ಮಕ್ಕಳ ಶಾಲಾ ಶುಲ್ಕದ ಮೇಲೆ ನಿಗಾ ಇರಿಸಲು ಸಮಿತಿ ರಚಿಸುವಂತೆ ಸರ್ಕಾರಕ್ಕೆ ಪಾಲಕರ ಆಗ್ರಹ
ಈಗಾಗಲೇ ತಮಿಳುನಾಡು, ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಶಾಲಾ ಶುಲ್ಕದ ಮೇಲೆ ನಿಗಾ ಇರಿಸುವ ಸಮಿತಿ ರಚನೆಯಾಗಿವೆ. ಈ ಹಿಂದಿನ ಮುಖ್ಯಮಂತ್ರಿಗಳ ಬಳಿಯೂ ಈ ಬಗ್ಗೆ ಬೇಡಿಕೆ ಇರಿಸಲಾಗಿತ್ತು.
Published: 27th August 2021 12:04 PM | Last Updated: 27th August 2021 01:15 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಮಕ್ಕಳ ಶಾಲಾ ಶುಲ್ಕ ವಿಚಾರವಾಗಿ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಪಾಲಕರು ಒತ್ತಾಯಿಸಿದ್ದಾರೆ. ಶಾಲಾ ಶುಲ್ಕದ ಮೇಲೆ ನಿಗಾ ಇರಿಸಲು ಹಲವು ರಾಜ್ಯಗಳಲ್ಲಿರುವಂತೆ ಸಮಿತಿ ರಚನೆ ಮಾಡಲು ಪಾಲಕರು ಮತ್ತೆ ಬೇಡಿಕೆ ಇರಿಸಿದ್ದಾರೆ.
ಈಗಾಗಲೇ ತಮಿಳುನಾಡು, ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಶಾಲಾ ಶುಲ್ಕದ ಮೇಲೆ ನಿಗಾ ಇರಿಸುವ ಸಮಿತಿ ರಚನೆಯಾಗಿವೆ. ಈ ಹಿಂದಿನ ಮುಖ್ಯಮಂತ್ರಿಗಳ ಬಳಿಯೂ ಈ ಬಗ್ಗೆ ಬೇಡಿಕೆ ಇರಿಸಲಾಗಿತ್ತು. ಈಗಿನ ಹೊಸ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರ ಬಳಿಯೂ ಇದೇ ಮನವಿಯನ್ನು ಇರಿಸಿರುವುದಾಗಿ ಪಾಲಕರು ತಿಳಿಸಿದ್ದಾರೆ.
ಪಾಲಕರನ್ನು ಪ್ರತಿನಿಧಿಸುತ್ತಿರುವ ಸಂಸ್ಥೆಯೊಂದು ಈ ವರ್ಷ ಶೇ.50 ಪ್ರತಿಶತ ಟ್ಯೂಷನ್ ಫೀಯನ್ನು ಕಡಿತಗೊಳಿಸುವಂತೆ ಆಗ್ರಹಿಸಿದೆ. ಇದೇ ವೇಳೆ ಕಳೆದ ವರ್ಷದ ಶುಲ್ಕ ಪಾವತಿಸದೇ ಇರುವುದನ್ನೂ ಸೇರಿಸಿ ಕಟ್ಟುವಂತೆ ಶಾಲೆಗಳು ಒತ್ತಾಯಿಸುತ್ತಿರುವುದಾಗಿ ಪಾಲಕರು ದೂರಿದ್ದಾರೆ.
ಕೆಲವೆಡೆ ಶಾಲೆಗಳು ಶುಲ್ಕ ಬಾಕಿ ಉಳಿಸಿಕೊಂಡ ಮಕ್ಕಳನ್ನು ತರಗತಿಗಳಿಂದ ನಿರ್ಬಂಧ ಹೇರುವುದಾಗಿ ಬೆದರಿಕೆ ಹಾಕುತ್ತಿರುವ ಘಟನೆಗಳೂ ನಡೆಯುತ್ತಿವೆ ಎಂದು ಪಾಲಕರು ದೂರಿದ್ದಾರೆ.