ದೆಹಲಿ ಸರ್ಕಾರಿ ಶಾಲಾ ಮಕ್ಕಳಿಗೆ ಮಾರ್ಗದರ್ಶಕರಾಗ ಬಯಸುತ್ತೀರಾ?: ದೇಶದ ಯುವ ಮಾರ್ಗದರ್ಶಕರಿಗೆ ಇಲ್ಲಿದೆ ಅವಕಾಶ

ದೆಹಲಿ ಸರ್ಕಾರ ಶಾಲೆಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ದೇಶಾದ್ಯಂತ ಯುವ ಮಾರ್ಗದರ್ಶಕರನ್ನು ಆಹ್ವಾನಿಸಲಾಗಿದೆ.
ಆಪ್ ಶಾಸಕಿ ಅತೀಶಿ ಮರ್ಲೆನಾ
ಆಪ್ ಶಾಸಕಿ ಅತೀಶಿ ಮರ್ಲೆನಾ

ಬೆಂಗಳೂರು: ದೆಹಲಿ ಸರ್ಕಾರ ಶಾಲೆಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ದೇಶಾದ್ಯಂತ ಯುವ ಮಾರ್ಗದರ್ಶಕರನ್ನು ಆಹ್ವಾನಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಿರುವುದರಿಂದ ಶಿಕ್ಷಣದಲ್ಲಿ ಆಸಕ್ತಿ ಮೂಡಿಸಲು ವಿದ್ಯಾರ್ಥಿಗಳಿಗೆ ಶಿಕ್ಷಣ ಮಾರ್ಗದರ್ಶನ ನೀಡುವುದು, ಈ ಮೂಲಕ ಚಾಂಪಿಯನ್ ಗಳನ್ನು ಹುಟ್ಟುಹಾಕುವುದು ದೆಹಲಿ ಸರ್ಕಾರದ ಯೋಜನೆಯಾಗಿದೆ.

ಮೊದಲು ನಾವು ಶಾಲೆಯಲ್ಲಿ ಈ ಚಾಂಪಿಯನ್‌ಗಳನ್ನು ರಚಿಸಲು ಪ್ರಯತ್ನಿಸಿದ್ದೆವು, ಆದರೆ ಈಗ ನಾವು ಸಮುದಾಯದಲ್ಲಿ ಪ್ರಯತ್ನಿಸುತ್ತೇವೆ ಎಂದು ದೆಹಲಿ ಸರ್ಕಾರದ ಆಮ್ ಆದ್ಮಿ ಪಕ್ಷದ ಶಾಸಕಿ, ಶಿಕ್ಷಣತಜ್ಞೆ ಅತೀಶಿ ಮರ್ಲೆನಾ ಹೇಳಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಆರಂಭಗೊಳ್ಳಲಿರುವ ಉಪಕ್ರಮದ ಬಗ್ಗೆ ವಿವರ ನೀಡಿದ ಅವರು, ಪ್ರಸ್ತುತ ದೆಹಲಿ ಸರ್ಕಾರವು ಕಳೆದ ಒಂದು ವರ್ಷದಿಂದ ಪ್ರಾಯೋಗಿಕವಾಗಿ ನಡೆಸುತ್ತಿದೆ, ನಗರದ ಯುವಕರು, ಕಾಲೇಜುಗಳಲ್ಲಿ ಓದುತ್ತಿರುವ ಮತ್ತು ಉದ್ಯೋಗ ಮಾಡುತ್ತಿರುವ ಯುವಕರು ಸರ್ಕಾರಿ ಶಾಲೆಯ ಮಕ್ಕಳಿಗೆ ಮಾರ್ಗದರ್ಶನ ನೀಡಬಹುದಾಗಿದೆ.

ಸಾರ್ವಜನಿಕ ಶಾಲಾ ವಿದ್ಯಾರ್ಥಿಗಳನ್ನು ವಾರಕ್ಕೊಮ್ಮೆ ಸ್ವಯಂಸೇವಕರು ಕರೆದು ಅವರ ಅಧ್ಯಯನ ಮತ್ತು ವೃತ್ತಿಜೀವನದ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಇದನ್ನು 9 ರಿಂದ 12 ನೇ ತರಗತಿಗೆ ವಿಸ್ತರಿಸುವ ಯೋಜನೆ ಇದೆ ಎಂದು ಅವರು ತಿಳಿಸಿದರು.

ದೆಹಲಿಯ ಸರ್ಕಾರಿ ಶಾಲೆಗಳಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಬಯಸುವ ದೇಶಾದ್ಯಂತ ಯುವಜನರಿಗೆ ಸರ್ಕಾರವು ಕಾರ್ಯಕ್ರಮವನ್ನು ತೆರೆಯುತ್ತಿರುವುದರಿಂದ ಬೆಂಗಳೂರಿನ ಯುವಕ-ಯುವತಿಯರು ಕೂಡ ಪಾಲ್ಗೊಳ್ಳಬಹುದು. ತಮ್ಮ  ಮೊಬೈಲ್ ಮತ್ತು ವೀಡಿಯೊ ಕರೆಗಳ ಮೂಲಕ ಇದನ್ನು ಮಾಡಬಹುದು. ಇದಕ್ಕಾಗಿ ಘೋಷಣೆಯನ್ನು ಸೆಪ್ಟೆಂಬರ್ ಆರಂಭದಲ್ಲಿ ಮಾಡಲಾಗುವುದು ಎಂದು ಅವರು ಹೇಳಿದರು. ಈ ಉಪಕ್ರಮವು ತರಗತಿಯಲ್ಲಿ ಮಕ್ಕಳಿಗೆ ಸಿಗುವ ಪಾಠದ ವಾತಾವರಣ ಮತ್ತು ಜ್ಞಾನ ಸಿಗುವಂತೆ ಮಾಡುವುದಾಗಿದೆ ಎಂದು ಹೇಳಿದರು.

ಶಾಲಾ ನಿರ್ವಹಣಾ ಸಮಿತಿಯ ಸದಸ್ಯರು ಮತ್ತು ಇತರ ಸ್ವಯಂಸೇವಕರು ಪ್ರತಿಯೊಬ್ಬರೂ ತಮ್ಮ ಸ್ಥಳಗಳಲ್ಲಿ 50 ವಿದ್ಯಾರ್ಥಿಗಳವರೆಗೆ ಜವಾಬ್ದಾರಿಯನ್ನು ವಹಿಸಿಕೊಂಡರು ಮತ್ತು ಮನೆಯಲ್ಲಿ ಆನ್‌ಲೈನ್ ತರಗತಿಗಳಲ್ಲಿ ವಿದ್ಯಾರ್ಥಿಗಳು ಸರಿಯಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂದು ನೋಡುವುದು ಮತ್ತು ಪೋಷಕರನ್ನು ಕರೆಸಿಕೊಳ್ಳುವ ಒಂದು ದೊಡ್ಡ ಪೋಷಕ ಕಾರ್ಯಕ್ರಮವಿದು. ಸಾಂಕ್ರಾಮಿಕ ಸಮಯದಲ್ಲಿ ಇತರ ಸಮಸ್ಯೆಗಳನ್ನು ಪರಿಹರಿಸಲು ಈ ಚಿಕ್ಕ ಜಾಲಗಳು ಸೇತುವೆಯ ರೀತಿ ಕಾರ್ಯನಿರ್ವಹಿಸುತ್ತವೆ ಎನ್ನುತ್ತಾರೆ.

ಸಾಮಾಜಿಕ, ರಾಜಕೀಯ ಕಾರ್ಯಕರ್ತೆ ಮತ್ತು ಶಿಕ್ಷಣ ಸಂಶೋಧಕಿ ಮತ್ತು ಈಗ ರಾಜಕಾರಣಿಯಾಗಿ ತನ್ನ ಕಲಿಕೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಅತೀಶಿ ಮರ್ಲೆನಾ, ನಾವು ದೇಶದ ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕೆಂದು ಬಯಸುವುದಾದರೆ ಪ್ರತಿ ಮಗು ಉನ್ನತ ಗುಣಮಟ್ಟದ ಶಿಕ್ಷಣವನ್ನು ಹೊಂದಿದರೆ ಮಾತ್ರ ಅದು ಸಾಧ್ಯ. ನಾವು ಮೊದಲು ರಾಜಕೀಯವನ್ನು ಬದಲಾಯಿಸಬೇಕಾಗುತ್ತದೆ. ರಾಜಕೀಯ ಇಚ್ಛಾಶಕ್ತಿಯಿಂದ ದೇಶದಲ್ಲಿ ಬದಲಾವಣೆ ತರಲು ಬಯಸಿದರೆ ಈ ನಿಟ್ಟಿನಲ್ಲಿ ಸಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com