ಕೋವಿಡ್‌ ನಡುವೆಯೂ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ 69 ಕೋಟಿ ರೂ. ಆದಾಯ ಸಂಗ್ರಹ

ಕೋವಿಡ್‌ ಸಾಂಕ್ರಾಮಿಕದ ನಡುವೆಯೂ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2020-21ರ ಅವಧಿಯಲ್ಲಿ 68.94 ಕೋಟಿ ರೂ. ಕಾಣಿಕೆ ಮೊತ್ತ ಸಂಗ್ರಹವಾಗಿದೆ.

Published: 19th April 2021 10:37 PM  |   Last Updated: 19th April 2021 10:37 PM   |  A+A-


kukke subramanya temple (File photo)

ಕುಕ್ಕೆ ಸುಬ್ರಹ್ಮಣ್ಯ (ಸಂಗ್ರಹ ಚಿತ್ರ)

Posted By : Vishwanath S
Source : UNI

ಮಂಗಳೂರು: ಕೋವಿಡ್‌ ಸಾಂಕ್ರಾಮಿಕದ ನಡುವೆಯೂ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2020-21ರ ಅವಧಿಯಲ್ಲಿ 68.94 ಕೋಟಿ ರೂ. ಕಾಣಿಕೆ ಮೊತ್ತ ಸಂಗ್ರಹವಾಗಿದೆ.

ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 29.97 ಕೋಟಿ ರೂ. ಕಡಿಮೆಯಾಗಿದೆ. ಕೋವಿಡ್ -19ರ ನಂತರ ಈ ದೇವಾಲಯವನ್ನು 2020ರ ಮಾರ್ಚ್ 17ರಿಂದ ಸೆ. 8ರವರೆಗೆ ಮುಚ್ಚಲ್ಪಟ್ಟಿತು. ಪರಿಣಾಮವಾಗಿ, ದೇವಾಲಯವು ಆರು ತಿಂಗಳವರೆಗೆ ಯಾವುದೇ ಆದಾಯವನ್ನು ಗಳಿಸಲಿಲ್ಲ. 

ಸೆಪ್ಟೆಂಬರ್ 15ರಿಂದ 2021ರ ಮಾರ್ಚ್ 31ರವರೆಗೆ 68.94 ಕೋಟಿ ರೂ.ಗಳನ್ನು ಗಳಿಸಲಾಗಿದೆ ಎಂದು ದೇವಾಲಯ ನಿರ್ವಹಣಾ ಸಮಿತಿ ಅಧ್ಯಕ್ಷ ಮೋಹನ್ರಾಮ್ ಸುಲ್ಲಿ ತಿಳಿಸಿದ್ದಾರೆ.

ದೇವಾಲಯದ ಆದಾಯದ ದೊಡ್ಡ ಭಾಗವು ವಿವಿಧ ‘ಸೇವೆ’ಗಳಿಂದ ಬಂದಿದೆ. ಇದಲ್ಲದೆ, ಎಸ್‌ಬಿ ಖಾತೆ, ಚೊಲ್ಟಿ ಮತ್ತು ಕಟ್ಟಡಗಳಿಂದ ಬಾಡಿಗೆ ಮತ್ತು ಕೃಷಿ ಉತ್ಪನ್ನಗಳನ್ನು ನೀಡುವುದರಿಂದ ಆದಾಯವನ್ನು ಗಳಿಸಲಾಗಿದೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp