ಬೆಂಗಳೂರು: ಬಿಬಿಎಂಪಿಯಲ್ಲಿ ಕೋವಿಡ್-19 ರೋಗಿಗಳಿಗೆ ಬೆಡ್ ಹಂಚಿಕೆಯಲ್ಲಿ ನಡೆದ ಅವ್ಯವಹಾರವನ್ನು ಬಯಲಿಗೆಳೆದಿದ್ದ ಸಂಸದ ತೇಜಸ್ವಿ ಸೂರ್ಯ ಈಗ ಬೆಡ್ ಹಂಚಿಕೆಗಾಗಿ ಬಳಕೆ ಮಾಡುತ್ತಿದ್ದ ಸಾಫ್ಟ್ ವೇರ್ ವ್ಯವಸ್ಥೆ ಸರಿಪಡಿಸಲು ನಂದನ್ ನಿಲೇಕಣಿ ನೆರವು ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಈಗಿರುವ ಸಾಫ್ಟ್ ವೇರ್ ನ್ನು ಬದಿಗೆ ಸರಿಸಿ ಸಾಫ್ಟ್ ವೇರ್ ದಿಗ್ಗಜರಿಂದ ನೂತನ ಸಾಫ್ಟ್ ವೇರ್ ತಯಾರಿಕೆಗೆ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.
ಸಂಸದರು ಹೊಸ ಸಾಫ್ಟ್ ವೇರ್ ಗಾಗಿ ನಂದನ್ ನಿಲೇಕಣಿ ಹಾಗೂ ಮತ್ತೊಂದು ಖಾಸಗಿ ಸಾಫ್ಟ್ ವೇರ್ ಸಂಸ್ಥೆಯ ಮೊರೆ ಹೋಗಿದ್ದಾರೆ.
ಈ ಬಗ್ಗೆ ಸ್ವತಃ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದು "ಇಂದು ಬೆಳಿಗ್ಗೆ ನಂದನ್ ನಿಲೇಕಣಿ ಅವರೊಂದಿಗೆ ಮಾತನಾಡಿ ಬಿಬಿಎಂಪಿ ಬೆಡ್ ಹಂಚಿಕೆಗೆ ಸಂಬಂಧಿಸಿದಂತೆ ಸಾಫ್ಟ್ ವೇರ್ ಅನ್ನು ಮರುವಿನ್ಯಾಸಗೊಳಿಸಲು ತಾಂತ್ರಿಕ ಸಹಕಾರ ಒದಗಿಸುವಂತೆ ಮನವಿ ಮಾಡಿದ್ದು, ಪರಿಣಿತರ ತಂಡವನ್ನು ಇದಕ್ಕೊಸ್ಕರವೇ ಸಜ್ಜುಗೊಳಿಸಿರುವುದು ಶ್ಲಾಘನೀಯ. ನಂದನ್ ನಿಲೇಕಣಿ ರವರ ಜನಪರ ಕಾಳಜಿ,ಬದ್ಧತೆ ಅಭಿನಂದನಾರ್ಹ.
ನುರಿತ ತಂತ್ರಜ್ಞರನ್ನು ಒಳಗೊಂಡಿರುವ ಈ ತಾಂತ್ರಿಕ ತಂಡವು, iSpirit @AProduct_nation ಸಂಸ್ಥೆಗಳ ಸಹಯೋಗದೊಂದಿಗೆ ಬೆಡ್ ಹಂಚಿಕೆಗೆ ಹಸ್ತಕ್ಷೇಪ ರಹಿತ, ಪಾರದರ್ಶಕ ವ್ಯವಸ್ಥೆ ಒಳಗೊಂಡ ಸಾಫ್ಟ್ ವೇರ್ ಅನ್ನು ಅಭಿವೃದ್ಧಿಗೊಳಿಸಲು ಸಹಕಾರ ನೀಡುತ್ತಿದೆ" ಎಂದು ಹೇಳಿದ್ದಾರೆ.
Advertisement