ಓಮಿಕ್ರಾನ್ ಈಗಾಗಲೇ ಕರ್ನಾಟಕದಲ್ಲಿ ಇದ್ದಿರಬಹುದು, ಆದರೆ ಈಗ ಪತ್ತೆಯಾಗಿದೆ: ವೈರಾಣು ತಜ್ಞರು

ಯಾವುದೇ ಪ್ರಯಾಣದ ಇತಿಹಾಸವಿಲ್ಲದ ಬೆಂಗಳೂರಿನ ವೈದ್ಯರಲ್ಲಿ ಕೋವಿಡ್ ಹೊಸ ರೂಪಾಂತರಿ ಓಮಿಕ್ರಾನ್ ಪತ್ತೆಯಾಗಿದ್ದು, ಇದು ಈಗಾಗಲೇ ದೇಶದ ಜನರಲ್ಲಿ ಇದ್ದಿರಬಹುದು ಮತ್ತು ಈಗ ಪತ್ತೆಯಾಗಿದೆ ಎಂಬುದನ್ನು ತೋರಿಸುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಯಾವುದೇ ಪ್ರಯಾಣದ ಇತಿಹಾಸವಿಲ್ಲದ ಬೆಂಗಳೂರಿನ ವೈದ್ಯರಲ್ಲಿ ಕೋವಿಡ್ ಹೊಸ ರೂಪಾಂತರಿ ಓಮಿಕ್ರಾನ್ ಪತ್ತೆಯಾಗಿದ್ದು, ಇದು ಈಗಾಗಲೇ ದೇಶದ ಜನರಲ್ಲಿ ಇದ್ದಿರಬಹುದು ಮತ್ತು ಈಗ ಪತ್ತೆಯಾಗಿದೆ ಎಂಬುದನ್ನು ತೋರಿಸುತ್ತಿದೆ.

ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯ ಪ್ರಕಾರ, ಓಮಿಕ್ರಾನ್ ಸೋಂಕು ತಗುಲಿರುವ 46 ವರ್ಷದ ಅರಿವಳಿಕೆ ತಜ್ಞ ವೈದ್ಯ ಎರಡು ದಿನಗಳ ಹಿಂದೆ ನಗರದಲ್ಲಿ ನಡೆದ ಹೃದ್ರೋಗ ಸಮ್ಮೇಳನದಲ್ಲಿ ಭಾಗವಹಿಸಿದ್ದರು ಮತ್ತು ಮರುದಿನ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

“ಈ ವೈದ್ಯರ ಸೋಂಕಿನ ಪ್ರಾಥಮಿಕ ಮೂಲವು ಸಮ್ಮೇಳನದಲ್ಲಿರುವ ಯಾರೋ ಒಬ್ಬರಿಂದ ಸೋಂಕು ತಗುಲಿರುವ ಸಾಧ್ಯತೆ ಕಡಿಮೆ ಇದೆ. ಏಕೆಂದರೆ ಅವರು ಸಮ್ಮೇಳನದಲ್ಲಿ ಭಾಗವಹಿಸಿದ ಕೇವಲ ಒಂದು ದಿನದಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಅಧಿಕಾರಿ ಹೇಳಿದ್ದಾರೆ.

ಇನ್ನೂ ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಡಾ. ಸಿ ಎನ್ ಮಂಜುನಾಥ್ ಅವರು, "ಹಲವಾರು ದೇಶಗಳಲ್ಲಿ ರೂಪಾಂತರಿಗಳು ಪತ್ತೆಯಾಗುತ್ತಿವೆ. ಆದರೆ ಅವು ಯಾವಾಗಲೂ ಅಲ್ಲಿಂದಲೇ ಬರಬೇಕು ಅಂತ ಇಲ್ಲ. ಇಲ್ಲಿಯೇ ಹೊಸ ರೂಪಾಂತರಿ ಹುಟ್ಟಿಕೊಳ್ಳಬಹುದು ಮತ್ತು ಅದು ಸಮುದಾಯದಲ್ಲಿ ಬಹಳ ಹಿಂದೆಯೇ ಇರಬಹುದು" ಎಂದಿದ್ದಾರೆ.

ಓಮಿಕ್ರಾನ್ ಬಗ್ಗೆ ಭಯಪಡುವ ಅಗತ್ಯತೆ ಇಲ್ಲ. ಹಳೆಯ ಡೆಲ್ಟಾದಂತೆ ಇದು ಕೂಡ. ಆದರೆ ವೇಗವಾಗಿ ಹರಡುವ ಸಾಧ್ಯತೆ ಇದೆ. ಇದನ್ನು ನಿರ್ಲಕ್ಷ್ಯ ಮಾಡೋದು ಬೇಡ. ಇದು ಹೊಸ ತಳಿ ಆಗಿರೋದ್ರಿಂದ ಇದರ ಬಗ್ಗೆ ತಿಳಿಯೋದಕ್ಕೆ ಸಮಯ ಬೇಕಾಗುತ್ತದೆ. ಮುನ್ನೆಚ್ಚರಿಕೆ ಕ್ರಮ ಕೂಡ ತೆಗೆದುಕೊಳ್ಳಬೇಕು. ಒಂದು ದಿನ ಜ್ವರ ಬಂದರೆ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇದರಿಂದ ಬೇರೆಯವರಿಗೆ ಹರಡುವುದು ತಪ್ಪುತ್ತದೆ ಎಂದು ಹೇಳಿದ್ದಾರೆ.

ಈ ಮಧ್ಯೆ, ಖ್ಯಾತ ವೈರಾಣು ತಜ್ಞ ಡಾ. ಗಗನ್‌ದೀಪ್ ಕಾಂಗ್ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿ, ಓಮಿಕ್ರಾನ್ ರೂಪಾಂತರವು ಈಗಾಗಲೇ ಭಾರತದಲ್ಲಿರುವ ಸಾಧ್ಯತೆ ಇದೆ ಮತ್ತು ಅದನ್ನು ಐಎನ್‌ಎಸ್‌ಎಸಿಒಜಿ ಇನ್ನೂ ಪತ್ತೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com