ಲಾಕ್ ಡೌನ್ ಚಿತ್ರ
ಲಾಕ್ ಡೌನ್ ಚಿತ್ರ

ವಾಹನ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆ, ಮಕ್ಕಳನ್ನು ಪೊಲೀಸ್‌ ವಾಹನದಲ್ಲೇ ಮನೆ ತಲುಪಿಸಿದ ಎಎಸ್‌ಐ

ಕೋವಿಡ್ ಎರಡನೇ ನಿಯಂತ್ರಿಸಲು ಗುರುವಾರದಿಂದ ಮೂರು ದಿನಗಳಕಾಲ ಸಂಪೂರ್ಣ ಲಾಕ್‌ಡೌನ್‌ ಜಾರಿಯಾದ ಹಿನ್ನೆಲೆಯಲ್ಲಿ ನಗರ ಸೇರಿ ಜಿಲ್ಲೆಯ ಎಲ್ಲ ಪಟ್ಟಣಗಳು ಸ್ತಬ್ಧಗೊಂಡಿವೆ.
Published on

ಕಲಬುರಗಿ: ಕೋವಿಡ್ ಎರಡನೇ ನಿಯಂತ್ರಿಸಲು ಗುರುವಾರದಿಂದ ಮೂರು ದಿನಗಳಕಾಲ ಸಂಪೂರ್ಣ ಲಾಕ್‌ಡೌನ್‌ ಜಾರಿಯಾದ ಹಿನ್ನೆಲೆಯಲ್ಲಿ ನಗರ ಸೇರಿ ಜಿಲ್ಲೆಯ ಎಲ್ಲ ಪಟ್ಟಣಗಳು ಸ್ತಬ್ಧಗೊಂಡಿವೆ.

ವಾಹನ ಹಾಗೂ ಜನ ಸಂಚಾರಕ್ಕೆ ನಿಷೇಧವಿರುವುದರಿಂದ ರಸ್ತೆಗಳು ಪೂರ್ತಿ ಖಾಲಿ ಖಾಲಿಯಾಗಿವೆ. ಈ ಮಧ್ಯೆ ಮಾಹಾರಾಷ್ಟ್ರದ ಮುಂಬೈನಿಂದ ರೈಲಿನ ಮೂಲಕ ಕಲಬುರಗಿ ನಗರಕ್ಕೆ ಆಗಮಿಸಿದ್ದ ಪ್ರಯಾಣಿಕರು ಆಟೋ ಸಂಚಾರವಿಲ್ಲದೇ ಎಸ್‌ವಿಪಿ ವೃತ್ತದಲ್ಲಿ ಕಾಯುತ್ತ ಕುಳಿತಿದ್ದರು. ಇದನ್ನು ಗಮನಿಸಿದ ಸ್ಥಳೀಯ ನಾಗರಿಕರೊಬ್ಬರು ತುರ್ತು ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿ ಮಹಿತಿ ರವಾನಿಸಿದರು.

ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಗ್ರಾಮೀಣ ಠಾಣೆ ಎಎಸ್‌ಐ ಇನಾಮದಾರ್‌, ಮೂವರು ಮಹಿಳೆಯರು, ಇಬ್ಬರೂ ಪುರುಷರು ಸೇರಿ ಅವರೊಟ್ಟಿಗಿದ್ದ ಮೂವರು ಪುಟ್ಟ ಮಕ್ಕಳನ್ನು ಮನೆಗೆ ತಲುಪಿಸುವ ಮೂಲಕ ಕರ್ತವ್ಯನಿಷ್ಠೆ ಮೆರೆದರು.

ಇನ್ನು, ಲಾಕ್ ಡೌನ್ ಮತ್ತಷ್ಟು ಬಿಗಿಗೊಳಿಸುವ ಉದ್ದೇಶದಿಂದ ನಗರದಲ್ಲಿ ಗುರುವಾರ ಬೆಳಗ್ಗೆ 6 ಗಂಟೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಪೇದೆಗಳು ವಾಹನ ಸಮೇತ 'ಸಿಟಿ ರೌಂಡ್ಸ್' ಆರಂಭಿಸಿದರು. ನಗರದ ಪ್ರಮುಖ ರಸ್ತೆ, ವೃತ್ತ, ಚೌಕಗಳನ್ನು ಸುತ್ತಿದ ಪೊಲೀಸರು, ಅನಾವಶ್ಯಕವಾಗಿ ಹೊರಗೆ ಬರದಂತೆ ಸೈರನ್ ಮೂಲಕ ಜನರಿಗೆ ಎಚ್ಚರಿಕೆ ನೀಡಿದರು.

ನಗರದ ಜನನಿಬಿಡ ಪ್ರದೇಶಗಳಾದ ಸೂಪರ್‌ ಮಾರ್ಕೆಟ್‌, ಕಣ್ಣಿ ಮಾರ್ಕೆಟ್‌, ಬಸ್‌ ನಿಲ್ದಾಣ, ಶಹಾಬಜಾರ್‌, ಮುಸ್ಲಿಂ ಚೌಕ, ರಾಷ್ಟ್ರಪತಿ ಚೌಕ ಸಂಪೂರ್ಣವಾಗಿ ಸ್ತಬ್ಧಗೊಂಡಿರುವುದು ಕಂಡು ಬಂತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com