ಕೈಗಾರಿಕಾ ವಲಯಗಳಿಗೆ ದುಃಸ್ವಪ್ನವಾಗಿ ಪರಿಣಮಿಸಿದ ಕ್ಯಾಂಪಸ್ ಉದ್ಯೋಗಗಳು!

ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಕಂಪನಿಗೆ ಸೇರುವ ವಿದ್ಯಾರ್ಥಿಗಳು ಅತಿ ಶೀಘ್ರದಲ್ಲಿ ಕೆಲಸ ಬಿಡುವ ಪ್ರವೃತ್ತಿಯನ್ನು ಹೊಂದಿದ್ದು, ಈ ಬೆಳವಣಿಗೆಯು ಕೈಗಾರಿಕಾ ವಲಯಗಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಕಂಪನಿಗೆ ಸೇರುವ ವಿದ್ಯಾರ್ಥಿಗಳು ಅತಿ ಶೀಘ್ರದಲ್ಲಿ ಕೆಲಸ ಬಿಡುವ ಪ್ರವೃತ್ತಿಯನ್ನು ಹೊಂದಿದ್ದು, ಈ ಬೆಳವಣಿಗೆಯು ಕೈಗಾರಿಕಾ ವಲಯಗಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲು ಬರುವ ವಿದ್ಯಾರ್ಥಿಗಳು ಅಲ್ಲಿನ ನೀತಿಗಳನ್ನು ಅರ್ಥ ಮಾಡಿಕೊಳ್ಳುವುದು ಪ್ರಮುಖವಾಗಿದೆ. ಆದರೆ, ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿದ್ಯಾರ್ಥಿಗಳು ವಿಫಲರಾಗುತ್ತಿರುವುದು. ಶೀಘ್ರಗತಿಯಲ್ಲಿ ಕೆಲಸಗಳ ತೊರೆಯಲು ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಈ ವಿಚಾರದ ಕುರಿತು ಎನ್ಇಪಿ ಕಾಂಕ್ಲೇವ್ ನಲ್ಲಿ ತಜ್ಞರು ಚರ್ಚೆ ನಡೆಸಿದ್ದು, ಸೀಸನಲ್ ಪ್ಲೇಸ್‌ಮೆಂಟ್'ಗಳನ್ನು ನಿಲ್ಲಿಸಿ, ಸೂಕ್ತ ಸಮಯಕ್ಕೆ ಸಂವಹನ ನಡೆಸಿ, ಇಂಟರ್ನ್ ಶಿಪ್ ಗಳನ್ನು ನಡೆಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಇದಕ್ಕೆ ಸಮ್ಮತಿಸಿ ಅಂತಾರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮದ ವತಿಯಿಂದ ನಡೆದ ಘಟಿಕೋತ್ಸವದಲ್ಲಿ ಮಾತನಾಡಿದ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಡಿಜಿಎಂ ಕವಿತಾ ಗೌಡ ಅವರು, ಭವಿಷ್ಯದಲ್ಲಿ ಯಾವ ರೀತಿಯ ಕೆಲಸಗಳನ್ನು ಮಾಡಬೇಕೆಂಬ ಕುರಿತು ಅರಿವಿಲ್ಲದೆ ವಿದ್ಯಾರ್ಥಿಗಳು ಕಾಲೇಜು ಸೇರುತ್ತಾರೆಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಮಾಡುವ ಕೆಲಸ ಪರಿಚಯವಿರುವುದಿಲ್ಲ. ಕೆಲಸ ಮಾಡುವಾಗ ತಮ್ಮ ಹೊಣೆಗಾರಿಕೆ, ಜವಾಬ್ದಾರಿ ಕುರಿತು ಅರಿವಿರುವುದಿಲ್ಲ. ಶಿಸ್ತುಗಳನ್ನು ಅನುಸರಿಸುವುದು ಸಾಧ್ಯವಾಗದೆ ಸಾಕಷ್ಟು ವಿದ್ಯಾರ್ಥಿಗಳು ಕೆಲಸ ಬಿಡುತ್ತಿದ್ದಾರೆಂದು ಜಾಗತಿಕ ಕಲಿಕಾ ವ್ಯವಹಾರದ ಪಾಲುದಾರೆ ಅನುರಾಧ ವರ್ಮಾ ಅವರು ಹೇಳಿದ್ದಾರೆ.

ಭಾರತದಲ್ಲಿ ಉನ್ನತ ಶಿಕ್ಷಣದ ಅಂತರಾಷ್ಟ್ರೀಯೀಕರಣಕ್ಕಾಗಿ ಕೆಲಸ ಮಾಡುವ ಇಕೋಸಾಲ್ ಗ್ಲೋಬಲ್‌ನ ನಿರ್ದೇಶಕರಾದ ಸಮೀರಾ ಫೆರ್ನಾಂಡಿಸ್ ಅವರು ಮಾತನಾಡಿ, ಇಂಟರ್ನ್‌ಶಿಪ್‌ಗಳು ವಿದ್ಯಾರ್ಥಿಗಳಿಗೆ ಆರಂಭಿಕ ವರ್ಷಗಳಲ್ಲಿ ವಿವಿಧ ಉದ್ಯೋಗದ ಪಾತ್ರಗಳ ಕುರಿತು ತಿಳಿಯಲು, ಅನ್ವೇಷಿಸಲು ಸಹಾಯ ಮಾಡುತ್ತದೆ. ಇದರಿಂದ ಅವರಿಗೆ ತಾವು ಮಾಡುವ ಕೆಲಸದ ಕುರಿತು ತಿಳಿದುಕೊಳ್ಳುವಂತಾಗುತ್ತದೆ. ಇದು ಅವರನ್ನು ಫ್ರೆಶರ್‌ಗಳಂಬ ಟ್ಯಾಗ್‌ನಿಂದ ಮುಕ್ತಗೊಳಿಸುತ್ತದೆ. ವಿದ್ಯಾರ್ಥಿಗಳು ಪದವಿ ಪಡೆಯುವ ಹೊತ್ತಿಗೆ ಆರು ವಿಭಿನ್ನ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವವನ್ನೂ ಪಡೆಯುವಂತಾಗುತ್ತದ. ಇದೇ ವೇಳೆ ಇದು ಕಂಪನಿಗಳಿಗೆ ತರಬೇತಿ ವೆಚ್ಚವನ್ನೂ ಕೂಡ ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.  

ಕೊಯಮತ್ತೂರಿನ ಜಿಆರ್‌ಡಿ ಸಮೂಹ ಸಂಸ್ಥೆಗಳ ನಿರ್ದೇಶಕ ಕೆ ಕೆ ರಾಮಚಂದ್ರನ್ ಅವರು ಮಾತನಾಡಿ, ದೌರ್ಬಲ್ಯಗಳನ್ನು ಸರಿಪಡಿಸುವತ್ತ ಗಮನ ಹರಿಸುವುದಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ಸಾಮರ್ಥ್ಯಗಳನ್ನು ಕಂಡುಹಿಡಿಯುವತ್ತ ಗಮನ ಹರಿಸಬೇಕು ಎಂದು ಒತ್ತಿ ಹೇಳಿದ್ದಾರೆ.

ಭಾರತೀಯ ಶಿಕ್ಷಣ ವ್ಯವಸ್ಥೆಯು ಅಂತಹ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ, ನಾವು ವ್ಯಕ್ತಿಯ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಅವರ ದೌರ್ಬಲ್ಯದ ಮೇಲೆ ಹೆಚ್ಚು ಗಮನಹರಿಸುತ್ತೇವೆ. ವೃತ್ತಿಪರ ವಾಸ್ತವಗಳ ಬಗ್ಗೆ ಅವರಿಗೆ ಸಲಹೆ ಮತ್ತು ಕಲಿಸುವುದು ಅಗತ್ಯವಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com