ಕೊರೋನಾ ಲಾಕ್ಡೌನ್ ಸಂಕಷ್ಟ: ಮೈಸೂರು ಆಶ್ರಮದಿಂದ ಸೋಂಕಿತರ ಪರಿಚಾರಕರಿಗೆ ಉಚಿತ ಆಹಾರ ವಿತರಣೆ

ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ 14 ದಿನಗಳ ಲಾಕ್ಡೌನ್ ಹೇರಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೋಟೆಲ್, ಮೊಬೈಲ್ ಕ್ಯಾಂಟೀನ್ ಹಾಗೂ ಇತರೆ ಆಹಾರ ತಿನಿಸು ಅಂಡಗಿಗಳು ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಸೋಂಕಿತರನ್ನು ದಾಖಲಿಸಿ...
ಆಹಾರ ಪೊಟ್ಟಣಗಳ ಬಳಿ ಇರುವ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು
ಆಹಾರ ಪೊಟ್ಟಣಗಳ ಬಳಿ ಇರುವ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು
Updated on

ಮೈಸೂರು: ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ 14 ದಿನಗಳ ಲಾಕ್ಡೌನ್ ಹೇರಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೋಟೆಲ್, ಮೊಬೈಲ್ ಕ್ಯಾಂಟೀನ್ ಹಾಗೂ ಇತರೆ ಆಹಾರ ತಿನಿಸು ಅಂಡಗಿಗಳು ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಸೋಂಕಿತರನ್ನು ದಾಖಲಿಸಿ ಸಂಕಷ್ಟವನ್ನು ಎದುರಿಸುತ್ತಿರುವ ಸೋಂಕಿತರ ಪರಿಚಾರಕರಿಗೆ ಮೈಸೂರಿನ ಆಶ್ರಮವೊಂದು ಆಹಾರ ಪೊಟ್ಟಣಗಳನ್ನು ವಿತರಿಸಿ ಸಹಾಯ ಹಸ್ತ ಚಾಚುತ್ತಿದೆ. 

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮವು ಸರ್ಕಾರಿ ಆಸ್ಪತ್ರೆಗಳಲ್ಲಿರುವ ಸೋಂಕಿತರ ಪರಿಚಾರಕರಿಗೆ ಪ್ರತಿನಿತ್ಯ ಆಹಾರ ಪೊಟ್ಟಣಗಳನ್ನು ನೀಡುತ್ತಿದೆ. 

ಈ ಆಹಾರವನ್ನು ಎಲ್ಲಾ ಕೊರೋನಾ ನಿಯಮಗಳನ್ನು ಅನುಸರಿಸಿಯೇ ಆಶ್ರಮದಲ್ಲಿ ಆಹಾರವನ್ನು ಸಿದ್ಧಪಡಿಸಲಾಗುತ್ತಿದ್ದು, 40 ಮಂದಿ ಸೇವಕರು ಇದಕ್ಕೆ ಸಹಾಯ ಮಾಡುತ್ತಿದ್ದಾರೆ. ಆಶ್ರಮದ ವಾಹನವನ್ನೇ ಬಳಸಿ ಆಹಾರ ಪೊಟ್ಟಣಗಳವನ್ನು ವಿತರಿಸಲಾಗುತ್ತಿದೆ. ಪ್ರತೀನಿತ್ಯ 3,000 ಆಹಾರ ಪೊಟ್ಟಣಗಳನ್ನು ವಿತರಣೆ ಮಾಡುತ್ತಿದೆ. 

ಕೊರೋನಾ ಮೊದಲ ಅಲೆ ವೇಳೆಯಲ್ಲಿಯೂ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮವು ಹಲವರಿಗೆ ಸಹಾಯ ಮಾಡಿತ್ತು. ರೂ.90 ಲಕ್ಷ ವಸ್ತುಗಳನ್ನು ದಾನ ಮಾಡಿತ್ತು. ಇದರ ಇತರೆ ಶಾಖೆಗಳು ರೂ.3 ಕೋಟಿ ವೆಚ್ಚದಲ್ಲಿ ಆಹಾರ ಕಿಟ್ ಗಳು, ಸ್ಯಾನಿಟೈಸರ್, ಮಾಸ್ಕ್ ಹಾಗೂ ಇತರೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿತ್ತು. ಇದೀಗ 2ನೇ ಅಲೆ ರಾಜ್ಯದಲ್ಲಿ ಆರ್ಭಟಿಸುತ್ತಿದ್ದು, ಜನರು ಸರ್ಕಾರದ ಹಾಗೂ ತಜ್ಞರ ಸಲಹೆಗಳನ್ನು ಪಾಲನೆ ಮಾಡಬೇಕೆಂದು ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ಮನವಿ ಮಾಡಿಕೊಂಡಿದ್ದಾರೆ. 

ಪ್ರತೀನಿತ್ಯ 3,000 ಆಹಾರ ಪೊಟ್ಟಣಗಳನ್ನು ವಿತರಣೆ ಮಾಡಲಾಗುತ್ತಿದ್ದು, ಇದಕ್ಕಾಗಿ ರೂ.1 ಲಕ್ಷ ಖರ್ಚು ಮಾಡಲಾಗುತ್ತಿದೆ. ಇದಲ್ಲದೆ, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸುವತ್ತಿರುವ ಸಂಚಾರಿ ಪೊಲೀಸರಿಗೂ ರೂ.15 ಲಕ್ಷ ಖರ್ಚು ಮಾಡಿ 600 ಹೆಲ್ತ್ ಕಿಟ್ ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ. 

ಆಶ್ರಮದ ಕಾರ್ಯದರ್ಶಿ ಪ್ರಸಾದ್ ಅವರು ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರಿಗೆ ಹೆಲ್ತ್ ಕಿಟ್ ಗಳನ್ನು ನೀಡಿದ್ದಾರೆ. ಈ ಹೆಲ್ತ್ ಕಿಟ್ ನಲ್ಲಿ ಆಕ್ಸಿಮೀಟರ್, ಎನ್ 95 ಮಾಸ್ಕ್, ಮಲ್ಟಿವಿಟಮಿನ್ ಮತ್ತು ಪ್ಯಾರಾಸೆಟಾಮೊಲ್ ಮಾತ್ರೆಗಳು, ಸ್ಯಾನಿಟೈಸರ್ ಹಾಗೂ ಕೋವಿಡ್ ಮಾತ್ರೆಗಳನ್ನು ನೀಡಲಾಗಿದೆ. ಇವುಗಳನ್ನು ಒಂದು ತಿಂಗಳ ಕಾಲ ಬಳಕೆ ಮಾಡಬಹುದಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ ಆಶ್ರಮದ ಈ ಸಮಾಜ ಸೇವೆಯನ್ನು ಸಚಿವ ಎಸ್.ಟಿ.ಸೋಮಶೇಖರ್ ಅವರು ಶ್ಲಾಘಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com