ದುಬಾರೆ: ಆನೆ ಮನೆ ಫೌಂಡೇಶನ್ ಆನೆಗಳನ್ನು ವಶಕ್ಕೆ ಪಡೆಯಲು ರಾಜ್ಯ ಸರ್ಕಾರ ಆದೇಶ
ಕುಶಾಲನಗರ ಬಳಿಯ ದುಬಾರೆಯಲ್ಲಿರುವ ಆನೆ ಮನೆ ಫೌಂಡೇಶನ್ ಮಾಲೀಕತ್ವದಲ್ಲಿರುವ ಏಳು ಆನೆಗಳನ್ನು ವಶಕ್ಕೆ ಪಡೆಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಆದೇಶ ಹೊರಡಿಸಿದ್ದಾರೆ.
Published: 13th August 2021 08:10 PM | Last Updated: 13th August 2021 08:14 PM | A+A A-

ಸಾಂದರ್ಭಿಕ ಚಿತ್ರ
ಮಡಿಕೇರಿ: ಕುಶಾಲನಗರ ಬಳಿಯ ದುಬಾರೆಯಲ್ಲಿರುವ ಆನೆ ಮನೆ ಫೌಂಡೇಶನ್ ಮಾಲೀಕತ್ವದಲ್ಲಿರುವ ಏಳು ಆನೆಗಳನ್ನು ವಶಕ್ಕೆ ಪಡೆಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಆದೇಶ ಹೊರಡಿಸಿದ್ದಾರೆ. ಈ ಏಳು ಆನೆಗಳಿಗೆ ಫೌಂಡೇಶನ್ ನಿಂದ ರೇಡಿಯೋ ಕಾಲರ್ ಅಳವಡಿಸಲು ಆದೇಶಿಸಲಾಗಿದೆ, ತದನಂತರ ಅವುಗಳನ್ನು ಬಂಡೀಪುರ ಮತ್ತು ನಾಗರಹೊಳೆಯ ಆನೆ ಶಿಬಿರಗಳಿಗೆ ಸ್ಥಳಾಂತರಿಸಲಾಗುತ್ತದೆ.
ಈ ಸಂಬಂಧ ನಿನ್ನೆ ಅಧಿಸೂಚನೆ ಹೊರಡಿಸಲಾಗಿದ್ದು, ದುಬಾರೆ ಬಳಿಯ ಆನೆ ಮನೆ ಫೌಂಡೇಶನ್ ನ ಪ್ರಜ್ಞಾ ಚೌಟ ಮಾಲೀಕರಿಂದ ಆನೆಗಳ ಸೆರೆಗೆ ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವರದಿಯೊಂದನ್ನು ಸಲ್ಲಿಸಿದ್ದು, ಈ ಆನೆಗಳು ಆಗಾಗ್ಗೆ ತೋಟಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿದ್ದು, ಸ್ಥಳೀಯ ಜನರಲ್ಲಿ ಭೀತಿಯನ್ನುಂಟು ಮಾಡಿವೆ ಎಂದು ಹೇಳಿದ್ದಾರೆ.
ಫೌಂಡೇಶನ್ ಸೆರೆಹಿಡಿದಿರುವ ಆನೆಗಳ ವಿರುದ್ಧ ಸೋಮವಾರ ತಾಲೂಕ್ ಪಂಚಾಯಿತಿ, ಸಿರಂಗಲಾ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ಗ್ರಾಮಸ್ಥರಿಂದ ಅನೇಕ ದೂರುಗಳನ್ನು ಸ್ವೀಕರಿಸುತ್ತಿದ್ದೇವೆ, ಮಾನವ ಜೊತೆಗಿನ ಸಂಘರ್ಷ ನಿಯಂತ್ರಣಕ್ಕೆ ಪ್ರಜ್ಞಾದಿಂದ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಕುಶಾಲ ನಗರ ಆರ್ ಎಫ್ ಒ ಅವರಿಂದ ಜೂನ್ 5 ರಂದು ಪ್ರಜ್ಞಾಗೆ ಅಂತಿಮ ನೋಟಿಸ್ ವೊಂದನ್ನು ಕಳುಹಿಸಲಾಗಿದ್ದು, ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಕೆ ಹಾಗೂ ಅವುಗಳನ್ನು ವಿಭಿನ್ನ ಅರಣ್ಯಗಳಿಗೆ ಸ್ಥಳಾಂತರಿಸಲು ಒಪ್ಪಿಕೊಂಡಿದ್ದಾರೆ. ಹಿರಣಯ್ಯ (43) ಮತ್ತು ಮಾಲಾ ದೇವಿ (34) ಆನೆಗಳಿಗೆ 2002ರಿಂದಲೂ ಮಾಲೀಕತ್ವದ ಪರವಾನಗಿಯನ್ನು ಪ್ರಜ್ಞಾ ಚೌಟ ಮಾಲೀಕರು ಪರಿಷ್ಕರಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಆದಾಗ್ಯೂ, ಈ ಸಂಬಂಧ ಅಧಿಕೃತ ಆದೇಶವೊಂದನ್ನು ಪಿಸಿಸಿಎಫ್ ಹೊರಡಿಸಿದ್ದು, ಎಲ್ಲಾ ಏಳು ಆನೆಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯಲಾಗುವುದು, ಮಾನವರು ಮತ್ತು ಇತರ ಇಲಾಖೆ ಆನೆಗಳೊಂದಿಗೆ ಸಂಘರ್ಷವನ್ನು ತಪ್ಪಿಸಲು ಗರಿಷ್ಠ ಒಂದು ವರ್ಷದವರೆಗೂ ರೇಡಿಯೊ ಕಾಲರ್ ಅಳವಡಿಸಲು ಆದೇಶಿಸಲಾಗಿದೆ.
ಎರಡು ಹೆಣ್ಣಾನೆಗಳನ್ನು ನಾಗರಹೊಳೆಯ ಹುಲಿ ಸಂರಕ್ಷಿತ ಅರಣ್ಯದ ಬಲ್ಲೆ ಆನೆ ಶಿಬಿರ ಹಾಗೂ ಎರಡು ಗಂಡಾನೆ ಸೇರಿದಂತೆ ಐದು ಆನೆಗಳನ್ನು ರಾಮಪುರ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗುತ್ತಿದೆ. ರೇಡಿಯೊ ಕಾಲರ್ ವೆಚ್ಚವನ್ನು ಪ್ರಜ್ಞಾ ಸಂಸ್ಥೆ ನಿರ್ವಹಿಸಲಿದ್ದು, ಆನೆಗಳ ಸಾಗಾಣಿಕೆ ಮತ್ತು ನಿರ್ವಹಣಾ ವೆಚ್ಚವನ್ನು ಸಂಬಂಧಿತ ಹುಲಿ ಸಂರಕ್ಷಿತ ಅರಣ್ಯದವರು ಭರಿಸಲಿದ್ದಾರೆ.