ಮೆಟ್ರೋಗಾಗಿ ಮರ ಹನನ; ಬಿಎಂಆರ್ ಸಿಎಲ್ ವಿರುದ್ಧ ದಿಶಾ ರವಿ ಆರೋಪ; ಸುಳ್ಳು ಸುದ್ದಿ ಹರಡಬೇಡಿ ಎಂದ ಎಂಡಿ ಅಂಜುಮ್ ಪರ್ವೇಜ್
ಮೆಟ್ರೋ ಯೋಜನೆಗಾಗಿ ಮರ ಕಡಿಯುತ್ತಿರುವ ವಿಷಯವಾಗಿ ಬಿಎಂಆರ್ ಸಿಎಲ್ ಪಾರದರ್ಶಕತೆ ಕಾಯ್ದುಕೊಳ್ಳುತ್ತಿಲ್ಲ ಎಂದು ಬೆಂಗಳೂರು ಮೂಲದ ಹವಾಮಾನ ಕಾರ್ಯಕರ್ತೆ ದಿಶಾ ರವಿ ಆರೋಪಿಸಿದ್ದಾರೆ.
Published: 14th December 2021 02:34 PM | Last Updated: 14th December 2021 02:48 PM | A+A A-

ದಿಶಾ ರವಿ
ಬೆಂಗಳೂರು: ಮೆಟ್ರೋ ಯೋಜನೆಗಾಗಿ ಮರ ಕಡಿಯುತ್ತಿರುವ ವಿಷಯವಾಗಿ ಬಿಎಂಆರ್ ಸಿಎಲ್ ಪಾರದರ್ಶಕತೆ ಕಾಯ್ದುಕೊಳ್ಳುತ್ತಿಲ್ಲ ಎಂದು ಬೆಂಗಳೂರು ಮೂಲದ ಹವಾಮಾನ ಕಾರ್ಯಕರ್ತೆ ದಿಶಾ ರವಿ ಆರೋಪಿಸಿದ್ದಾರೆ.
ಯೋಜನೆಗಾಗಿ ಕಡಿಯಲಾಗುತ್ತಿರುವ ಮರಗಳ ಸಂಖ್ಯೆಯ ಬಗ್ಗೆ ಬಿಎಂಆರ್ ಸಿಎಲ್ ನೈಜ ಅಂಶಗಳನ್ನು ಮುಚ್ಚಿಡುತ್ತಿದೆ ಎಂದಿರುವ ದಿಶಾ ರವಿ ಹೆಚ್ಚಿನ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದು ತಮ್ಮ ಸರಣಿ ಟ್ವೀಟ್ ನಲ್ಲಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಬಿಎಂಆರ್ ಸಿಎಲ್ ಎಂಡಿ ಅಂಜುಮ್ ಪರ್ವೇಜ್ ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದು, ಸಂಸ್ಥೆಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುವುದನ್ನು ಬಿಡಬೇಕು ಎಂದು ಹೇಳಿದ್ದಾರೆ.
ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಕೇಂದ್ರ ಸರ್ಕಾರದ ವಿರುದ್ಧ ಟೂಲ್ ಕಿಟ್ ತಯಾರಿಸಿದ್ದ ಟೂಲ್ ಕಿಟ್ ಹಂಚಿಕೊಂಡಿದ್ದ ಪರಿಸರ ಕಾರ್ಯಕರ್ತೆ ಗ್ರೇಟ ಥನ್ಬರ್ಗ್ ಪ್ರಕರಣದಲ್ಲಿ ದಿಶಾ ರವಿಯೂ ಶಾಮೀಲಾಗಿದ್ದು ಆಕೆಯನ್ನು ಪ್ರಮುಖ ಆರೋಪಿಯನ್ನಾಗಿ ಗುರುತಿಸಲಾಗಿತ್ತು.
ಭಾನುವಾರ ಸರಣಿ ಟ್ವೀಟ್ ಮಾಡಿದ್ದ ದಿಶಾ ರವಿ, ಹೊರವರ್ತುಲ ರಸ್ತೆಯ (2ಎ ಹಂತ) ಅಥವಾ ಏರ್ ಪೋರ್ಟ್ ಲೈನ್ ನಲ್ಲಿನ ಮೆಟ್ರೋ ಕಾಮಗಾರಿಗೆ 800 ಮರಗಳನ್ನು ಸಿಲ್ಕ್ ಬೋರ್ಡ್ ನಿಂದ ಕಾಡುಬೀಸನಹಳ್ಳಿ ಮಾರ್ಗದಲ್ಲಿ ಧರೆಗುರುಳಿಸಲಾಗುತ್ತಿದೆ ಎಂದು ಆರೋಪಿಸಿದ್ದರು.
ಆದರೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅಲ್ಲಿ ಕೆರೆಯಾದ್ಯಂತ 15 ಮರಗಳನ್ನು ಕತ್ತರಿಸಲಾಗುತ್ತಿದೆ. ಆದರೆ ಇದನ್ನು ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿಲ್ಲ ಎಂದು ದಿಶಾ ರವಿ ಟ್ವೀಟ್ ಮಾಡಿದ್ದರು.
ಸಾರ್ವಜನಿಕರಿಂಡ 774 ಆಕ್ಷೇಪಣೆಗಳು ಬಂದಿವೆ ಆದರೆ ಬಿಎಂಆರ್ ಸಿಎಲ್ ಅದರತ್ತ ಗಮನ ಹರಿಸುತ್ತಿಲ್ಲ, ಹನನಗೊಂಡ ಮರಗಳ ಬದಲಿಗೆ ಮತ್ತೆ ಸಸಿಗಳನ್ನು ನೆಡುವುದು ಮತ್ತೊಂದು ನಾಟಕ ಎಂದೂ ದಿಶಾ ರವಿ ಆರೋಪಿಸಿದ್ದರು.
ಆದರೆ ದಿಶಾ ರವಿ ಅವರ ಆರೋಪಗಳನ್ನು ನಿರಾಕರಿಸಿರುವ ಪರ್ವೇಜ್, ಹೈಕೋರ್ಟ್ ತಜ್ಞರ ಸಮಿತಿ ನೇತೃತ್ವದಲ್ಲಿ ಮರಗಳನ್ನು ಕತ್ತರಿಸುವುದು ಅಥವಾ ಸ್ಥಳಾಂತರಿಸಲಾಗುವುದನ್ನು ಮಾಡಲಾಗುತ್ತಿದೆ. ಹೈಕೋರ್ಟ್ ಗೆ ಸುಳ್ಳು ಮಾಹಿತಿ ನೀಡಲು ಸಾಧ್ಯವೇ? ಹಾಗೆ ಮಾಡಿದರೆ ನಾವು ಜೈಲಿಗೆ ಹೋಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.