ರಾಜ್ಯ ಸರಾಸರಿಗಿಂತ 16 ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವ್ ಪ್ರಮಾಣ ಅಧಿಕ!

ಕರ್ನಾಟಕದ ರಾಜಧಾನಿ ಬೆಂಗಳೂರು ಕೊರೋನಾ ಹಾಟ್ ಸ್ಪಾಟ್, ಆದರೆ ಆತಂಕಕಾರಿ ವಿಷಯವೊಂದು ಬಹಿರಂಗವಾಗಿದೆ. ಕಳೆದ ಏಳು ದಿನಗಳ ಕೊರೋನಾ ಪಾಸಿಟಿವ್ ದರ ನೋಡಿದರೆ ಕನಿಷ್ಠ 31 ಜಿಲ್ಲೆಗಳಲ್ಲಿ ರಾಜ್ಯದ ಸರಾಸರಿ ಕೊರೋನಾ ಪಾಸಿಟಿವ್ ದರ ಶೇಕಡಾ 19.28ಕ್ಕಿಂತ ಹೆಚ್ಚಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಕೊರೋನಾ ಹಾಟ್ ಸ್ಪಾಟ್, ಆದರೆ ಆತಂಕಕಾರಿ ವಿಷಯವೊಂದು ಬಹಿರಂಗವಾಗಿದೆ. ಕಳೆದ ಏಳು ದಿನಗಳ ಕೊರೋನಾ ಪಾಸಿಟಿವ್ ದರ ನೋಡಿದರೆ ಕನಿಷ್ಠ 31 ಜಿಲ್ಲೆಗಳಲ್ಲಿ ರಾಜ್ಯದ ಸರಾಸರಿ ಕೊರೋನಾ ಪಾಸಿಟಿವ್ ದರ ಶೇಕಡಾ 19.28ಕ್ಕಿಂತ ಹೆಚ್ಚಾಗಿದೆ.

ಈ ಅಂಕಿಅಂಶ ರಾಜ್ಯ ಕೋವಿಡ್ ವಾರ್ ರೂಂನಿಂದ ಸಿಕ್ಕಿದ್ದು, ಬೆಂಗಳೂರು ನಗರದಲ್ಲಿ ಕಳೆದೊಂದು ವಾರದಿಂದ ಪಾಸಿಟಿವ್ ದರ ಕಡಿಮೆಯಾಗಿದ್ದು ಈ 16 ಜಿಲ್ಲೆಗಳಲ್ಲಿ ಜಾಸ್ತಿಯಾಗುತ್ತಿದೆ.ಅದರಲ್ಲಿ ಟಾಪ್ 5 ಜಿಲ್ಲೆಗಳಲ್ಲಿ ಮೊನ್ನೆ ಮೇ 19ರಿಂದ 25ರವರೆಗೆ ಲೆಕ್ಕ ಹಾಕಿ ನೋಡಿದಾಗ, ಮೈಸೂರಿನಲ್ಲಿ ಶೇಕಡಾ 41.32, ಉತ್ತರ ಕನ್ನಡದಲ್ಲಿ ಶೇಕಡಾ 32.98, ಹಾಸನದಲ್ಲಿ ಶೇಕಡಾ 29.93, ತುಮಕೂರು ಶೇಕಡಾ 29.33 ಮತ್ತು ಕೊಪ್ಪಳದಲ್ಲಿ ಶೇಕಡಾ 29.21ರಷ್ಟಿದೆ.

ರಾಜ್ಯ ಕೋವಿಡ್ ವಾರ್ ರೂಂನ ಅಂಕಿಅಂಶ ಪ್ರಕಾರ, ಬೆಂಗಳೂರು ನಗರದಲ್ಲಿ ಪಾಸಿಟಿವ್ ದರ ಕಳೆದೊಂದು ವಾರದಲ್ಲಿ ಶೇಕಡಾ 13.58ರಷ್ಟಿದೆ. ಹಾವೇರಿಯಲ್ಲಿ ಶೇಕಡಾ 13.48, ಬಾಗಲಕೋಟೆಯಲ್ಲಿ ಶೇಕಡಾ 11.67, ಕಲಬುರಗಿಯಲ್ಲಿ ಶೇಕಡಾ 10.20 ಮತ್ತು ಬೀದರ್ ನಲ್ಲಿ ಶೇಕಡಾ 2.58ರಷ್ಟಿದೆ.

ಶಿವಮೊಗ್ಗ ಮತ್ತು ವಿಜಯಪುರದಲ್ಲಿ ರಾಜ್ಯ ಸರಾಸರಿಯಷ್ಟೇ ಪಾಸಿಟಿವ್ ದರವಿದೆ. ರಾಜ್ಯ ಸರಾಸರಿಗಿಂತ 12 ಜಿಲ್ಲೆಗಳಲ್ಲಿ ಮಾತ್ರ ಪಾಸಿಟಿವ್ ದರ ಕಡಿಮೆಯಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ ಶರತ್ ನಾಯಕ್, ಕಳೆದ ವಾರ ಜಿಲ್ಲೆಯಲ್ಲಿ ದಿನಕ್ಕೆ 900ರಿಂದ ಸಾವಿರ ಪಾಸಿಟಿವ್ ದರಗಳು ಬಂದಿವೆ ಎನ್ನುತ್ತಾರೆ.

ನಾವು ಸುಮಾರು 2 ಸಾವಿರ ಪ್ರಾಥಮಿಕ ಸಂಪರ್ಕ ಮತ್ತು 500 ಕೊರೋನಾ ಸೋಂಕು ಲಕ್ಷಣರಹಿತ ಜನರನ್ನು ತಪಾಸಣೆ ಮಾಡಿದ್ದೇವೆ. ಪ್ರತಿ ಪಾಸಿಟಿವ್ ಕೇಸುಗಳು ಬಂದಾಗ ನಾವು ಸುತ್ತಮುತ್ತ 15 ಜನರನ್ನು ತಪಾಸಣೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಉತ್ತರ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ ಶರತ್ ನಾಯಕ್ ಹೇಳುತ್ತಾರೆ. ತುಮಕೂರು ಜಿಲ್ಲೆಯಲ್ಲಿ ಪಾಸಿಟಿವ್ ಸೋಂಕಿತರ ಸಂಖ್ಯೆ ರಾಜ್ಯದ ಸರಾಸರಿಗೆ ಸಮನಾಗಿದೆ.

ಲಾಕ್‌ಡೌನ್ ಮೊದಲು, ಪ್ರತಿದಿನ 60 ಸಾವಿರದಿಂದ 70 ಸಾವಿರ ಮಂದಿ ಬೆಂಗಳೂರು ಮತ್ತು ತುಮಕೂರು ನಡುವೆ ಪ್ರಯಾಣಿಸುತ್ತಿದ್ದರು. ಇಲ್ಲಿ ಕೋವಿಡ್ ವೇಗವಾಗಿ ಹಬ್ಬಿತು ಎಂದು ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ ಎಂ ಬಿ ನಾಗೇಂದ್ರಪ್ಪ ಹೇಳುತ್ತಾರೆ.

ಬೆಂಗಳೂರು-ಮೈಸೂರು ಮಧ್ಯೆ ಕೂಡ ಓಡಾಟ ಹೆಚ್ಚಾಗಿತ್ತು. ಕೊಪ್ಪಳದಲ್ಲಿ ಸೋಂಕಿನ ಹರಡುವಿಕೆಯ ಪ್ರಮಾಣ ಇನ್ನೂ ಹೆಚ್ಚಾಗಿದೆ. ಲಾಕ್ ಡೌನ್ ನಂತರ ಕಡಿಮೆಯಾಗಿದೆ ಎಂದು ವಿಚಕ್ಷಣಾ ಅಧಿಕಾರಿ ಡಾ.ನಂದಾ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com