ ಅತಿ ಸುಲಭವಾಗಿ ಕೋವಿಡ್‌ ಕೇಂದ್ರವಾಗಿ ಪರಿವರ್ತನೆ ಮಾಡಬಹುದು ಎಂದಿದ್ದಾರೆ. 

ಪ್ರಸ್ತುತ ಕಟ್ಟಡ ಮಾಲೀಕ ಈ ಪ್ರದೇಶವನ್ನು ಸರ್ಕಾರಕ್ಕೆ ಕೋವಿಡ್ ಕೇರ್ ಕೇಂದ್ರವಾಗಿ ಮಾರ್ಪಡಿಸಲು ಉಚಿತವಾಗಿ ನೀಡಲು ಒಪ್ಪುತ್ತಿಲ್ಲ. ಮಾಲೀಕ ಕಟ್ಟಡವನ್ನು ಉರುಳಿಸಿ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ಮಾಡಲು ನಿರ್ಧರಿಸಿದ್ದಾನೆ. ಈಗಾಗಲೇ ಕಟ್ಟಡ ಪಾಳು ಬಿದ್ದಿದ್ದು, ಸ್ವಚ್ಛಗೊಳಿಸಿ ಕೋವಿಡ್ ಕೇರ್ ಕೇಂದ್ರವಾಗಿ ಮಾರ್ಪಡಿಸಬಹುದು. ಈಗಾಗಲೇ ರಾಜಕೀಯ ನಾಯಕರು ಹಾಗೂ ಬಿಬಿಎಂಪಿ ಅಧಿಕಾರಿಗಳು ಕಟ್ಟಡ ಮಾಲೀಕನ ಮನವೊಲಿಸಲು ಯತ್ನಿಸುತ್ತಿದ್ದಾರೆ. ಮಾಲೀಕ ತನ್ನ ಸಹೋದರ ಐಸಿಯುವಿನಲ್ಲಿದ್ದಾನೆಂದು ತಿಳಿದುಕೊಂಡು, ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ. 

ಈ ನಡುವೆ ಪಿಎಂಎಸ್ಐಎಸ್ ಕಟ್ಟಡವನ್ನು ಕೋವಿಡ್ ಕೇರ್ ಕೇಂದ್ರವಾಗಿ ಪರಿವರ್ತಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಬೌರಿಂಗ್ ಆಸ್ಪತ್ರೆಯ ವೈದ್ಯರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. 

ನಗರದಲ್ಲಿ ಕೋವಿಡೇತರ ರೋಗಿಗಳಿದ್ದಾರೆಂಬುದನ್ನು ಸರ್ಕಾರ ಮರೆತಂದಿದೆ. ಲಾಕ್ಡೌನ್ ಸಂದರ್ಭದಲ್ಲಿ ಆಸ್ಪತ್ರೆಯನ್ನು ಬಂದ್ ಮಾಡಲಾಗಿತ್ತು. ಬಳಿಕ ಈ ಪ್ರದೇಶವನ್ನು ವೈದ್ಯರು ಹಾಗೂ ನರ್ಸ್ ಗಳಿಗೆ ವಿಶ್ರಾಂತಿ ಪಡೆಯಲು ಬಳಕೆ ಮಾಡುತ್ತಿದ್ದರು. ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಏಕೈಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದಾಗಿದೆ. ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅತ್ಯಲ್ಪ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಪತ್ರೆಯನ್ನು ಕೋವಿಡ್ ಕೇರ್ ಆಸ್ಪತ್ರೆಯಾಗಿ ಮಾಡಿದ್ದೇ ಆದರೆ, ಕೋವಿಡೇತರ ರೋಗಿಗಳು ಎಲ್ಲಿಗೆ ಹೋಗಬೇಕೆಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com