ಬೆಂಗಳೂರು ಟೆಕ್ ಸಮ್ಮಿಟ್ 2021: ಇನ್ಫೋಸಿಸ್ ಗೆ 'ಕರ್ನಾಟಕದ ಐಟಿ ರತ್ನ' ಪ್ರಶಸ್ತಿ
ಬೆಂಗಳೂರು: ಐಟಿ ರಫ್ತಿನಲ್ಲಿ ವಿಶೇಷ ಸಾಧನೆ ತೋರಿದ ಐಟಿ ದಿಗ್ಗಜ ಕಂಪೆನಿ ಇನ್ಫೋಸಿಸ್ ಗೆ ಐಟಿ ರತ್ನ ಕರ್ನಾಟಕ ಪ್ರಶಸ್ತಿ ಸಿಕ್ಕಿದೆ. 10ಸಾವಿರ ಕೋಟಿಗಿಂತ ಅಧಿಕ ವರ್ಷದಲ್ಲಿ ವಹಿವಾಟು ನಡೆಸಿದ ಭಾಗದಲ್ಲಿ ಇನ್ಫೋಸಿಸ್ ಗೆ ಪ್ರಶಸ್ತಿ ಸಿಕ್ಕಿದೆ.
ಇನ್ಫೋಸಿಸ್ ಜೊತೆಗೆ ವಿಪ್ರೊ, ಮೈಂಡ್ ಟ್ರೀ, ಟಿಸಿಎಸ್ ಸೇರಿದಂತೆ 20 ಕಂಪೆನಿಗಳಿಗೆ ಸಹ ಐಟಿ ರತ್ನ ಕರ್ನಾಟಕ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮ್ಮಿತ್ ನಲ್ಲಿ ನೀಡಲಾಗಿದೆ. ರಾಜ್ಯ ಸರ್ಕಾರ ಮತ್ತು ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ಜಂಟಿಯಾಗಿ ಈ ಪ್ರಶಸ್ತಿ ನೀಡಿವೆ.
ಈ ಮಧ್ಯೆ, ಚಿಮೆರಾ ಟೆಕ್ನಾಲಜೀಸ್ ಸಹ-ಸಂಸ್ಥಾಪಕಿ ಮತ್ತು ಸಿಇಒ ಪದ್ಮಾ ದೊರೈಸ್ವಾಮಿ ಅವರು 'ವರ್ಷದ ಮಹಿಳಾ ಉದ್ಯಮಿ-ಐಟಿ' ಪ್ರಶಸ್ತಿ ಮತ್ತು 'ರಫ್ತುಗಳಲ್ಲಿ ಹೆಚ್ಚಿನ ಬೆಳವಣಿಗೆ- ಐಟಿ/ಐಟಿಇಎಸ್' ಪ್ರಶಸ್ತಿಯನ್ನು ಪಡೆದಿದ್ದಾರೆ. ವರ್ಷದಲ್ಲಿ ಸಾವಿರ ಕೋಟಿಯಿಂದ 2 ಸಾವಿರ ಕೋಟಿಯವರೆಗೆ ರಫ್ತು ನಡೆಸಿದ ಕಂಪೆನಿಗಳು ಮತ್ತು ಅದರ ಮಾಲೀಕರಿಗೆ ಈ ಪ್ರಶಸ್ತಿ ನೀಡಲಾಗಿದೆ. ಸ್ಟ್ಯಾಂಡರ್ಡ್ ಚಾರ್ಟರ್ಡ್ ಗ್ಲೋಬಲ್ ಬ್ಯುಸಿನೆಸ್ ಸರ್ವೀಸಸ್‌ನಿಂದ ಈ ಪ್ರಶಸ್ತಿಯನ್ನು ನೀಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ