ಸ್ಥಳ ಪರಿಶೀಲನೆ ನಡೆಸುತ್ತಿರುವ ಜೆ.ಮಂಜುನಾಥ್
ಸ್ಥಳ ಪರಿಶೀಲನೆ ನಡೆಸುತ್ತಿರುವ ಜೆ.ಮಂಜುನಾಥ್

ಆನೆ ಕಾರಿಡಾರ್ ಅಭಿವೃದ್ಧಿಗೆ ಗೋಮಾಳದ ಜಾಗ: ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಆನೆ ಕಾರಿಡಾರ್‌ ವಿಸ್ತರಿಸಿ ಮಾನವ–ವನ್ಯಜೀವಿ ಸಂಘರ್ಷಕ್ಕೆ ಇತಿಶ್ರೀ ಹಾಡುವ ಸಲುವಾಗಿ ಆನೇಕಲ್ ಮತ್ತು ಜಿಗಣಿ ಬಳಿಯಿರುವ ಗೋಮಾಳ ಜಾಗವನ್ನು ಬೆಂಗಳೂರು ನಗರ ಆಯುಕ್ತ ಜೆ.ಮಂಜುನಾಥ್ ಅವರು ಪರಿಶೀಲನೆ ನಡೆಸಿದರು. 

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಆನೆ ಕಾರಿಡಾರ್‌ ವಿಸ್ತರಿಸಿ ಮಾನವ–ವನ್ಯಜೀವಿ ಸಂಘರ್ಷಕ್ಕೆ ಇತಿಶ್ರೀ ಹಾಡುವ ಸಲುವಾಗಿ ಆನೇಕಲ್ ಮತ್ತು ಜಿಗಣಿ ಬಳಿಯಿರುವ ಗೋಮಾಳ ಜಾಗವನ್ನು ಬೆಂಗಳೂರು ನಗರ ಆಯುಕ್ತ ಜೆ.ಮಂಜುನಾಥ್ ಅವರು ಪರಿಶೀಲನೆ ನಡೆಸಿದರು. 

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಆನೆ ಕಾರಿಡಾರ್'ನ್ನು ಮತ್ತಷ್ಟು ಬಲಪಡಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡರು. ಅಲ್ಲದೆ, ವಾಸಸ್ಥಳಗಳ ಗುರುತಿಸುವಂತೆಯೂ ಸೂಚಿಸಿದರು. 

ಕಂದಾಯ ಭೂಮಿ, ಗೋಮಾಳ ಭೂಮಿ, ಅತಿಕ್ರಮಣ ಮತ್ತು ವಾಸಸ್ಥಾನಗಳಿವೆ, ಇವುಗಳನ್ನು ಗುರ್ತಿಸಲಾಗುತ್ತಿದೆ. ಬಳಿಕ ಈ ಕುರಿತು ವರದಿ ಸಿದ್ಧಪಡಿಸಿ, ಸರ್ಕಾರಕ್ಕೆ ನೀಡಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮಂಜುನಾಥ್ ಅವರು ಹೇಳಿದ್ದಾರೆ. 

ಕೆಲವೆಡೆ ಸರ್ಕಾರವೇ ಜನರಕ್ಕ ಭೂಮಿಯನ್ನು ನೀಡಿದೆ. ಸರ್ಕಾರ ಭೂಮಿ ನೀಡಿದ್ದರೂ ಕೆಲವು ಭೂಮಿ ಇನ್ನೂ ಬಳಕೆಯಾಗದೆ ಖಾಲಿ ಉಳಿದಿದೆ. ಇವುಗಳನ್ನೂ ಗುರ್ತಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com