ಕೊರೋನಾ ಓಡಿಸಲು ಗಲ್ಲಿಗಳಲ್ಲಿ 'ಅಗ್ನಿಹೋತ್ರ' ಹೋಮ, ಹವನ ನಡೆಸಿದ ಬಿಜೆಪಿ ಶಾಸಕ ಅಭಯ್ ಪಾಟೀಲ್!

ಸಾಂಕ್ರಾಮಿಕ ರೋಗವಾಗಿ ಪರಿಣಮಿಸಿರುವ ಕೊರೋನಾ ಮಹಾಮಾರಿ ವೈರಸ್ ಓಡಿಸಲು ಬಿಜೆಪಿ ಶಾಸಕ ಅಭಯ್ ಪಾಲೀಟ್ ಅವರು ಬೆಳಗಾವಿ ಜಿಲ್ಲೆಯಲ್ಲಿ 'ಅಗ್ನಿಹೋತ್ರ' ಹೋಮ, ಹವನ ನಡೆಸಿದ್ದು, ಬಿಜೆಪಿ ನಾಯಕರ ಈ ವರ್ದನೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. 
ಬಿಜೆಪಿ ಶಾಸಕ ಅಭಯ್ ಪಾಟೀಲ್
ಬಿಜೆಪಿ ಶಾಸಕ ಅಭಯ್ ಪಾಟೀಲ್
Updated on

ಬೆಳಗಾವಿ: ಸಾಂಕ್ರಾಮಿಕ ರೋಗವಾಗಿ ಪರಿಣಮಿಸಿರುವ ಕೊರೋನಾ ಮಹಾಮಾರಿ ವೈರಸ್ ಓಡಿಸಲು ಬಿಜೆಪಿ ಶಾಸಕ ಅಭಯ್ ಪಾಲೀಟ್ ಅವರು ಬೆಳಗಾವಿ ಜಿಲ್ಲೆಯಲ್ಲಿ 'ಅಗ್ನಿಹೋತ್ರ' ಹೋಮ, ಹವನ ನಡೆಸಿದ್ದು, ಬಿಜೆಪಿ ನಾಯಕರ ಈ ವರ್ದನೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. 

ಕೊರೋನಾ ಲಾಕ್ಡೌನ್ ಜಾರಿಯಲ್ಲಿದ್ದು, ಈ ನಡುವಲ್ಲೇ ಅಭಯ್ ಪಾಟೀಲ್ ಅವರು ಬೆಳಗಾವಿಯ ಶಿವಾಜಿ ಗಾರ್ಡನ್ ನಲ್ಲಿ ನಿಯಮ ಉಲ್ಲಂಘಿಸಿ ಹೋಮ ಹವನ ನಡೆಸಿದ್ದಾರೆಂದು ತಿಳಿದುಬಂದಿದೆ. 

ಬೆಳಗಾವಿ ಜಿಲ್ಲೆಯ ಗಲ್ಲಿಗಲ್ಲಿಗಳಲ್ಲಿ ಶಾಸಕರ ಸಮ್ಮುಖದಲ್ಲಿ ತಳ್ಳುವ ಗಾಡಿಯಲ್ಲಿ ಮನೆಗಳ ಮುಂದೆ ಅಗ್ನಿಕುಂಡದಂತೆ ಮಾಡಿ ಅದರಲ್ಲಿ ಭೆರಣಿ, ಕರ್ಪೂರ, ತುಪ್ಪ, ಗುಗ್ಗಳ, ಬೇವಿನ ಎಲೆಗಳು, ಅಕ್ಕಿ, ಕವಡಿ ಉದ ಹಾಗೂ ಲವಂಗ ಇನ್ನಿತರ ಗಿಡಮೂಲಿಕೆಗಳ ಪದಾರ್ಥಗಳನ್ನ ಹಾಕಿ ಅದರಿಂದ ಬರುವ ಹೊಗೆ ಸಿಂಪಡಣೆ ಮಾಡಿದ್ದಾರೆ. 

ಸರ್ಕಾರ ಜಾರಿಗೆ ತಂದಿರುವ ನಿಯಮಗಳು ಉಲ್ಲಂಘನೆಯಾಗುತ್ತಿದ್ದರೂ, ಸ್ಥಳದಲ್ಲೇ ಇದ್ದ ಪೊಲೀಸರು ಈ ಬೆಳವಣಿಗೆಗಳನ್ನು ತಡೆಯುವ ಪ್ರಯತ್ನಗಳನ್ನು ಮಾಡಿಲ್ಲ. 

ಹೋಮ, ಹವನ ನಡೆಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಪಾಟೀಲ್ ಅವರು, ಇದು ಭಾರತದ ಪ್ರಾಚೀನ ಔಷಧೀಯ ಸಂಪ್ರದಾಯಗಳನ್ನು ನೆನೆಪಿಸುತ್ತದೆ. ಈ ಹೋಮ, ಹವನವು ಜೂನ್.15ರವರೆಗೂ ಮುಂದುವರೆಯಲಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com