ಏಳು ತಿಂಗಳು ಕಳೆದರೂ ಇನ್ನೂ ಆರಂಭವಾಗಿಲ್ಲ 'ಅನುಭವ ಮಂಟಪ'ದ ಕೆಲಸ!

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ 500 ಕೋಟಿ ರು. ವೆಚ್ಚದ ಅನುಭವ ಮಂಟಪ ನಿರ್ಮಾಣ ಮಾಡಲು ಮಾಜಿ ಸಿಎಂ ಯಡಿಯೂರಪ್ಪ ಅವರು ಶಂಕು ಸ್ಥಾಪನೆ ನೆರವೇರಿಸಿ ಸುಮಾರು 7 ತಿಂಗಳ ಸಮಯ ಕಳೆದಿದೆ.  ಆದರೆ ಯೋಜನೆಯ ಕಾಮಗಾರಿ ಇನ್ನೂ ಆರಂಭವಾಗಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ 500 ಕೋಟಿ ರು. ವೆಚ್ಚದ ಅನುಭವ ಮಂಟಪ ನಿರ್ಮಾಣ ಮಾಡಲು ಮಾಜಿ ಸಿಎಂ ಯಡಿಯೂರಪ್ಪ ಅವರು ಶಂಕು ಸ್ಥಾಪನೆ ನೆರವೇರಿಸಿ ಸುಮಾರು 7 ತಿಂಗಳ ಸಮಯ ಕಳೆದಿದೆ.  ಆದರೆ ಯೋಜನೆಯ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

ಎರಡು ವರ್ಷಗಳಲ್ಲಿ ಯೋಜನೆ ಪೂರ್ಣವಾಗಿ ಪ್ರಧಾನಿ ನರೇಂದ್ರ ಮೋದಿ ಕಟ್ಡ ಉದ್ಘಾಟಿಸಲಿದ್ದಾರೆ ಎಂದು ಯಡಿಯೂರಪ್ಪ ಭರವಸೆ ನೀಡಿದ್ದರು. 

ಆದಾಗ್ಯೂ, ಯೋಜನೆಗೆ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಇನ್ನೂ ಸಿದ್ಧಪಡಿಸಿಲ್ಲ ಮತ್ತು ಡಿಪಿಆರ್ ಇಲ್ಲದೆ ಕೆಲಸಕ್ಕಾಗಿ ಟೆಂಡರ್‌ಗಳನ್ನು ಕರೆಯಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಯಡಿಯೂರಪ್ಪ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುನ್ನ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

12 ನೇ ಶತಮಾನದ ಸುಧಾರಕ ಬಸವೇಶ್ವರರಿಂದ ಸ್ಥಾಪಿತವಾದ ಅನುಭವ ಮಂಟಪವು ಅತೀಂದ್ರಿಯತೆ, ಆಧ್ಯಾತ್ಮಿಕ ಜಾಗೃತಿ ಮತ್ತು ಧಾರ್ಮಿಕ ಪ್ರವಚನದ ನೆಲೆಯಾಗಿದೆ. ಇದನ್ನು 'ವಿಶ್ವದ ಮೊದಲ ಸಂಸತ್ತು' ಎಂದು ಪರಿಗಣಿಸಲಾಗಿದೆ. ಬಸವೇಶ್ವರರ ಬೋಧನೆಗಳನ್ನು ಎತ್ತಿ ತೋರಿಸುವ ಯೋಜನೆಯನ್ನು 2016 ರಲ್ಲಿ ಅಂದಿನ ಸಿದ್ದರಾಮಯ್ಯ ಸರ್ಕಾರವು ಮೊದಲು ಪ್ರಸ್ತಾಪಿಸಿತು.

ಸರ್ಕಾರದ ಮುಂದೆ ಒಂದು ಪ್ರಸ್ತಾಪವನ್ನು ಇರಿಸಲಾಗಿದ್ದು, ಯಡಿಯೂರಪ್ಪ ಶಿಲಾನ್ಯಾಸ ಮಾಡಿದರು. "ಆದರೆ ಇಲ್ಲಿಯವರೆಗೆ ಯಾವುದೇ ಪ್ರಗತಿಯಾಗಿಲ್ಲ. ನಾವು ಡಿಪಿಆರ್‌ಗಾಗಿ ಟೆಂಡರ್‌ಗಳನ್ನು ಕರೆದಿದ್ದೇವೆ ಮತ್ತು ಕರ್ನಾಟಕ ಮೂಲದ ಕೆಲವು ಸಂಸ್ಥೆಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದರು.  ಡಿಪಿಆರ್  ಇಲ್ಲದೆ, ನಾವು ಟೆಂಡರ್‌ಗಳನ್ನು ಕರೆಯಲು ಸಾಧ್ಯವಿಲ್ಲ. ನಾವು ಸೆಪ್ಟೆಂಬರ್‌ನಲ್ಲಿ ಟೆಂಡರ್ ಕರೆಯುತ್ತೇವೆ ಮತ್ತು ನವೆಂಬರ್‌ನಲ್ಲಿ ಕೆಲಸ ಆರಂಭಿಸಬಹುದು. ನಾವು ಸರಿಯಾದ ಬಿಡ್ಡರ್‌ಗಳನ್ನು ಪಡೆಯದಿದ್ದರೆ, ಯೋಜನೆಯು ಮತ್ತಷ್ಟು ವಿಳಂಬವಾಗುತ್ತದೆ ಎಂದು ಅಧಿಕಾರಿ ಹೇಳಿದರು.

ಹೊಸ ಅನುಭವ ಮಂಟಪವು ಆರು ಮಹಡಿಗಳಲ್ಲಿ 770 ಕಂಬಗಳಿಂದ ನಿರ್ಮಿತವಾಗಲಿದೆ, ಚಾಲುಕ್ಯರ ವಾಸ್ತುಶಿಲ್ಪದ ಮೇಲೆ ನಿರ್ಮಿಸಲಾಗಿದೆ. ಅಲ್ಲದೆ, 770 ಆಸನ ಸಾಮರ್ಥ್ಯದ ಆಡಿಟೋರಿಯಂ ಬರಲಿದೆ. ಅನುಭವ ಮಂಟಪದಲ್ಲಿ 770 ಶರಣರು (ಬಸವಣ್ಣನ ಅನುಯಾಯಿಗಳು) ಇದ್ದರು ಎಂದು ನಂಬಲಾಗಿದೆ. ಈ ಯೋಜನೆಯು 101 ಎಕರೆಯಲ್ಲಿ ಬರಲಿದ್ದು, 7.5 ಎಕರೆಗಳಲ್ಲಿ ನೈಜ ರಚನೆ ಇರಲಿದೆ. ಬಜೆಟ್ ನಲ್ಲಿ ಯೋಜನೆಗೆ ಘೋಷಿಸಿದ 500 ಕೋಟಿಗಳಲ್ಲಿ, 200 ಕೋಟಿಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. 101 ಎಕರೆಗಳಲ್ಲಿ, 11.25 ಎಕರೆಗಳನ್ನು ಕೆಲವು ಮಂದಿ ದಾನ ಮಾಡಿದ್ದಾರೆ. ಆದರೆ, ರೈತರು ಹೆಚ್ಚಿನ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರಿಂದ ಭೂ ಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಂಡಿದೆ. ಪ್ರಸ್ತುತ, ಯೋಜನಾ ಸ್ಥಳದಲ್ಲಿ ಮಣ್ಣು ಪರೀಕ್ಷೆ ಮಾಡಲಾಗುತ್ತಿದೆ.

ಅಡಿಪಾಯ ಹಾಕುವ ಸಮಾರಂಭದ ಬಗ್ಗೆ ಕೇಳಿದಾಗ, ಅದನ್ನು ರೇಖಾಚಿತ್ರಗಳ ಆಧಾರದ ಮೇಲೆ ಮಾಡಲಾಗಿದೆ ಎಂದು ಅಧಿಕಾರಿ ಹೇಳಿದರು. "ನಾವು ಅದರ ಆಧಾರದ ಮೇಲೆ ನಿರ್ಮಾಣವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ನಮಗೆ ವಿವರವಾದ ಯೋಜನಾ ವರದಿ ಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com