ರಾಷ್ಟ್ರೀಯ ಶಿಕ್ಷಣ ನೀತಿ-2020: ಕರ್ನಾಟಕದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಶಾಲಾ ಮಟ್ಟದಲ್ಲಿ ಆರಂಭಿಸಲು ಚಿಂತನೆ 

2022-23 ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ -2020 (NEP-2020) ಯನ್ನು ಹಂತ ಹಂತವಾಗಿ ಪರಿಚಯಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: 2022-23 ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ -2020 (NEP-2020) ಯನ್ನು ಹಂತ ಹಂತವಾಗಿ ಪರಿಚಯಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ.

ಶಾಲೆಯ ಮೊದಲ ಐದು ವರ್ಷಗಳು NEP-2020 ಅಡಿಯಲ್ಲಿ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ECCE) ಅಡಿಯಲ್ಲಿ ಬರುತ್ತವೆ. ಯೋಜನೆಯ ಅನುಷ್ಠಾನಕ್ಕಾಗಿ ಇಲಾಖೆಯು ಕೇಂದ್ರ ಶಿಕ್ಷಣ ಸಚಿವಾಲಯದೊಂದಿಗೆ ಸಮನ್ವಯ ಹೊಂದಿರುವ ಒಂದು ಘಟಕವನ್ನು ರಚಿಸಿದೆ. ಇದರಲ್ಲಿ ECCE, ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ, ವೃತ್ತಿಪರ ಶಿಕ್ಷಣ ಮತ್ತು ಶಾಲಾ ಸಂಕೀರ್ಣಗಳು ಸೇರುತ್ತವೆ.

ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(NEP) ಅನುಷ್ಠಾನಕ್ಕಾಗಿ ಕಾರ್ಯಪಡೆಯು ತನ್ನ ಮೂರನೇ ಸಭೆಯನ್ನು ನಿನ್ನೆ ನಡೆಸಿತು, ಮುಂದಿನ ಸಭೆ ಸೆಪ್ಟೆಂಬರ್ 22 ರಂದು ನಿಗದಿಯಾಗಿದೆ. ಚರ್ಚೆಗಳು ಈಗಾಗಲೇ ಆರಂಭವಾಗಿದ್ದು, ಅನುಷ್ಠಾನ ಪ್ರಕ್ರಿಯೆಗೆ ಸಜ್ಜಾಗಿದ್ದೇವೆ. NEP-2020 ಗಾಗಿ ಆರಂಭಿಸಿದ ಎಲ್ಲಾ ಕೆಲಸಗಳನ್ನು ಗಮನಿಸಲಾಗುತ್ತಿದೆ. ವಿಭಿನ್ನವಾದ ಕಾರ್ಯ ಮತ್ತು ಸಮಯನಿಗದಿಯನ್ನು ಹೊರಡಿಸಲಾಗಿದ್ದು, ಕೆಲಸಗಳು ನಡೆಯುತ್ತಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಅಂಗನವಾಡಿ ನೌಕರರಿಗೆ ಉದ್ಯೋಗದ ಭರವಸೆ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್, ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಿದ ನಂತರ, ಶಾಲೆಗಳಲ್ಲಿ ಎನ್ಇಪಿ ಅನುಷ್ಠಾನದ ಶೂನ್ಯ ವರ್ಷವು 2022-23 ರಿಂದ ಮೊದಲು ಕಡಿಮೆ ತರಗತಿಗಳೊಂದಿಗೆ ಆರಂಭವಾಗುತ್ತದೆ ಎಂದು ದೃಢಪಡಿಸಿದ್ದಾರೆ. ಎನ್ ಇಪಿ-2020 ಘಟಕವನ್ನು ರಚಿಸಲಾಗಿದ್ದು, ಆಂತರಿಕ ಸರ್ವರ್‌ ಮೂಲಕ ಬೆಳವಣಿಗೆಗಳನ್ನು ಕಾಲಕಾಲಕ್ಕೆ ಗಮನಿಸಲಾಗುತ್ತಿರುತ್ತದೆ ಎಂದು ಅವರು ಹೇಳಿದರು.

ಎನ್ಇಪಿಯಲ್ಲಿ ಪ್ರಸ್ತಾಪಿಸಿದಂತೆ ಅಂಗನವಾಡಿಗಳನ್ನು ಪೂರ್ವ ಪ್ರಾಥಮಿಕ ಶಿಕ್ಷಣದೊಂದಿಗೆ ಸಂಯೋಜಿಸುವ ಬಗ್ಗೆ ಇಲಾಖೆಯ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದರು, ಮೊದಲ ಐದು ವರ್ಷಗಳ ಶಾಲಾ ಶಿಕ್ಷಣವು ಕ್ಲಸ್ಟರ್ ಮಾದರಿಯಲ್ಲಿರುವುದರಿಂದ ಈ ತರಗತಿಗಳನ್ನು ನಿರ್ಮಿಸಲು ಸಾಕಷ್ಟು ಹಣವಿಲ್ಲದಿದ್ದರೆ ಸಾಧ್ಯವಿಲ್ಲ ಎಂದು ನುಡಿದರು.

ಈ ವೇಳೆ ಶಿಕ್ಷಣ ಸಚಿವ ನಾಗೇಶ್ ಅಂಗನವಾಡಿ ಕಾರ್ಯಕರ್ತೆಯರಿಗೆ ಕೆಲಸದ ಭದ್ರತೆಯ ಭರವಸೆ ನೀಡಿದರು. ಇದಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಶಿಕ್ಷಣ ಇಲಾಖೆ ಇದೆ ಎಂದು ಅವರು ಹೇಳಿದರು. ಮುಂದಿನ ಶೈಕ್ಷಣಿಕ ವರ್ಷದಲ್ಲಿ (2022-23) ಅಂಗನವಾಡಿಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುವುದಿಲ್ಲ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com