ಬೆಂದ ಕಾಳೂರಿನ ಮಣ್ಣು ವಡ್ಡರ ಸ್ಮರಿಸುವ 'ನಮ್ಮ ಊರು ನಮ್ಮ ನೀರು' ಕಾವ್ಯ ಸಂಜೆ ಕಾರ್ಯಕ್ರಮ

ಭವಿಷ್ಯದಲ್ಲಿ ನೀರು ಬತ್ತಿಹೋಗುವ ಅಪಾಯವನ್ನು ಎದುರಿಸುತ್ತಿರುವ ಪ್ರಪಂಚದ 11 ನಗರಗಳಲ್ಲಿ ಬೆಂಗಳೂರು ಕೂಡಾ ಒಂದು. ನೀರಿನ ಸಂರಕ್ಷಣೆ ಕಾರ್ಯದಲ್ಲಿ ಕೈಯಿಂದ ಬಾವಿ ತೋಡುವ ಪ್ರಾಚೀನ ಪದ್ಧತಿ ನೆರವಾಗಬಲ್ಲುದು. ಈ ಪುಣ್ಯಕಾರ್ಯದಲ್ಲಿ ಆಪತ್ಬಾಂಧವರಾಗಿ ಒದಗಿಬಂದಿರುವ ಮಣ್ಣು ಒಡ್ಡರ ಸಮುದಾಯಕ್ಕೆ ಗೌರವ ಸಲ್ಲಿಸುತ್ತಿದೆ ಕವಯಿತ್ರಿ ಮಮತಾ ಸಾಗರ ಅವರ ಕಾವ್ಯ ಸಂಜೆ ತಂಡ.
ಕವಿತಾ ವಾಚನ ಮಾಡುತ್ತಿರುವ ಕವಯಿತ್ರಿ ಮಮತಾ ಸಾಗರ (ಸಂಗ್ರಹ ಚಿತ್ರ)
ಕವಿತಾ ವಾಚನ ಮಾಡುತ್ತಿರುವ ಕವಯಿತ್ರಿ ಮಮತಾ ಸಾಗರ (ಸಂಗ್ರಹ ಚಿತ್ರ)

ಬೆಂಗಳೂರು: ಕೈಯಿಂದ ಬಾವಿ ತೋಡುವ ಪಾರಂಪರಿಕ ಕೌಶಲ್ಯವನ್ನು ಕಾಪಿಟ್ಟುಕೊಂಡು ಬಂದಿರುವ ಮಣ್ಣು ವಡ್ಡರ ಸಮುದಾಯದ ಕಾರ್ಯವನ್ನು ಸಂಭ್ರಮಿಸುವ ಪ್ರಯುಕ್ತ ಕಾವ್ಯ ಸಂಜೆ ತಂಡ ಸೆಪ್ಟೆಂಬರ್ 4ರಂದು ಸಂಜೆ 5ಗಂಟೆಗೆ ಕವಿತಾ ವಾಚನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ನೋಂದಣಿಗೆ QR ಕೋಡ್

ಆಸಕ್ತರು ವರ್ಚುವಲ್ ಆಗಿ ಕಾರ್ಯಕ್ರೆಮದಲ್ಲಿ ಪಾಲ್ಗೊಳ್ಳಬಹುದು. ಪಾಲ್ಗೊಳ್ಲುವ ಮೊದಲು ಇಲ್ಲಿ ನೀಡಲಾಗಿರುವ ಕ್ಯು ಆರ್ ಕೋಡ್ ಬಳಸಿ ನೋಂದಣಿ ಮಾಡಿಕೊಳ್ಳಬೇಕು.

ಬೆಂಗಳೂರಿನ ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದಲ್ಲಿ ಮಣ್ಣು ವಡ್ಡರ ಕೆಲಸವನ್ನು ಗೋಡೆಚಿತ್ರಗಳ ಮೂಲಕ ಕಲಾತ್ಮಕವಾಗಿ ಪ್ರದರ್ಶಿಸಲಾಗಿದೆ. ಈ ಕಲೆಯ ಧ್ಯೇಯವನ್ನು, ಬೆಂಗಳೂರಿನಲ್ಲಿನ ನೀರಿನ ದುಸ್ಥಿತಿಯನ್ನು ತಮ್ಮ ಕೆಲಸಗಳ ಮೂಲಕ ಪರಿವರ್ತನೆ ಮಾಡುತ್ತಿರುವ ಮಣ್ಣು ವಡ್ಡರನ್ನು ಈ ಕಾರ್ಯಕ್ರಮದ ಮುಖಾಂತರ ನೋಡಬಹುದು. 

ಕವಿತೆಯ ಮೂಲಕ ಜೀವನ ಪರಿಚಯ

ಕಾವ್ಯಸಂಜೆ ತಂಡದ ಕವಿಗಳ ಮೂಲಕ ಮಣ್ಣು ವಡ್ಡರ ಬಗ್ಗೆ ತಿಳಿದುಕೊಳ್ಳಬಹುದು. ತಂಡದ ಕವಿಗಳಾದ  ಸಿದ್ಧಾರ್ಥ, ಚಾಂದ್ ಪಾಶಾ, ದಾದಾಪೀರ್ ಜೈಮನ್, ಶಶಾಂಕ್ ಜೊಹ್ರಿ, ರೇಷ್ಮಾ ರಮೇಶ್ ಮತ್ತು ಮಮತಾ ಸಾಗರ ಅವರು ಆಂಗ್ಲ ಮತ್ತು ಕನ್ನಡದ ಕವಿತೆಗಳನ್ನು ವಾಚಿಸಲಿದ್ದಾರೆ. 

ಕಾವ್ಯ ಸಂಜೆ ತಂಡ, ಸೃಷ್ಟಿ ಮಣಿಪಾಲ್ ಇನ್ಸ್ ಟಿಟ್ಯೂಟ್ ಆಫ್ ಡಿಸೈನ್ ಅಂಡ್ ಟೆಕ್ನಾಲಜಿ 'ಆರ್ಟ್ ಇನ್ ಟ್ರಾನ್ಸಿಟ್' ಪ್ರಾಜೆಕ್ಟ್, BIOME ಮತ್ತು BSF ಸಹಯೋಗದಲ್ಲಿ ಈ ಕಾರ್ಯಕ್ರಮ ಮೂಡಿಬರುತ್ತಿದೆ.

ಕಳೆದ 7 ವರ್ಷಗಳಿಂದ ಸೃಷ್ಟಿ ಮಣಿಪಾಲ್ ಇನ್ಸ್ ಟಿಟ್ಯೂಟ್  ಆಫ್ ಡಿಸೈನ್ ಅಂಡ್ ಟೆಕ್ನಾಲಜಿ 'ಆರ್ಟ್ ಇನ್ ಟ್ರಾನ್ಸಿಟ್' ಪ್ರಾಜೆಕ್ಟ್ ನಲ್ಲಿ ತೊಡಗಿಕೊಂಡಿದೆ. ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಮತ್ತು ಕಲಾವಿದರ ನಡುವೆ ಸಂಪರ್ಕ ಸೇತು ನಿರ್ಮಿಸುವ ಕಾರ್ಯದಲ್ಲಿ ನಿರತವಾಗಿದ್ದೇವೆ. ಮೆಟ್ರೊ ನಿಲ್ದಾಣಗಳ ಗೋಡೆಗಳ ಮೇಲೆ ಸಾಮಾಜಿಕ ಸಂದೇಶ ಸಾರುವ ಕಲಾರಚನೆಯಲ್ಲಿ ನಿರತರಾಗಿದ್ದೇವೆ.

- ಶ್ಯಾಂ ಮೆನನ್, ನಿರ್ದೇಶಕರು, ಸೃಷ್ಟಿ ಮಣಿಪಾಲ್ ಇನ್ಸ್ ಟಿಟ್ಯೂಟ್  ಆಫ್ ಡಿಸೈನ್ ಅಂಡ್ ಟೆಕ್ನಾಲಜಿ

ಈ ನಗರಕ್ಕೆ ಏನಾಗಿದೆ?

ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ನೂರಾರು ಕೆರೆಗಳಿಂದ ತುಂಬಿ ತುಳುಕುತ್ತಿದ್ದವು ಎಂದು ಹೇಳಿದರೆ ಈಗಿನವರು ನಂಬುವುದು ಸ್ವಲ್ಪ ಕಷ್ಟ ಆ ಕಾಲಘಟ್ಟದಲ್ಲಿ ನಾವಿದ್ದೇವೆ. ಬೆಂಗಳೂರು ನಗರ ವಾಸಿಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳಲ್ಲಿ ಪ್ರಮುಖವಾದುದು ನೀರಿನ ಸಮಸ್ಯೆ. 

ನೀರಿಗಾಗಿ ಇಲ್ಲಿನ ನಿವಾಸಿಗಳು ನಗರದಿಂದ 100 ಕಿ.ಮೀ ದೂರದ ಕಾವೇರಿ ನದಿಯನ್ನು ಅವಲಂಬಿಸಿದ್ದಾರೆ. ಭವಿಷ್ಯದಲ್ಲಿ ಟ್ಯಾಪಿನಲ್ಲಿ ನೀರು ಬತ್ತಿಹೋಗುವ ಅಪಾಯವನ್ನು ಎದುರಿಸುತ್ತಿರುವ ಪ್ರಪಂಚದ 11 ನಗರಗಳಲ್ಲಿ ಬೆಂಗಳೂರು ಕೂಡಾ ಒಂದು ಎಂದು ಸಂಶೋಧನೆ ಹೇಳುತ್ತದೆ. 

ಫೆಸ್ಟಿವಲ್ ಆಫ್ ಸ್ಟೋರೀಸ್ ಎನ್ನುವ ಹೆಸರಿನಲ್ಲಿ ಹಲವು ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದೆವು. ನಗರದ ವಿದ್ಯಾರ್ಥಿ ವೃಂದ, ಕಲಾವಿದರನ್ನು ಒಂದೆಡೆ ಸೇರಿಸುವ ಉದ್ದೇಶ ನಮ್ಮದು. ಈ ಬಾರಿ ಕಾವ್ಯ ಸಂಜೆ ತಂಡದ ಜೊತೆಗೂಡಿ ನಮ್ಮ ಊರು ನಮ್ಮ ನೀರು ಕಾರ್ಯಕ್ರಮದ ಮೂಲಕ ಬೆಂಗಳೂರಿನ ಮಣ್ಣು ವಡ್ಡರ ಸಮುದಾಯಕ್ಕೆ ಗೌರವ ಸಲ್ಲಿಸುವ ಉದ್ದೇಶ ನಮ್ಮದು.  

- ಗೀತಾ ನಾರಾಯಣನ್, ಸ್ಥಾಪಕಿ, ಸೃಷ್ಟಿ ಮಣಿಪಾಲ್ ಇನ್ಸ್ ಟಿಟ್ಯೂಟ್  ಆಫ್ ಡಿಸೈನ್ ಅಂಡ್ ಟೆಕ್ನಾಲಜಿ

ಜಲಸಂರಕ್ಷಣೆಗೆ ಪಣ

ಹೀಗಿರುವಾಗ ಅಂತರ್ಜಲ ಸಂರಕ್ಷಣೆ ಕೆಲಸ ಮೊದಲು ಆಗಬೇಕು. ನೀರಿನ ಸಂರಕ್ಷಣೆ ಕಾರ್ಯದಲ್ಲಿ ಕೈಯಿಂದ ಬಾವಿ ತೋಡುವ ಪ್ರಾಚೀನ ಪದ್ಧತಿ ನೆರವಾಗಬಲ್ಲುದು. ಈ ಪುಣ್ಯಕಾರ್ಯದಲ್ಲಿ ಆಪತ್ಬಾಂಧವರಾಗಿ ಒದಗಿಬಂದಿರುವುದು ಮಣ್ಣು ಒಡ್ಡರ ಸಮುದಾಯ. 

ಅನಾದಿ ಕಾಲದಿಂದಲೂ ಮಣ್ಣು ಒಡ್ಡರು ಕೈಯಿಂದ ಬಾವಿ ತೋಡುವಲ್ಲಿ  ನಿಷ್ಣಾತರು. ಬಾವಿ ತೋಡುವುದಕ್ಕೂ ಮೊದಲು ಅವರು ಭೂಮಿತಾಯಿಗೆ ನಮಸ್ಕರಿಸಿ ಪೂಜೆ ಮಾಡಿ ಗೌರವ ಭಕ್ತಿ ಸಮರ್ಪಿಸುವರು. ಈ ಸಮುದಾಯಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಸೆಪ್ಟೆಂಬರ್ 4ರಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com