ಮಸ್ಕಿ ಉಪಚುನಾವಣೆ: ಹಣ ವಿತರಿಸುತ್ತಿದ್ದ ಇಬ್ಬರು, ಹಣ ಸ್ವೀಕರಿಸಿದ ಓರ್ವ ಮಹಿಳೆ ಸೆರೆ

ಚುನಾವಣೆ ಸಂಬಂಧ ಹಣ ಹಂಚಿಕೆ ಆರೋಪದಡಿ ಇಬ್ಬರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಮೂವರು ಹಾಗೂ ನಗದು ಸ್ವೀಕರಿಸಿದ್ದಕ್ಕಾಗಿ ಮಹಿಳೆಯೊಬ್ಬರನ್ನು ಜಿಲ್ಲಾ ಪೊಲೀಸರು ಬಂಧಿಸಿದ ಘಟನೆ ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ನಡೆದಿದೆ. ಮಹಿಳೆಗೆ ಹಣವನ್ನು ವಿತರಿಸಿದ ವ್ಯಕ್ತಿ ಪರಾರಿಯಾಗಿದ್ದಾನೆ.

Published: 13th April 2021 07:49 AM  |   Last Updated: 13th April 2021 07:49 AM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : The New Indian Express

ರಾಯಚೂರು: ಚುನಾವಣೆ ಸಂಬಂಧ ಹಣ ಹಂಚಿಕೆ ಆರೋಪದಡಿ ಇಬ್ಬರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಮೂವರು ಹಾಗೂ ನಗದು ಸ್ವೀಕರಿಸಿದ್ದಕ್ಕಾಗಿ ಮಹಿಳೆಯೊಬ್ಬರನ್ನು ಜಿಲ್ಲಾ ಪೊಲೀಸರು ಬಂಧಿಸಿದ ಘಟನೆ ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ನಡೆದಿದೆ. ಮಹಿಳೆಗೆ ಹಣವನ್ನು ವಿತರಿಸಿದ ವ್ಯಕ್ತಿ ಪರಾರಿಯಾಗಿದ್ದಾನೆ.

ಹರ್ವಾಪುರದಲ್ಲಿ ಹಣ ವಿತರಿಸುವ ವಿಡಿಯೋ ತುಣುಕು ವೈರಲ್ ಆದ ನಂತರ ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಲಾಗಿದೆ.

ಚುನಾವಣಾ ಅಧಿಕಾರಿಗಳ ದೂರಿನ ನಂತರ ಪೊಲೀಸರು ಹಾಸನದ ಹೊಳೆನರಸೀಪುರ ಪಟ್ಟಣದ ಅಮಿತ್ ನನ್ನು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ದುರ್ಗಾ ಕ್ಯಾಂಪ್‌ನಲ್ಲಿ ಮತದಾರರಿಗೆ ಹಣ ವಿತರಿಸಿದ್ದಕ್ಕಾಗಿ ಬಿಜೆಪಿ ಕಾರ್ಯಕರ್ತ ಚಿಟ್ಟಿಬಾಬು ಅವರನ್ನು ಬಂಧಿಸಲಾಯಿತು.

ಹಣ ಹಂಚಿಕೆ ಮಾಡಿದ್ದಕ್ಕಾಗಿ ಹಾಸನದ ಮೂಲದ ಹೇಮಂತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಹಣವನ್ನು ಸ್ವೀಕರಿಸಿದ್ದಕ್ಕಾಗಿ ತಾಯಮ್ಮನನ್ನು ಬಂಧಿಸಿದ್ದಾರೆ,


Stay up to date on all the latest ರಾಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp