‘ಕಲಬುರಗಿ ಜನ ಸೋಂಬೇರಿಗಳು’ ಹೇಳಿಕೆಗೆ ಕೊನೆಗೂ ವಿಷಾದ ವ್ಯಕ್ತಪಡಿಸಿದ ಸಚಿವ ನಿರಾಣಿ

‘ಕಲಬುರಗಿ ಜಿಲ್ಲೆಯ ಜನರು ಸೋಂಬೇರಿಗಳು’ ಎಂಬ ತಮ್ಮ ಹೇಳಿಕೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರು ಕೊನೆಗೂ ವಿಷಾದ ವ್ಯಕ್ತಪಡಿಸಿದ್ದಾರೆ.
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ

ಕಲಬುರಗಿ: ‘ಕಲಬುರಗಿ ಜಿಲ್ಲೆಯ ಜನರು ಸೋಂಬೇರಿಗಳು’ ಎಂಬ ತಮ್ಮ ಹೇಳಿಕೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರು ಕೊನೆಗೂ ವಿಷಾದ ವ್ಯಕ್ತಪಡಿಸಿದ್ದಾರೆ.

ಇಂದು ನಗರದ ಲುಂಬಿಣಿ ಗ್ರ್ಯಾಂಡ್ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾನು ಮನಸ್ಸಿನಿಂದ ಆ ಮಾತು ಆಡಿಲ್ಲ. ಆ ಮಾತು ನನ್ನ ಬಾಯಿಂದ ಹೊರ ಬಂದಿರುವುದಕ್ಕೆ ನನಗೂ ಬೇಜಾರಿದೆ. ನಾನು ಹೇಳುವ ಆ ಉದ್ದೇಶ ಅದಾಗಿರಲಿಲ್ಲ. ಕಲಬುರಗಿಯ ಅಭಿವೃದ್ಧಿ ಆಗಬೇಕು ಎಂಬ ದೃಷ್ಟಿಕೋನದಲ್ಲಿ ಹೇಳಿದ್ದೆ ಎಂದಿದ್ದಾರೆ.

ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಕಲಬುರಗಿ ಜಿಲ್ಲೆ ಹಾಗೂ ಜನತೆ ಬಗ್ಗೆ ನನಗೆ ಅಪಾರವಾದ ಕಾಳಜಿ ಇದೆ ಎಂದು ಸಚಿವರು ಹೇಳಿದ್ದಾರೆ.

‘ಕಲಬುರ್ಗಿ ಜಿಲ್ಲೆಯ ಜನರು ಸೋಂಬೇರಿಗಳು’ ಎಂದು ಬಾಗಲಕೋಟೆಯಲ್ಲಿ ಇತ್ತೀಚೆಗೆ ಹೇಳಿಕೆ ನೀಡಿದ್ದಕ್ಕೆ ಜಿಲ್ಲೆಯ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಜಿಲ್ಲೆಯ ಜನಗಳ ಬಗ್ಗೆ ನೀಡಿದ ಹೇಳಿಕೆಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಮುಖಂಡ ಸುಭಾಷ್ ರಾಠೋಡ, ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com