ಮೈಕ್ರೋ ಬ್ಲಾಗಿಂಗ್‌ ವೇದಿಕೆ ಕೂ ನಲ್ಲಿ ಕನ್ನಡ ಕಲರವ: ಕನ್ನಡದ ಬಗೆಗಿನ ಕೂ ನಿಂದ ಬಹುಮಾನ ಗೆಲ್ಲುವ ಅವಕಾಶ

ಬಹು - ಭಾಷೆಯ ಮೈಕ್ರೋ ಬ್ಲಾಗಿಂಗ್ ವೇದಿಕೆಯಾದ 'ಕೂ' ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಸಂಭ್ರಮಿಸುವವರಿಗೆ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದೆ.
ಮೈಕ್ರೋ ಬ್ಲಾಗಿಂಗ್‌ ವೇದಿಕೆ ಕೂ ನಲ್ಲಿ ಕನ್ನಡ ಕಲರವ: ಕನ್ನಡದ ಬಗೆಗಿನ ಕೂ ನಿಂದ ಬಹುಮಾನ ಗೆಲ್ಲುವ ಅವಕಾಶ
Updated on

ಬೆಂಗಳೂರು: ಕನ್ನಡ ರಾಜ್ಯೋತ್ಸವನ್ನು ಮೈಕ್ರೋ ಬ್ಲಾಗಿಂಗ್‌ ವೇದಿಕೆಯಾಗಿರುವ ಕೂ ನಲ್ಲಿ ವಿಶಿಷ್ಟವಾಗಿ ಆಚರಿಸಲು ವಿಶೇಷ ಅವಕಾಶವನ್ನು ಒದಗಿಸಲಾಗಿದೆ. ಕನ್ನಡ ಭಾಷೆಯನ್ನು ಸಂಭ್ರಮಿಸುವವರಿಗೆ ಬಹು - ಭಾಷೆಯ ಮೈಕ್ರೋ ಬ್ಲಾಗಿಂಗ್ ವೇದಿಕೆಯಾದ 'ಕೂ' ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದೆ.

ಕರ್ನಾಟಕ ರಾಜ್ಯೋತ್ಸವ ಕೇವಲ ಒಂದು ದಿನದ ಆಚರಣೆಯಲ್ಲ. ಕನ್ನಡ ನಾಡು ಮತ್ತು ಭಾಷೆ ಮೇಲಿನ ನಮ್ಮ ಪ್ರೀತಿ ನಿರಂತರವಾದದ್ದು. ತಿಂಗಳು ಪೂರ್ತಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮಿಸಲು 'ಕೂ' ಈ ಸ್ಪರ್ಧೆಯ ಮೂಲಕ ಅವಕಾಶ ಕಲ್ಪಿಸಿದೆ. ಅಕ್ಟೋಬರ್ 27ರಿಂದ ಆರಂಭವಾಗಿರುವ ಈ ಸ್ಫರ್ಧೆ ನವೆಂಬರ್ 28ರ ವರೆಗೆ ನಡೆಯಲಿದೆ. ಪ್ರತಿ ದಿನವೂ ಒಂದೊಂದು ವಿಷಯದ ಕುರಿತು ಬಳಕೆದಾರರು ಪೋಸ್ಟ್ ರಚಿಸಿ ಕೂ ನಲ್ಲಿ ಪ್ರಕಟಿಸಬೇಕು. ಅತಿ ಹೆಚ್ಚು ಲೈಕ್ ಪಡೆಯುವ ಅದೃಷ್ಟಶಾಲಿಗಳು ಆಕರ್ಷಕ ಬಹುಮಾನಗಳನ್ನು ಗೆಲ್ಲಲಿದ್ದಾರೆ. ಮೈಕ್ರೋ ಬ್ಲಾಗಿಂಗ್‌ ವೇದಿಕೆಯಲ್ಲಿ ಇಂತಹ ಮೊದಲ ಪ್ರಯತ್ನ ಇದಾಗಿದೆ. 

#ಕೂಕವನವಾಚನ #ಕನ್ನಡದಇತಿಹಾಸ #ಕರ್ನಾಟಕದಮೇರುವ್ಯಕ್ತಿತ್ವಗಳು, #ಕನ್ನಡಧ್ವಜಾರೋಹಣ #ನನ್ನನೆಚ್ಚಿನಸಾಹಿತಿ #ಕೂನಲ್ಲಿಪುಸ್ತಕಪರಿಚಯ #ಕರುನಾಡಜಲಮೂಲಗಳು #ಕರುನಾಡವಾಸ್ತುಶಿಲ್ಪ #ಕರುನಾಡಕಥೆಗಾರ #ಕರುನಾಡಹಬ್ಬಗಳು #ನಮ್ಮೂರಜಾತ್ರೆಯಸಂಭ್ರಮ #ನಮ್ಮಆಚರಣೆ #ಕರುನಾಡಆಹಾರ #ಕನ್ನಡವೇನಮ್ಮಮ್ಮ #ಭಾಷಾವೈವಿಧ್ಯ  #ನಾನುಕನ್ನಡಿಗ ಹೀಗೆ ವಿವಿಧ ಹ್ಯಾಷ್ ಟ್ಯಾಗ್ ಜೊತೆಗೆ ಅದಕ್ಕೆ ಪೂರಕವಾದ ನಿಮ್ಮ ಅನಿಸಿಕೆಗಳನ್ನು ಕೂ ಮಾಡಬಹುದಾಗಿದೆ.

‘ಕೂ' ಕರ್ನಾಟಕ ರಾಜ್ಯೋತ್ಸವ ಸ್ಪರ್ಧೆ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಭೇಟಿ ನೀಡಿ.  
https://www.kooapp.com/koo/kookannadahabba/1b6a8a61-d14f-4464-9319-8d1dc7d58301

ಕೂ ಡೌನ್ಲೋಡ್ ಮಾಡಿ: ಆಂಡ್ರಾಯ್ಡ್ ಮತ್ತು ಐಒಎಸ್ ಸ್ಟೋರ್‌ಗಳಲ್ಲಿ ಬಳಕೆದಾರರಿಗೆ ಡೌನ್‌ಲೋಡ್ ಮಾಡಲು ಅಪ್ಲಿಕೇಶನ್ ಲಭ್ಯವಿದೆ. ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಮೂಲಕ ನೋಂದಾಯಿಸಿಕೊಳ್ಳುವ ಅವಕಾಶವಿದೆ. ನೋಂದಣಿ ಪೂರ್ಣಗೊಂಡ ನಂತರ, ಅವರು ತಮ್ಮ ನೆಚ್ಚಿನ ಸೆಲೆಬ್ರಿಟಿಗಳು, ಕ್ರೀಡಾಪಟುಗಳು, ರಾಜಕಾರಣಿಗಳು, ಮನರಂಜಕರು ಮತ್ತು ನೆಚ್ಚಿನ ನಾಯಕರನ್ನು ಅನುಸರಿಸಬಹುದು

Related Article

ಶಾಲಾ-ಕಾಲೇಜುಗಳಲ್ಲಿ ಕನ್ನಡ ಕಡ್ಡಾಯಕ್ಕಾಗಿ ಹೋರಾಟ ಮುಂದುವರಿಸುತ್ತೇವೆ: ಸಿಎಂ ಬೊಮ್ಮಾಯಿ

'ಕನ್ನಡಕ್ಕಾಗಿ ನಾವು' ಅಭಿಯಾನ: ರಾಜ್ಯದಾದ್ಯಂತ ಏಕಕಾಲದಲ್ಲಿ ಕನ್ನಡ ಗೀತಗಳ ಗಾಯನ; ಸಂಕಲ್ಪ!

'ಕಲಿ'ಕಾಲ: ಕನ್ನಡ ಕಲಿಕೆಯಲ್ಲಿ ಗೌರ್ನರ್; ನೆನ್ನೆಯಲ್ಲಿ ನಾಳೆ ಕಲಿಯುತ್ತಿರುವ ನಾಯ್ಡು; ರಣ ನೀತಿ ಕಲಿಸುತ್ತಿರುವ ಶಾ!

ಕನ್ನಡವನ್ನು ಅಪಮಾನಿಸುವ ಎಂಇಎಸ್ ಪುಂಡರಿಗೆ ತಕ್ಕ ಶಾಸ್ತಿ ಮಾಡಿ: ಸರ್ಕಾರಕ್ಕೆ ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಕಲಿಕೆ ಕಡ್ಡಾಯ ನೀತಿ ಮರುಪರಿಶೀಲನೆ ನಡೆಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಕನ್ನಡ ರಾಜ್ಯೋತ್ಸವ: 1000ಕ್ಕೂ ಹೆಚ್ಚು ಸ್ಥಳ, 5 ಲಕ್ಷ ಕಂಠಗಳಲ್ಲಿ ಕನ್ನಡ ಗೀತೆ ಗಾಯನ!

ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ: ಸಿಎಂ ಬೊಮ್ಮಾಯಿ

"ಮಾತಾಡ್ ಮಾತಾಡ್ ಕನ್ನಡ" ಮನೆಮನ ತಲುಪಿಸಲು ಮುಂದಾದ ಸುನೀಲ್ ಕುಮಾರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com