ತವರಿಗೆ ತೆರಳಲು ಜರ್ಮನ್ ಪ್ರಜೆಗೆ ಬೆಂಗಳೂರು ಪೊಲೀಸರ ಸಹಾಯ

ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದ ಜರ್ಮನ್ ಪ್ರಜೆಗೆ ವಾಪಸ್ ತೆರಳಲು 38 ವರ್ಷದ ವ್ಯಕ್ತಿಗೆ ಬೆಂಗಳೂರು ಪೊಲೀಸರು ಸಹಾಯ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದ ಜರ್ಮನ್ ಪ್ರಜೆಗೆ ವಾಪಸ್ ತೆರಳಲು 38 ವರ್ಷದ ವ್ಯಕ್ತಿಗೆ ಬೆಂಗಳೂರು ಪೊಲೀಸರು ಸಹಾಯ ಮಾಡಿದ್ದಾರೆ.

ರೋಡ್ರಿಗೋ ಆಂಫ್ಟ್ 2019 ರ ನವೆಂಬರ್ ನಲ್ಲಿ ಭಾರತಕ್ಕೆಆಗಮಿಸಿದ್ದರು, 2020ರ ನವೆಂಬರ್ ನಲ್ಲಿ ವೀಸಾ ಎಕ್ಸ್ಪೈರ್ ಆಗಿತ್ತು. ಆದರೂ ಅವಧಿ ಮುಗಿದ ಮೇಲೂ ಭಾರತದಲ್ಲೆ ವಾಸವಿದ್ದರು, ಏಪ್ರಿಲ್ ತಿಂಗಳಲ್ಲಿ ಸಂಪಂಗಿರಾಮನಗರ ನಿವಾಸಿಗಳು ವಿದೇಶಿಗರ ವಿರುದ್ಧ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿದ್ದರು.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬಸವರಾಜ್ ತಾಲಿಕೋಟಿ ಮತ್ತು ಅವರ ತಂಡ ಆನ್‌ಫ್ಟ್‌ನ್ನು ಸಮಾಧಾನಪಡಿಸಿ ಲಾಡ್ಜ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. 

ದಾಖಲೆಗಳಿಂದಾಗಿ ಅವನು ಸ್ಕಿಜೋಫ್ರೇನಿಕ್ ಮತ್ತು ಅವನ ವೀಸಾ ಅವಧಿ ಮುಗಿದಿದೆ ಎಂಬುದು ತಿಳಿಯಿತು. ನಂತರ ನಾವು ನಗರದ ಜರ್ಮನ್ ಕಾನ್ಸುಲೇಟ್ ಜನರಲ್‌ಗೆ ಪತ್ರ ಬರೆದೆವು, ವಿವರಗಳನ್ನು ಪರಿಶೀಲಿಸಿದ ನಂತರ, ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿ ಮಾಡಲು ಆನ್‌ಫ್ಟ್‌ಗೆ ಅಗತ್ಯವಿದೆ ಎಂದು ಅವರು ನಮಗೆ ಮತ್ತೆ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.

 ಮೇ 1 ರಿಂದ ಮೇ 3 ರವರೆಗೆ ನಿಮ್ಹಾನ್ಸ್‌ನಲ್ಲಿ ದಾಖಲಿಸಿದ್ದೆವು. ದೂತಾವಾಸದ ಅಧಿಕಾರಿಗಳು ಜರ್ಮನಿಯಲ್ಲಿರುವ ಆನ್‌ಫ್ಟ್ ಕುಟುಂಬವನ್ನು ಸಂಪರ್ಕಿಸಿದ್ದು,  ಮೇ 4 ರಂದು ಬೆಂಗಳೂರಿನಿಂದ ಫ್ಲೈಟ್ ಟಿಕೆಟ್ ಬುಕ್ ಮಾಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com