ಬೆಳೆಹಾನಿ: ಇದೂವರೆಗೆ 6,894 ಫಲಾನುಭವಿಗಳಿಗೆ ರೂ. 8.58 ಕೋಟಿ ಪರಿಹಾರ- ಇಲಾಖೆ ಮಾಹಿತಿ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ 29 ದಿನಗಳಿಂದ ಸುರಿದ ಅಕಾಲಿಕ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಬಯಲು ಸೀಮೆ ಹಾಗೂ ಕಾಫಿ ತೋಟಗಳ ಬೆಳೆಗಳಿಗೆ ಸಂಬಂಧಿಸಿದಂತೆ 46,866 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಗೊಳಗಾಗಿದ್ದು, ಜುಲೈ ತಿಂಗಳಿನಿಂದ ಇಲ್ಲಿಯವರಗೆ 17,949 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾದ ಬೆಳೆಹಾನಿಗೆ 6,894 ಫಲಾನುಭವಿಗಳಿಗೆ 8.58 ಕೋಟಿ ರೂ ಪರಿಹಾರವನ್ನು ನೀಡಲಾಗಿದೆ.
ಕಳೆದ ನ.1ರಿಂದ 29ದಿನಗಳಲ್ಲಿ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆ ಹಾನಿಯಾಗಿದ್ದರೇ, 81.34 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 19,145 ಹೆಕ್ಟೇರ್ ರಾಗಿ, 4.40 ಹೆಕ್ಟೇರ್ ಬಾಳೆ, 3239 ಹೆಕ್ಟೇರ್ ಅಡಿಕೆ, 17.35 ಹೆಕ್ಟೇರ್ ಶುಂಠಿ, 0.40 ಹೆಕ್ಟೇರ್ ತೆಂಗು, 4523 ಹೆಕ್ಟೇರ್ ಕಾಳುಮೆಣಸು, 100.40 ಹೆಕ್ಟೇರ್ ಈರುಳ್ಳಿ, 72.80 ಹೆಕ್ಟೇರ್ ಆಲೂಗಡ್ಡೆ, 98.30 ಹೆಕ್ಟೇರ್ ಟೊಮ್ಯಾಟೊ, 91 ಹೆಕ್ಟೇರ್ ಹಸಿರುಮೆಣಸಿನಕಾಯಿ, 360 ಹೆಕ್ಟೇರ್ ಜೋಳ, 14 ಹೆಕ್ಟೇರ್ ಹತ್ತಿ ಹಾಗೂ 107 ಹೆಕ್ಟೇರ್ ಪ್ರದೇಶದಲ್ಲಿ ಇತರ ತರಕಾರಿ ಬೆಳೆಗಳು ನಾಶವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ