ಕೋವಿಶೀಲ್ಡ್ ಮೊದಲ ಡೋಸ್ ಪಡೆದವರು 12 ವಾರಗಳವರೆಗೆ ಲಸಿಕೆ ಕೇಂದ್ರಕ್ಕೆ ಬರಬೇಡಿ: ರಾಜ್ಯ ಸರ್ಕಾರ 

ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದವರು 12 ವಾರಗಳವರೆಗೆ ಲಸಿಕೆ ಕೇಂದ್ರಕ್ಕೆ ಬಾರದಂತೆ ರಾಜ್ಯ ಸರ್ಕಾರ ಹೇಳಿದೆ, 
ಮೊದಲ ಡೋಸ್ ಪಡೆದವರು 12 ವಾರಗಳವರೆಗೆ ಲಸಿಕೆ ಕೇಂದ್ರಕ್ಕೆ ಬರಬೇಡಿ: ರಾಜ್ಯ ಸರ್ಕಾರ
ಮೊದಲ ಡೋಸ್ ಪಡೆದವರು 12 ವಾರಗಳವರೆಗೆ ಲಸಿಕೆ ಕೇಂದ್ರಕ್ಕೆ ಬರಬೇಡಿ: ರಾಜ್ಯ ಸರ್ಕಾರ
Updated on

ಬೆಂಗಳೂರು: ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದವರು 12 ವಾರಗಳವರೆಗೆ ಲಸಿಕೆ ಕೇಂದ್ರಕ್ಕೆ ಬಾರದಂತೆ ರಾಜ್ಯ ಸರ್ಕಾರ ಹೇಳಿದೆ.

ತಜ್ಞ ಗುಂಪು ನೀಡಿರುವ ಸಲಹೆಯನ್ನು ಉಲ್ಲೇಖಿಸಿರುವ ರಾಜ್ಯ ಸರ್ಕಾರದ ಲಸಿಕಾ ಅಭಿಯಾನದ ನಿರ್ದೇಶಕರು, "ಬದಲಾದ ನಿಯಮಗಳ ಪ್ರಕಾರ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದವರಿಗೆ 12-16 ವಾರಗಳ ಅಂತರದಲ್ಲಿ ಎರಡನೇ ಡೋಸ್ ನೀಡಬಹುದಾಗಿದೆ ಎಂದು ರೋಗನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್ ಟಿಎಜಿಐ) ಲಸಿಕೆ ಸಂಬಂಧ ರಾಷ್ಟ್ರೀಯ ತಜ್ಞರ ಗುಂಪು (ಎನ್ಇಜಿವಿಎಸಿ) ಶಿಫಾರಸು ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ 6-8 ವಾರಗಳಲ್ಲಿ ಎರಡನೇ ಡೋಸ್ ಲಸಿಕೆ ಪಡೆಯುವ ಹಳೆಯ ನಿಯಮವನ್ನು ಬದಲಾವಣೆ ಮಾಡಲಾಗಿದೆ. ಆದ್ದರಿಂದ 12 ವಾರಕ್ಕಿಂತ ಮುನ್ನವೇ ಲಸಿಕೆ ಕೇಂದ್ರಗಳಿಗೆ ಬರುವ ಅಗತ್ಯವಿಲ್ಲ ಎಂದು ಮನವಿ ಮಾಡಲಾಗಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

12 ವಾರಗಳ ಅಂತರದ ನಿಯಮ ಕೋವಿಶೀಲ್ಡ್ ಗೆ ಮಾತ್ರವೇ ಅನ್ವಯಿಸಲಿದ್ದು, ಕೋವ್ಯಾಕ್ಸಿನ್ ಗೆ ಅನ್ವಯವಾಗುವುದಿಲ್ಲವೆಂದು ಸರ್ಕಾರ ಹೇಳಿದೆ. ಲಸಿಕೆ ಕೊರತೆಯ ಹಿನ್ನೆಯಲ್ಲಿ 18-44 ವಯಸ್ಸಿನವರಿಗೆ ಮೊದಲ ಡೊಸ್ ಅಭಿಯಾನವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಸರ್ಕಾರ ಈಗಾಗಲೇ 3 ಕೋಟಿ ಲಸಿಕೆಗಳಿಗೆ ಆರ್ಡರ್ ನ್ನು ನೀಡಿದ್ದು, ಹಣವನ್ನೂ ಪಾವತಿಸಿದೆ. ಈ ಪೈಕಿ 7 ಲಕ್ಷ ಲಸಿಕೆಗಳು ಮಾತ್ರ ರಾಜ್ಯಕ್ಕೆ ತಲುಪಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com