ಬೆಂಗಳೂರು: ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರೆಡಿಟೇಶನ್ ಕೌನ್ಸಿಲ್ (ನ್ಯಾಕ್) ಸಲಹೆಗಾರ ಡಾ.ಗಣೇಶ್ ಹೆಗ್ಡೆ(53) ಅವರು ಶನಿವಾರ ಮುಂಜಾನೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇತ್ತೀಚೆಗೆ ಅವರಿಗೆ ಕೋವಿಡ್ ಸೋಂಕು ದೃಢವಾಗಿತ್ತು. ಮೃತರಿಗೆ ಪತ್ನಿ ಮತ್ತು ಮಗಳು ಇದ್ದಾರೆ.
ಅವರು ಎರಡು ದಶಕಗಳಿಗಿಂತ ಹೆಚ್ಚು ಕಾಲ ನ್ಯಾಕ್ ಗೆ ಸೇವೆ ಸಲ್ಲಿಸಿದ್ದರು.
ಡಾ.ಹೆಗ್ಡೆ ಅವರ ನಿಧನಕ್ಕೆ ನ್ಯಾಕ್ ನಿರ್ದೇಶಕರು ಮತ್ತು ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.
Advertisement
Advertisement