ಡೆಂಗ್ಯು ಮಾದರಿಯ ಮತ್ತೊಂದು ಹೊಸ ವೈರಾಣು ಸೋಂಕು ಪತ್ತೆ: ರೋಗಲಕ್ಷಣ ಗುರುತಿಸುವುದು ಹೇಗೆ?

ಋತು ಬದಲಾವಣೆಯಾಗುತ್ತಿದ್ದಂತೆಯೇ ವೈದ್ಯರು ಹೊಸ ಮಾದರಿಯ ಸೋಂಕು ಪ್ರಕರಣಗಳನ್ನು ಹೆಚ್ಚು ನೋಡುತ್ತಿದ್ದಾರೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on

ಬೆಂಗಳೂರು: ಋತು ಬದಲಾವಣೆಯಾಗುತ್ತಿದ್ದಂತೆಯೇ ವೈದ್ಯರು ಹೊಸ ಮಾದರಿಯ ಸೋಂಕು ಪ್ರಕರಣಗಳನ್ನು ಹೆಚ್ಚು ನೋಡುತ್ತಿದ್ದಾರೆ. 

ಈ ಪೈಕಿ ಥ್ರಂಬೋಸೈಟೋಪೆನಿಯಾ- ಪ್ಲೇಟ್ ಲೆಟ್ ಸಂಖ್ಯೆ ಕುಸಿತ ಕಾಣುವ ಸ್ಥಿತಿಯೊಂದಿಗೆ ವೈರಾಣು ಜ್ವರ ಇರುವುದು ಹೆಚ್ಚು ವರದಿಯಾಗುತ್ತಿರುವ ಪ್ರಕರಣಗಳಾಗಿವೆ.

ಈ ರೀತಿಯ ಜ್ವರವನ್ನು ಹಲವು ಮಂದಿ ಡೆಂಗ್ಯು ಎಂದು ತಪ್ಪಾಗಿ ಭಾವಿಸುವುದುಂಟು ಆದರೆ ಡೆಂಗ್ಯುಗೆ ಟೆಸ್ಟ್ ಮಾಡಿಸಿದರೆ ನೆಗೆಟೀವ್ ವರದಿ ಬರುತ್ತದೆ.

ಹೀಗಾಗುವುದರಿಂದ ಹಲವು ರೋಗಿಗಳು ಗೊಂದಲಕ್ಕೀಡಾಗಿ ಆತಂಕಕ್ಕೊಳಗಾಗುತ್ತಾರೆ ಎನ್ನುತ್ತಾರೆ ವೈದ್ಯರು.

ಕಟ್ಟಡ ನಿರ್ಮಾಣಕ್ಕೆ ಹತ್ತಿರವಿರುವ ಪ್ರದೇಶಗಳು ಕೈಗಾರಿಕಾ ಪ್ರದೇಶಗಳ ಬಳಿ ಇರುವವರು ಈ ರೀತಿಯ ವೈರಲ್ ಜ್ವರಕ್ಕೆ ಹೆಚ್ಚು ದುರ್ಬಲರಾಗಿರುತ್ತಾರೆ ಹಾಗೂ ಹರಡುವ ಸಾಮರ್ಥ್ಯ ಹೊಂದಿರುತ್ತವೆ.

ಏಸ್ತರ್ ಸಿಎಂಐ ಆಸ್ಪತ್ರೆಯ ಆಂತರಿಕ ವೈದ್ಯ ವಿಭಾಗದ ಸಲಹೆಗಾರರಾಗಿರುವ ಡಾ. ಬೃಂದ ಈ ಮಾದರಿಯ ಹೊಸ ವೈರಾಣು ಜ್ವರದ ಬಗ್ಗೆ ಮಾತನಾಡಿದ್ದು, "ಕಡಿಮೆ ಪ್ಲೇಟ್ ಲೆಟ್ ಸಂಖ್ಯೆ ಎಂದಾಕ್ಷಣ ಅದು ಡೆಂಗ್ಯು ಆಗಿರಬೇಕೆಂದೇನೂ ಇಲ್ಲ. ಇತರ ವೈರಲ್ ಸೋಂಕಿನಿಂದಲೂ ಪ್ಲೇಟ್ ಲೆಟ್ ಗಳು ಕುಸಿತ ಕಾಣಬಹುದು, ನಿರ್ವಹಣೆಯೂ ಡೆಂಗ್ಯು ಮಾದರಿಯದ್ದೇ ಆಗಿರುತ್ತದೆ ಎಂದು ತಿಳಿಸಿದ್ದಾರೆ. 

ಹಿಮೋಗ್ರಾಮ್ (ರಕ್ತ ಎಣಿಕೆ ಪರೀಕ್ಷೆ) ಡೆಂಗ್ಯು ಎನ್ಎಸ್1 ಆಂಟಿಜೆನ್ ಟೆಸ್ಟ್ ಗಳನ್ನು ಮಾಡಿಸಬೇಕಾಗುತ್ತದೆ. ಈ ರೀತಿ ಮಾಡಿಸಿದ ಪರೀಕ್ಷೆಯಲ್ಲಿ ಪಾಸಿಟೀವ್ ವರದಿ ಬಂದರೆ ಅದು ಡೆಂಗ್ಯು ಎನ್ನುವುದು ದೃಢವಾಗುತ್ತದೆ ಎನ್ನುತ್ತಾರೆ ಬೃಂದ.

ಕೊಲಂಬಿಯಾ ಏಷ್ಯಾ, ಹೆಬ್ಬಾಳ (ಮಣಿಪಾಲ್ ಹಾಸ್ಪೆಟಲ್ಸ್) ನ ಸಲಹೆಗಾರರಾಗಿರುವ ಡಾ.ಇರ್ಫಾನ್ ಜಾವೀದ್ ಖಾಜಿ, ತಾವು ಪ್ರತಿ 5 ರೋಗಿಗಳ ಪೈಕಿ ಒಬ್ಬರಲ್ಲಿ ಈ ರೀತಿಯ ಕಡಿಮೆ ಪ್ಲೇಟ್ ಲೆಟ್ ಇರುವ ವೈರಲ್ ಫೀವರ್ ಇರುವ ಪ್ರಕರಣಗಳನ್ನು ನೋಡುತ್ತಿರುವುದಾಗಿ ಹೇಳಿದ್ದಾರೆ.

ಸಾಮಾನ್ಯವಾದ ರೋಗಲಕ್ಷಣಗಳೆಂದರೆ ಮೈಯಾಲ್ಜಿಯಾ, ಜ್ವರ, ತಲೆನೋವು, ಕೆಲವೊಮ್ಮೆ ಮೇಲ್ಭಾಗದ ಶ್ವಾಸೇಂದ್ರಿಯ ಸೋಂಕು ಮತ್ತು GI ರೋಗಲಕ್ಷಣಗಳೊಂದಿಗೆ ಸಂಬಂಧಿಸಿದೆ.

ವೈರಸ್‌ಗಳೊಂದಿಗೆ ಕಲುಷಿತ ನೀರು ಥ್ರಂಬೋಸೈಟೋಪೆನಿಯಾದೊಂದಿಗೆ ವೈರಲ್ ಜ್ವರಕ್ಕೆ ಕಾರಣವಾಗಬಹುದು, ಮಕ್ಕಳಿಂದ 70 ವರ್ಷದವರವರೆಗೂ ಈ ಜ್ವರ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಡಾ.ಖಾಜಿ

ಜನತೆ ಈ ರೀತಿಯ ಜ್ವರ ಬಂದಲ್ಲಿ ಅದನ್ನು ಕೋವಿಡ್-19 ಎಂದು ಗೊಂದಲಕ್ಕೀಡಲು ಪ್ರಾರಂಭಿಸಿದ್ದಾರೆ ಎನ್ನುತ್ತಾರೆ ಏಸ್ತರ್ ಆರ್ ವಿ ಆಸ್ಪತ್ರೆಯ ಆಂತರಿಕ ವೈದ್ಯ ವಿಭಾಗದ ಡಾ. ಎಸ್ ಎನ್ ಅರವಿಂದ ಹೇಳಿದ್ದಾರೆ.

ಋತು ಬದಲಾವಣೆಯಾಗಿರುವುದು, ವೀಕೆಂಡ್ ಗಳಲ್ಲಿ ಜನತೆ ಸಣ್ಣಪುಟ್ಟ ಪಾರ್ಟಿಗಳಿಗೆ ತೆರಳುವುದು ಈ ವೈರಾಣು ಜ್ವರ ಹರಡುವುದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಅರವಿಂದ ತಿಳಿಸಿದ್ದಾರೆ.

ಸಾಮಾನ್ಯವಾಗಿ ವೈರಲ್ ಜ್ವರಕ್ಕೆ ನೀಡುವ ಚಿಕಿತ್ಸೆಯನ್ನೇ ಈ ವೈರಾಣು ಜ್ವರ ಎದುರಿಸುತ್ತಿರುವವರಿಗೂ ನೀಡಲಾಗುತ್ತದೆ. ಈ ವೈರಾಣು ಜ್ವರದಿಂದ ಶ್ವಾಸಕೋಶ, ಕಿಡ್ನಿ, ಲಿವರ್ ಗೆ ಹಾನಿಯಾಗಿದ್ದರೆ ಮಾತ್ರ ಚಿಕಿತ್ಸೆಯ ವಿಧಾನ ಬದಲಾವಣೆಯಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com