ಶಾಲಾ ಮಕ್ಕಳಿಗೆ ಮೊಟ್ಟೆ ಕೊಟ್ಟರೆ ತಪ್ಪೇನಿಲ್ಲ: ಸ್ವಾಮಿಜಿಗಳ ವಿರೋಧದ ನಡುವೆಯೇ ಶಾಸಕ ರಘುಪತಿ ಭಟ್ ಹೇಳಿಕೆ
ಶಾಲಾ ಮಕ್ಕಳಿಗೆ ಮೊಟ್ಟೆ ಕೊಟ್ಟರೆ ತಪ್ಪೇನಿಲ್ಲ ಎಂದು ಹೇಳುವ ಮೂಲಕ ಸರ್ಕಾರದ ನಿಲುವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಸಮರ್ಥಿಸಿಕೊಂಡಿದ್ದಾರೆ.
Published: 10th December 2021 07:11 PM | Last Updated: 10th December 2021 07:11 PM | A+A A-

ಶಾಸಕ ರಘುಪತಿ ಭಟ್
ಉಡುಪಿ: ಶಾಲಾ ಮಕ್ಕಳಿಗೆ ಮೊಟ್ಟೆ ಕೊಟ್ಟರೆ ತಪ್ಪೇನಿಲ್ಲ ಎಂದು ಹೇಳುವ ಮೂಲಕ ಸರ್ಕಾರದ ನಿಲುವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಸಮರ್ಥಿಸಿಕೊಂಡಿದ್ದಾರೆ.
ಶಾಲೆಗಳಲ್ಲಿ ಮೊಟ್ಟೆ ಕೊಡುವ ಯೋಜನೆಗೆ ಬೆಂಬಲ ವ್ಯಕ್ತಪಡಿಸಿರುವ ಅವರು, 'ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಟ್ಟರೆ ತಪ್ಪು ಎಂದು ನನಗೆ ಅನಿಸುವುದಿಲ್ಲ. ಮೊಟ್ಟೆ ಕೊಟ್ಟ ಕೂಡಲೇ ಮೊಟ್ಟೆಯನ್ನು ತಿನ್ನಲೇಬೇಕು ಎಂದೇನಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶಾಲೆಗಳಲ್ಲಿ ಮೊಟ್ಟೆ ನೀಡುವುದಕ್ಕೆ ಪೇಜಾವರ ಶ್ರೀ ವಿರೋಧ
'ಸಣ್ಣ ಪ್ರಾಯದಲ್ಲಿ ಮಕ್ಕಳು ಸಸ್ಯಹಾರಿಯಾಗಿದ್ದರೆ ಸಸ್ಯಹಾರಿಗಳಾಗಿಯೇ ಇರುತ್ತಾರೆ. ಬೆಳೆದು ದೊಡ್ಡವರಾದ ಮೇಲೆ ಅವರು ಬದಲಾಗಬಹುದು. ಮೊಟ್ಟೆಯನ್ನು ಕೊಡುವ ಸಂದರ್ಭದಲ್ಲಿ ಪ್ರತ್ಯೇಕವಾಗಿ ಕೊಡುವ ವ್ಯವಸ್ಥೆ ಮಾಡಬಹುದು. ಕೆಲವೊಮ್ಮೆ ಸಸ್ಯಹಾರಿಗಳಿಗೆ ಮೊಟ್ಟೆ ತಿನ್ನುವುದನ್ನು ನೋಡುವಾಗ ಬೇರೆ ತೆರನಾದ ಭಾವನೆಗಳು ಬರಬಹುದು. ಇದಕ್ಕೆ ಶಾಲೆಯಲ್ಲಿ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಬಹುದು. ಇದಕ್ಕಾಗಿ ಮೊಟ್ಟೆ ಕೊಡದೆ ಇರುವುದು ಸೂಕ್ತವಾದ ನಿರ್ಧಾರವಲ್ಲ. ಇತರ ಮಕ್ಕಳು ಮೊಟ್ಟೆ ತಿನ್ನುವುದನ್ನು ನೋಡಿ ಮಕ್ಕಳು ಪ್ರಭಾವಿತರಾಗುತ್ತಾರೆ ಎಂದು ನನಗನ್ನಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮಧ್ಯಾಹ್ನದ ಬಿಸಿಯೂಟ ಆಹಾರ ಮೆನುವಿನಿಂದ ಮೊಟ್ಟೆ, ಬಾಳೆಹಣ್ಣು ಕೈ ಬಿಡಿ: ಸಿಎಂಗೆ ಸ್ವಾಮೀಜಿಗಳ ಒತ್ತಾಯ
ಯಾವುದೇ ಮಕ್ಕಳು ಬಲವಂತವಾಗಿ ಮೊಟ್ಟೆ ತಿನ್ನುವುದಿಲ್ಲ, ಮಕ್ಕಳು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುತ್ತಾರೆ ಮತ್ತು ಶಾಲೆಗಳಲ್ಲಿ ಮೊಟ್ಟೆಗಳನ್ನು ತಿನ್ನಲು ಪ್ರಾರಂಭಿಸುತ್ತಾರೆ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ. ಜನರು ಬೆಳೆದಾಗ ಮಾತ್ರ ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಬಹುದು, ಆದರೆ ಮಕ್ಕಳು ತಮ್ಮ ಪೋಷಕರು ಅನುಸರಿಸುವ ಆಹಾರ ಪದ್ಧತಿಗೆ ಬದ್ಧರಾಗಿರುತ್ತಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ: ಕಲ್ಯಾಣ ಕರ್ನಾಟಕ ಮಂಡಳಿಗೆ ಪ್ರಸ್ತಾವನೆ
ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಬೇಯಿಸಿದ ಮೊಟ್ಟೆ ನೀಡುವ ಸರ್ಕಾರದ ಕ್ರಮವನ್ನು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿರೋಧಿಸಿದ್ದರು. ಶಾಲೆಗಳಲ್ಲಿ ಮೊಟ್ಟೆ ನೀಡುವುದನ್ನು ವಿರೋಧಿಸಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು, 'ಪ್ರತಿಯೊಂದು ಸಮುದಾಯವೂ ತನ್ನದೇ ಆದ ಆಹಾರ ಪದ್ಧತಿಯನ್ನು ಅನುಸರಿಸುತ್ತದೆ ಮತ್ತು ಮಕ್ಕಳನ್ನು ಮೊಟ್ಟೆ ತಿನ್ನುವಂತೆ ಒತ್ತಾಯಿಸುವುದು ಸರ್ಕಾರದ ಕೆಲಸವಲ್ಲ ಎಂದು ಅವರು ಗುರುವಾರ ಹೇಳಿದ್ದರು. ಅಂತೆಯೇ ಸಮುದಾಯಗಳ ಜೀವನಶೈಲಿ ಮತ್ತು ಪದ್ಧತಿಗಳನ್ನು ಬದಲಾಯಿಸಲು ಶಾಲೆಗಳು ಇಲ್ಲ. ಮೊಟ್ಟೆ ಖರೀದಿಗೆ ಖರ್ಚು ಮಾಡಲು ಉದ್ದೇಶಿಸಿರುವ ಹಣವನ್ನು ಮರುಪಾವತಿ ಮಾಡುವಂತೆ ಸರ್ಕಾರಕ್ಕೆ ಸೂಚಿಸಿದ್ದರು.