ತಾಲಿಬಾನ್ ಉಗ್ರರಿಂದ ದೇಶ ವಶ: ಆತಂಕದಲ್ಲಿ ಧಾರವಾಡಲ್ಲಿರುವ ಅಫ್ಘನ್ ವಿದ್ಯಾರ್ಥಿಗಳು; ತವರಿಗೆ ಮರಳಲು ಚಡಪಡಿಕೆ

ಆಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನ್ನು ತಾಲಿಬಾನಿ ಉಗ್ರರು ವಶಪಡಿಸಿಕೊಂಡ ನಂತರ ಕಾಬುಲ್ ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಂಟಾದ ನಾಟಕೀಯ ಬೆಳವಣಿಗೆಗಳನ್ನು ಇಡೀ ವಿಶ್ವವೇ ನಿನ್ನೆ ನೋಡಿದೆ.
ಆಫ್ಘಾನಿಸ್ತಾನದ ಕಾಬೂಲ್ ನಲ್ಲಿರುವ ಅಧ್ಯಕ್ಷರರ ಅರಮನೆ ಹೊರಗೆ ತಾಲೀಬಾನಿ ಉಗ್ರರ ಕಾವಲು
ಆಫ್ಘಾನಿಸ್ತಾನದ ಕಾಬೂಲ್ ನಲ್ಲಿರುವ ಅಧ್ಯಕ್ಷರರ ಅರಮನೆ ಹೊರಗೆ ತಾಲೀಬಾನಿ ಉಗ್ರರ ಕಾವಲು

ಧಾರವಾಡ: ಆಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನ್ನು ತಾಲಿಬಾನಿ ಉಗ್ರರು ವಶಪಡಿಸಿಕೊಂಡ ನಂತರ ಕಾಬುಲ್ ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಂಟಾದ ನಾಟಕೀಯ ಬೆಳವಣಿಗೆಗಳನ್ನು ಇಡೀ ವಿಶ್ವವೇ ನಿನ್ನೆ ನೋಡಿದೆ.

ಇಂತಹ ಸಂದರ್ಭದಲ್ಲಿ ಭಾರತದಲ್ಲಿರುವ ಆಫ್ಘಾನಿಸ್ತಾನೀಯರು ತಮ್ಮ ಕುಟುಂಬಸ್ಥರು, ಮನೆಯವರ ಬಗ್ಗೆ ಬಹಳ ಆತಂಕಕ್ಕೀಡಾಗಿದ್ದಾರೆ. ಧಾರವಾಡದಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಆಫ್ಘಾನಿಸ್ತಾನ ಮೂಲಕ ವಿದ್ಯಾರ್ಥಿಗಳು ತಮ್ಮನ್ನು ವಾಪಸ್ ತಮ್ಮ ದೇಶಕ್ಕೆ ಕಳುಹಿಸಿಕೊಡಿ, ತಾವು ಕುಟುಂಬಸ್ಥರ ಜೊತೆ ಈ ಸಂದರ್ಭದಲ್ಲಿ ಇರಬೇಕು ಎಂದು ಕಾಲೇಜು ಮುಖ್ಯಸ್ಥರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪ್ರಸ್ತುತ ಆಫ್ಘಾನಿಸ್ತಾನಕ್ಕೆ ವಿಮಾನಗಳಿಲ್ಲ, ಕಾಬೂಲ್ ಗೆ ತೆರಳಲಿರುವ ವಿಮಾನಗಳಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ.

ಆತಂಕಪೀಡಿತ ವಿದ್ಯಾರ್ಥಿಗಳು ನಿರಂತರವಾಗಿ ತಮ್ಮ ಕುಟುಂಬಸ್ಥರ ಜೊತೆ ಫೋನ್ ಮೂಲಕ ಮಾತನಾಡುತ್ತಲೇ ಇದ್ದಾರೆ. ಕಳೆದ ಕೆಲವು ದಿನಗಳಿಂದ ತಮ್ಮವರ ಪರಿಸ್ಥಿತಿಯನ್ನು ಕೇಳಿ ತಿಳಿದುಕೊಳ್ಳುತ್ತಲೇ ಇದ್ದಾರೆ. ತಾಲಿಬಾನಿಗಳು ಅಂತರ್ಜಾಲ ಮತ್ತು ದೂರವಾಣಿ ಸಂಪರ್ಕಗಳನ್ನು ಕಡಿತಗೊಳಿಸಲು ನಿರ್ಧರಿಸಿರುವುದರಿಂದ ತಮ್ಮ ಪ್ರೀತಿಪಾತ್ರರನ್ನು ಸಂಪರ್ಕಿಸಲು ಸಾಧ್ಯವಾಗದಿರಬಹುದು ಎಂದು ವಿದ್ಯಾರ್ಥಿಗಳು ಚಿಂತಿತರಾಗಿದ್ದಾರೆ.

ಧಾರವಾಡ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ 15 ಆಫ್ಘನ್ ವಿದ್ಯಾರ್ಥಿಗಳಲ್ಲಿ, ಐದು ಜನರು ಕೋವಿಡ್ ನಿರ್ಬಂಧಗಳಿಂದಾಗಿ ಎರಡು ತಿಂಗಳ ಹಿಂದೆ ಅಫ್ಘಾನಿಸ್ತಾನಕ್ಕೆ ತೆರಳಿದರು. ಆದರೆ 10 ವಿದ್ಯಾರ್ಥಿಗಳು, ಅವರಲ್ಲಿ ಕೆಲವರು ತಮ್ಮ ಪಿಎಚ್‌ಡಿಗಳನ್ನು ಮುಂದುವರಿಸುತ್ತಿದ್ದಾರೆ, ಅವರಿಗೆ ಹಿಂತಿರುಗಲು ಸಾಧ್ಯವಾಗಲಿಲ್ಲ. ಸಹಾಯಕ್ಕಾಗಿ ಹತಾಶರಾದ ಅವರು ಈಗ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com