ನೈಋತ್ಯ ರೈಲ್ವೆಯಿಂದ ತಮಿಳುನಾಡಿಗೆ 16 ರೈಲುಗಳು ರದ್ದು

ರಾಜ್ಯದಲ್ಲಿ ಕಳೆದ ರಾತ್ರಿಯಿಂದ 14 ದಿನಗಳ ಲಾಕ್‍ಡೌನ್‍ ಜಾರಿಗೆ ಬಂದ ನಂತರ ನೈಋತ್ಯ ರೈಲ್ವೆ, ಬಹುತೇಕ ತಮಿಳುನಾಡಿಗೆ ಸಂಪರ್ಕಿಸುವ 16 ರೈಲುಗಳನ್ನು ರದ್ದುಗೊಳಿಸಿದೆ.
ರೈಲು
ರೈಲು

ಬೆಂಗಳೂರು: ರಾಜ್ಯದಲ್ಲಿ ಕಳೆದ ರಾತ್ರಿಯಿಂದ 14 ದಿನಗಳ ಲಾಕ್‍ಡೌನ್‍ ಜಾರಿಗೆ ಬಂದ ನಂತರ ನೈಋತ್ಯ ರೈಲ್ವೆ, ಬಹುತೇಕ ತಮಿಳುನಾಡಿಗೆ ಸಂಪರ್ಕಿಸುವ 16 ರೈಲುಗಳನ್ನು ರದ್ದುಗೊಳಿಸಿದೆ.

ರೈಲುಗಳ ಸೇವೆ ರದ್ದು ವಿವಿಧ ದಿನಗಳಲ್ಲಿ ಜಾರಿಗೆ ಬರಲಿದೆ. ಬೆಂಗಳೂರು- ಚೆನ್ನೈ ಸೆಂಟ್ರಲ್‍ ನಡುವಿನ ಶತಾಬ್ಡಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸ್ಪೆಷಲ್ ಬುಧವಾರದಿಂದ ಎರಡೂ ಕಡೆಯಿಂದ ರದ್ದುಗೊಳ್ಳಲಿದೆ..

ಅದರಂತೆ ಕೊಯಮತ್ತೂರು-ಕೆ.ಎಸ್.ಆರ್. ಬೆಂಗಳೂರು ನಡುವೆ ವಾರದಲ್ಲಿ ಆರು ದಿನ ಸಂಚರಿಸುವ ರೈಲು ಸೇವೆ ಇದೇ ತಿಂಗಳ 29ರಿಂದ ಮುಂದಿನ ಆದೇಶದವರೆಗೆ  ಎರಡೂ ಕಡೆಗಳಿಂದ ರದ್ದಾಗಲಿದೆ. ಕೋಚುವೇಲಿ-ಬಾಣಸವಾಡಿ ನಡುವೆ ವಾರಕ್ಕೊಮ್ಮೆ ಸಂಚರಿಸುವ ಹಂಸಫರ್ ಎಕ್ಸ್ ಪ್ರೆಸ್ ವಿಶೇಷ ರೈಲು, ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ನಡುವಿನ ರೈಲುಗಳನ್ನು ಕೂಡ ರದ್ದುಗೊಳಿಸಲಾಗುವುದು.

ಎರ್ನಾಕುಲಂ-ಬಾಣಸವಾಡಿ ವಾರಜ್ಜೆ ಎರಡು ಬಾರಿ ಸಂಚರಿಸುವ ರೈಲು ಮೇ 3ರಿಂದ ರದ್ದುಗೊಳ್ಳಲಿದೆ. ಬೆಂಗಳೂರು ಉಪನಗರ ಸಂಪರ್ಕಿಸುವ ಆರು ಮೆಮು ರೈಲುಗಳನ್ನು ಈ ತಿಂಗಳ 29ರಿಂದ  ರದ್ದುಗೊಳಿಸಲಾಗುತ್ತದೆ. ಕೆ.ಎಸ್.ಆರ್. ಬೆಂಗಳೂರು-ಮಾರಿಕುಪ್ಪಮ್, ಕೆ.ಎಸ್.ಆರ್. ಬೆಂಗಳೂರು-ಹೊಸೂರು, ಬೈಯಪ್ಪನಹಳ್ಳಿ-ಹೊಸೂರು ರೈಲು ಸೇವೆ ಸಹ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com