ಆಸ್ಪತ್ರೆಯಲ್ಲಿ ಹಾಡು-ನೃತ್ಯದ ಮೂಲಕ ರೋಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್
ರಾಜ್ಯ
'ಆನಂದ ನೀಡೋದಕ್ಕೂ ಸೈ, ಆರೈಕೆ ಮಾಡೋದಕ್ಕೂ ಸೈ': ಕೊರೋನಾ ಸಂಕಷ್ಟ ಮಧ್ಯೆ ಮನ ತಣಿಸುವ ವೈರಲ್ ವಿಡಿಯೊಗಳು
ಕೊರೋನಾ ಎರಡನೇ ಅಲೆ ಬಂದ ಮೇಲಂತೂ ಹಲವರ ಬಾಳು ಕತ್ತಲಾಗಿದೆ, ಲಾಕ್ ಡೌನ್ ಹೇರಿಕೆಯಿಂದ ಆರ್ಥಿಕ ಸಂಕಷ್ಟ ಒಂದೆಡೆಯಾದರೆ ಮತ್ತೊಂದೆಡೆ ಹಲವರಿಗೆ ಅನಾರೋಗ್ಯ ಸಮಸ್ಯೆ.
ಬೆಂಗಳೂರು: ಕೊರೋನಾ ಎರಡನೇ ಅಲೆ ಬಂದ ಮೇಲಂತೂ ಹಲವರ ಬಾಳು ಕತ್ತಲಾಗಿದೆ, ಲಾಕ್ ಡೌನ್ ಹೇರಿಕೆಯಿಂದ ಆರ್ಥಿಕ ಸಂಕಷ್ಟ ಒಂದೆಡೆಯಾದರೆ ಮತ್ತೊಂದೆಡೆ ಹಲವರಿಗೆ ಅನಾರೋಗ್ಯ ಸಮಸ್ಯೆ.
ಭವಿಷ್ಯದ ಬದುಕು ಏನಾಗುತ್ತದೋ, ಹೇಗಾಗುತ್ತದೋ ಎಂಬ ಭಯ, ಆತಂಕದಲ್ಲಿಯೇ ಎಲ್ಲರಿದ್ದಾರೆ. ಈ ನಡುವೆ ಭರವಸೆಯ ನಾಳೆಗಳಿಗಾಗಿ ನಾವು ಈ ವಿಡಿಯೊಗಳನ್ನು ನೋಡಿ ಸಮಾಧಾನ ಮಾಡಿಕೊಳ್ಳಲೇಬೇಕು.
ಹಲವು ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್ ಗಳು, ಕೊರೋನಾ ವಾರಿಯರ್ಸ್ ರೋಗಿಗಳ ಮನಸ್ಸಿನಲ್ಲಿ ಧೈರ್ಯ, ಸಮಾಧಾನ, ನಗು ತರಿಸಲು ಶ್ರಮಿಸುತ್ತಿದ್ದಾರೆ. ಆರೋಗ್ಯ ಸೇವೆ ಜೊತೆಗೆ ಹಾಡು, ನೃತ್ಯಗಳ ಮೂಲಕ ರೋಗಿಗಳ ನೋವನ್ನು ತಣಿಸಲು ಶ್ರಮಿಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ