ಹೊಟೇಲ್ ಸಂಘದ ರಾತ್ರಿ ಕರ್ಪ್ಯೂ ಅವಧಿ ವಿಸ್ತರಣೆ ಮನವಿ ತಿರಸ್ಕರಿಸಿದ ಸಚಿವ ಸುಧಾಕರ್

ರಾತ್ರಿ ಕೊರೊನಾ ಕರ್ಫ್ಯೂ ಸಮಯವನ್ನು ತಮಿಳುನಾಡು ಮಾದರಿಯಲ್ಲಿ ರಾತ್ರಿ 11 ರಿಂದ ಬೆಳಗಿನ 6 ಗಂಟೆವರೆಗೆ ಬದಲಾಯಿಸುವಂತೆ ಹೋಟೆಲ್ ಸಂಘದ ಸದಸ್ಯರು ಸಚಿವ ಡಾ. ಸುಧಾಕರ್ ಅವರಿಗೆ ಮನವಿ ಮಾಡಿದ್ದು, ಸಮಯ ಬದಲಾವಣೆಯನ್ನು ಸಚಿವರು ತಿರಸ್ಕರಿಸಿದ್ದಾರೆ.
ಡಾ.ಕೆ ಸುಧಾಕರ್
ಡಾ.ಕೆ ಸುಧಾಕರ್

ಬೆಂಗಳೂರು: ರಾತ್ರಿ ಕೊರೊನಾ ಕರ್ಫ್ಯೂ ಸಮಯವನ್ನು ತಮಿಳುನಾಡು ಮಾದರಿಯಲ್ಲಿ ರಾತ್ರಿ 11 ರಿಂದ ಬೆಳಗಿನ 6 ಗಂಟೆವರೆಗೆ ಬದಲಾಯಿಸುವಂತೆ ಹೋಟೆಲ್ ಸಂಘದ ಸದಸ್ಯರು ಸಚಿವ ಡಾ. ಸುಧಾಕರ್ ಅವರಿಗೆ ಮನವಿ ಮಾಡಿದ್ದು, ಸಮಯ ಬದಲಾವಣೆಯನ್ನು ಸಚಿವರು ತಿರಸ್ಕರಿಸಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು ರಾತ್ರಿ 10 ಗಂಟೆಗೆ ಕೊರೊನಾ ಕರ್ಫ್ಯೂ ಜಾರಿಯಾಗುವುದರಿಂದ ಹೊಟೇಲ್ ಕಾರ್ಮಿಕರು ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾತ್ರಿ 10 ಗಂಟೆ ಬದಲು 11 ಗಂಟೆಗೆ ವಿಸ್ತರಣೆ ಬೆಳಿಗ್ಗೆ 5 ಗಂಟೆ ಬದಲು 6 ಗಂಟೆವರೆಗೂ ವಿಸ್ತರಿಸುವಂತೆ ಮನವಿ ಮಾಡಿದ್ದರು. 

ಸಂಘದವರ ಮನವಿಯನ್ನುಸಚಿವ ಸುಧಾಕರ್ ತಿರಸ್ಕರಿಸಿ, ಕೊರೊನಾ ನಿಯಂತ್ರಣ ಮಾಡುವುದು ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಿನ ಆತಂಕ ಇದೆ. ಹೀಗಾಗಿ ಸಮಯ ಬದಲಾವಣೆ ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಇಂದು 9,579 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 10,74,869ಕ್ಕೆ ಏರಿಕೆಯಾಗಿದೆ. ಇನ್ನು 52 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com