ಭಗವತಿ, ರಂಗರಾಜನ್ ಗೆ ಪ್ರೊಫೆಸರ್ ಸಿಆರ್ ರಾವ್ ಶತಮಾನೋತ್ಸವ ಚಿನ್ನದ ಪದಕ

ಭಾರತೀಯ ಅರ್ಥಶಾಸ್ತ್ರ ಸೊಸೈಟಿ(ಟಿಐಇಎಸ್) ಟ್ರಸ್ಟ್ ತನ್ನ ಚೊಚ್ಚಲ ಪ್ರೊ ಸಿಆರ್ ರಾವ್ ಶತಮಾನೋತ್ಸವ ಚಿನ್ನದ ಪದಕವನ್ನು ಇಬ್ಬರು ಪ್ರಖ್ಯಾತ ಭಾರತೀಯ ವಿದ್ವಾಂಸರಾದ ಡಾ. ಜಗದೀಶ್ ಭಗವತಿ ಮತ್ತು ಡಾ ಸಿ ರಂಗರಾಜನ್...
ಜಗದೀಶ್ ಭಗವತಿ - ಸಿ ರಂಗರಾಜನ್x
ಜಗದೀಶ್ ಭಗವತಿ - ಸಿ ರಂಗರಾಜನ್x

ಬೆಂಗಳೂರು: ಭಾರತೀಯ ಅರ್ಥಶಾಸ್ತ್ರ ಸೊಸೈಟಿ(ಟಿಐಇಎಸ್) ಟ್ರಸ್ಟ್ ತನ್ನ ಚೊಚ್ಚಲ ಪ್ರೊ ಸಿಆರ್ ರಾವ್ ಶತಮಾನೋತ್ಸವ ಚಿನ್ನದ ಪದಕವನ್ನು ಇಬ್ಬರು ಪ್ರಖ್ಯಾತ ಭಾರತೀಯ ವಿದ್ವಾಂಸರಾದ ಡಾ. ಜಗದೀಶ್ ಭಗವತಿ ಮತ್ತು ಡಾ ಸಿ ರಂಗರಾಜನ್ ಅವರಿಗೆ ನೀಡಿ ಗೌರವಿಸಿದೆ.

ಡಾ ಭಗವತಿ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ, ಕಾನೂನು ಮತ್ತು ಅಂತರಾಷ್ಟ್ರೀಯ ಸಂಬಂಧಗಳ ಪ್ರಾಧ್ಯಾಪಕರು ಮತ್ತು ಭಾರತೀಯ ಆರ್ಥಿಕ ನೀತಿಗಳ ರಾಜ್ ಕೇಂದ್ರದ ನಿರ್ದೇಶಕರಾಗಿದ್ದಾರೆ.

ಡಾ ರಂಗರಾಜನ್ ಅವರು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷರು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮಾಜಿ ಗವರ್ನರ್.

ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಪ್ರೊಫೆಸರ್ ರಾವ್ ಅವರ ಕೊಡುಗೆಯನ್ನು ಸ್ಮರಿಸಲು ಟಿಐಇಎಸ್ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ. ರಾವ್ ಅವರು ಕಳೆದ ವರ್ಷ ಸೆಪ್ಟೆಂಬರ್ 10 ರಂದು ತಮ್ಮ 100ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಅರ್ಥಶಾಸ್ತ್ರದ ಸೈದ್ಧಾಂತಿಕ ಮತ್ತು ಅನ್ವಯಿಕ ಅಂಶಗಳು ಮತ್ತು ಅಧಿಕೃತ ಅಂಕಿಅಂಶಗಳ ಕ್ಷೇತ್ರಗಳಿಗೆ ನೀಡಿದ ಜೀವಮಾನದ ಕೊಡುಗೆಗಳಿಗಾಗಿ ಭಾರತೀಯ ಅಥವಾ ಭಾರತೀಯ ಮೂಲದ ವಿದ್ವಾಂಸರಿಗೆ ಎರಡು ವರ್ಷಗಳಿಗೊಮ್ಮೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com