ಸಂಗ್ರಹ ಚಿತ್ರ
ರಾಜ್ಯ
ರಾಜ್ಯಕ್ಕೆ 19ನೇ ಆಮ್ಲಜನಕ ಎಕ್ಸ್‌ಪ್ರೆಸ್ ಆಗಮನ
ಭಾರತೀಯ ರೈಲ್ವೆಯ ವಿಶೇಷ ಆಕ್ಸಿಜನ್ ಎಕ್ಸ್‌ಪ್ರೆಸ್ ಭಾನುವಾರ ನಗರದ ಹೊರವಲಯದಲ್ಲಿರುವ ಕಂಟೈನರ್ ಡಿಪೋ ವೈಟ್‌ಫೀಲ್ಡ್ ತಲುಪಿತು.
ಬೆಂಗಳೂರು: ಭಾರತೀಯ ರೈಲ್ವೆಯ ವಿಶೇಷ ಆಕ್ಸಿಜನ್ ಎಕ್ಸ್‌ಪ್ರೆಸ್ ಭಾನುವಾರ ನಗರದ ಹೊರವಲಯದಲ್ಲಿರುವ ಕಂಟೈನರ್ ಡಿಪೋ ವೈಟ್‌ಫೀಲ್ಡ್ ತಲುಪಿತು.
ಇದು ರಾಜ್ಯಕ್ಕೆ ಆಗಮಿಸಿರುವ 19ನೇ ಆಮ್ಲಜನಕ ಎಕ್ಸ್‌ಪ್ರೆಸ್ ಆಗಿದ್ದು, 6 ಕ್ರಯೋಜೆನಿಕ್ ಕಂಟೇನರ್‌ಗಳಿಂದ 120 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಅನ್ನು ಹೊತ್ತು ತಂದಿದೆ.
ಇಲ್ಲಿಯವರೆಗೆ ರಾಜ್ಯಕ್ಕೆ ರೈಲ್ವೆ ಮೂಲಕ 2236.53 ಟನ್ ದ್ರವ ವೈದ್ಯಕೀಯ ಆಮ್ಲಜನಕ ಪೂರೈಕೆಯಾಗಿದೆ ಎಂದು ನೈಋತ್ಯ ರೈಲ್ವೆ (ಎಸ್‌ಡಬ್ಲ್ಯುಆರ್) ಭಾನುವಾರ ಹೇಳಿಕೆ ಬಿಡುಗಡೆ ಮಾಡಿದೆ.
ಭಾರತೀಯ ರೈಲ್ವೆ ಇದುವರೆಗೆ 305 ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳನ್ನು ಸಂಚರಿಸಿವೆ ಮತ್ತು 1237 ಟ್ಯಾಂಕರ್‌ಗಳಲ್ಲಿ 20,000 ಟನ್‌ಗಳಷ್ಟು ದ್ರವ ವೈದ್ಯಕೀಯ ಆಮ್ಲಜನಕವನ್ನು ಸಾಗಿಸಿದೆ ಮತ್ತು 15 ರಾಜ್ಯಗಳಿಗೆ ಒದಗಿಸಿದೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ