ಉತ್ತರಾಖಂಡ ಪ್ರವಾಹ: ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರದ ಸಹಾಯವಾಣಿ ಆರಂಭ

ಉತ್ತರಾಖಂಡದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಪ್ರವಾಹ ಪರಿಸ್ಥಿತಿ ಮತ್ತೆ ತಲೆ ದೋರಿದ್ದು. ಪ್ರವಾಹದಲ್ಲಿ ಸಿಲುಕಿದ   ಕರ್ನಾಟಕದ ಜನರ ಸಹಾಯಕ್ಕೆ ರಾಜ್ಯ ಸರ್ಕಾರ ಸಹಾಯವಾಣಿ ಸ್ಥಾಪಿಸಿದೆ.
ಉತ್ತರಾಖಂಡ್ ನಲ್ಲಿನ ಮಳೆ ಪರಿಸ್ಥಿತಿ
ಉತ್ತರಾಖಂಡ್ ನಲ್ಲಿನ ಮಳೆ ಪರಿಸ್ಥಿತಿ
Updated on

ಬೆಂಗಳೂರು: ಉತ್ತರಾಖಂಡದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಪ್ರವಾಹ ಪರಿಸ್ಥಿತಿ ಮತ್ತೆ ತಲೆ ದೋರಿದ್ದು. ಪ್ರವಾಹದಲ್ಲಿ ಸಿಲುಕಿದ   ಕರ್ನಾಟಕದ ಜನರ ಸಹಾಯಕ್ಕೆ ರಾಜ್ಯ ಸರ್ಕಾರ ಸಹಾಯವಾಣಿ ಸ್ಥಾಪಿಸಿದೆ.

ಈ ಕುರಿತು ರಾಜ್ಯ ಸರ್ಕಾರ ಪ್ರಕಟಣೆ  ಹೊರಡಿಸಿದ್ದು, 'ಉತ್ತರಾಖಂಡದ ಪ್ರವಾಹದಲ್ಲಿ ಜನರು, ಪ್ರಯಾಣಿಕರು, ಯಾತ್ರಿಕರು, ಪ್ರವಾಸಿಗರು ಮತ್ತು ಸಂದರ್ಶಕರು ಸಿಲುಕಿಕೊಂಡಿದ್ದರೆ ಅವರ ಸಂಬಂಧಿಕರು, ಸ್ನೇಹಿತರು ಈ ಹೆಲ್ಪ್‌ ಡೆಸ್ಕ್‌ ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಅವರು ಹೇಳಿದ್ದಾರೆ.

ಉತ್ತರಾಖಂಡದಲ್ಲಿ ಸಿಲುಕಿರುವ ಕನ್ನಡಿಗರು ಅಥವಾ ಅವರ ಸಂಬಂಧಿಕರು ಈ ಸಹಾಯವಾಣಿಯನ್ನು ಸಂಪರ್ಕಿಸಬಹುದು ಮತ್ತು ಉತ್ತರಾಖಂಡದ​ ನೆರೆಯಲ್ಲಿ ಸಿಲುಕಿರುವವರ ಬಗ್ಗೆ ಮಾಹಿತಿ ನೀಡಬಹುದು. ಅದನ್ನು ಅಲ್ಲಿನ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟವರಿಗೆ ಕಾರ್ಯಾಚರಣೆಗೆ ಸಹಾಯವಾಗುವಂತೆ ಕಳುಹಿಸಿಕೊಡಲಾಗುತ್ತದೆ. ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದ ತುರ್ತು ಸಹಾಯವಾಣಿ ಸಂಖ್ಯೆ: 080 – 1070 (Toll Free) ಮತ್ತು 080 – 2234 0676 -ಈ ಸಂಖ್ಯೆಯು ದಿನದ ಎಲ್ಲಾ ಸಮಯದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಮಾಹಿತಿ ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com