ರಾಜ್ಯಕ್ಕೆ 2 ಲಕ್ಷ ಕೋವಿಶೀಲ್ಡ್ ಲಸಿಕೆ ಆಗಮನ: ಸಚಿವ ಸುಧಾಕರ್
ಬೆಂಗಳೂರು: ಕೋವಿಡ್-19 ಲಸಿಕೆ ಕೊರತೆ ಎದುರಾಗಿರುವ ಸಂದರ್ಭದಲ್ಲಿ ರಾಜ್ಯಕ್ಕೆ ಸ್ವಲ್ಪವಾದರೂ ನೆಮ್ಮದಿಯ ಸುದ್ದಿ ಬಂದಿದೆ.
ರಾಜ್ಯ ಸರ್ಕಾರ 2 ಲಕ್ಷ ಕೋವಿಶೀಲ್ಡ್ ಲಸಿಕೆಯನ್ನು ಖರೀದಿಸಿದ್ದು, ಅಷ್ಟೂ ಲಸಿಕೆಗಳು ರಾಜ್ಯವನ್ನು ತಲುಪಿರುವುದನ್ನು ಸಚಿವ ಸುಧಾಕರ್ ದೃಢಪಡಿಸಿದ್ದಾರೆ. ಸರ್ಕಾರದ ನೇರ ಖರೀದಿ ಪ್ರಕ್ರಿಯೆಯಡಿ ಲಸಿಕೆಗಳು ರಾಜ್ಯವನ್ನು ತಲುಪಿದ್ದು, ಆನಂದರಾವ್ ವೃತ್ತದಲ್ಲಿರುವ ರಾಜ್ಯ ಲಸಿಕಾ ಉಗ್ರಾಣದಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ರಾಜ್ಯಾದ್ಯಂತ 5.11 ಕೋಟಿ ಮಂದಿ (18 ವರ್ಷದ ಮೇಲ್ಪಟ್ಟವರೂ ಸೇರಿ) ಲಸಿಕೆ ಪಡೆಯುವುದಕ್ಕೆ ಅರ್ಹರಿದ್ದಾರೆ. ಲಸಿಕೆ ಅಭಿಯಾನ ಪ್ರಾರಂಭವಾದಾಗಿನಿಂದ (ಜನವರಿ ತಿಂಗಳಿನಿಂದ) ಮೇ.16 ವರೆಗೂ 1,11,88,143 ಮಂದಿಗೆ ಲಸಿಕೆ ನೀಡಲಾಗಿದ್ದು, ಇನ್ನೂ 4.22 ಕೋಟಿ ಮಂದಿಗೆ ಲಸಿಕೆ ನೀಡಬೇಕಿದ್ದು, ಶೇ.82 ರಷ್ಟು ಮಂದಿ ಲಸಿಕೆಗಾಗಿ ಕಾಯುತ್ತಿದ್ದಾರೆ. ಸರ್ಕಾರಕ್ಕೆ ತಕ್ಷಣಕ್ಕೆ 5.6 ಲಕ್ಷ ಡೋಸ್ ಗಳಷ್ಟು ಲಸಿಕೆ ಅವಶ್ಯಕತೆ ಇದೆ. ಈ ಪೈಕಿ 2 ಲಕ್ಷ ಕೋವಿಶೀಲ್ಡ್ ಲಸಿಕೆ ದೊರೆತಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ