ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಜನ್ಮದಿನವನ್ನು 'ಹೊಂಡ ಗುಂಡಿಗಳ' ದಿನವನ್ನಾಗಿ ಆಚರಿಸಿದ ಕಾಂಗ್ರೆಸ್!

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಹುಟ್ಟುಹಬ್ಬವನ್ನು 'ಹೊಂಡ ಗುಂಡಿಗಳ' ದಿನವನ್ನಾಗಿ ಆಚರಿಸುವಂತೆ ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡಿ ಮಠ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟರ್ ವೊಂದನ್ನು ಹಾಕಿದ ನಂತರ, ಶೆಟ್ಟರ್ ಗೆ  ಅದೇ ರೀತಿಯ ಶುಭಾಶಯಗಳು ಹರಿದುಬರುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಶೆಟ್ಟರ್ ಫೋಸ್ಟರ್
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಶೆಟ್ಟರ್ ಫೋಸ್ಟರ್

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಹುಟ್ಟುಹಬ್ಬವನ್ನು 'ಹೊಂಡ ಗುಂಡಿಗಳ' ದಿನವನ್ನಾಗಿ ಆಚರಿಸುವಂತೆ ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡಿ ಮಠ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟರ್ ವೊಂದನ್ನು ಹಾಕಿದ ನಂತರ, ಶೆಟ್ಟರ್ ಗೆ  ಅದೇ ರೀತಿಯ ಶುಭಾಶಯಗಳು ಹರಿದುಬಂದಿವೆ.

ಅಲ್ಲದೇ, ಶೆಟ್ಟರ್ ಮುಖ ಮಾಸ್ಕ್ ಹಾಕಲಾಗಿದ್ದು, ಇವರು ಯಾರು? ಕಂಡುಹಿಡಿದವರಿಗೆ ಅಮೆಜಾನ್ ಗಿಫ್ಟ್ ವೋಚರ್ ನೀಡಲಾಗುವುದು  ಎಂದು ಫೋಸ್ಟರ್ ನಲ್ಲಿ ಹಾಕಲಾಗಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸ್ಥಳೀಯ ಬಿಜೆಪಿ ಘಟಕ, ಸ್ಥಳೀಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಶೆಟ್ಟರ್ ಜೊತೆಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದಿದೆ.

ಮಳೆ ಹಾಗೂ ಕೋವಿಡ್-19 ಸಾಂಕ್ರಾಮಿಕದಿಂದ ರಸ್ತೆ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರದಲ್ಲಿಯೇ ಅವಳಿ ನಗರಗಳಲ್ಲಿ ರಸ್ತೆ ದುರಸ್ಥಿ ಆಗಲಿದೆ ಎಂದು ಬಿಜೆಪಿ ಸದಸ್ಯರೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ,  ಫೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಬೆಂಬಲ ವ್ಯಕ್ತಪಡಿಸಿದ್ದಾರೆ.  ಹುಬ್ಬಳ್ಳಿಯಲ್ಲಿನ ಹೊಂಡ ಗುಂಡಿಗಳದ್ದು ಹಳೆಯ ಸಮಸ್ಯೆಯಾಗಿದೆ. ಸಂಬಂಧಿತ ಅಧಿಕಾರಿಗಳು ನಾಗರಿಕರ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಹಲವು ಮಂದಿ ಹೇಳಿದ್ದಾರೆ.

ಬಿಜೆಪಿಯನ್ನು ನಾನು ಬೆಂಬಲಿಸುತ್ತೇನೆ, ಆದರೆ, ಕಾಂಗ್ರೆಸ್ ಕಾರ್ಯಕರ್ತರು ಸರಿಯಾಗಿ ಏನು ಮಾಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿನ ಹದೆಗೆಟ್ಟ ರಸ್ತೆಗಳ ವಿರುದ್ಧ ಅನೇಕ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ, ಏನಾದರೂ ಸಕಾರಾತ್ಮಕ ಪ್ರತಿಕ್ರಿಯೆ ಕಂಡುಬಂದಿದ್ದೇಯೆ ಎಂದು ಹುಬ್ಬಳ್ಳಿಯ ಉದ್ಯಮಿ ಸತೀಶ್ ಗೋಪಿನಾಥ್ ಹೇಳಿದ್ದಾರೆ. 

ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿನ ರಸ್ತೆ ಗುಣಮಟ್ಟಕ್ಕಾಗಿ ಸಾಮಾಜಿಕ ಜಾಲತಾಣ ಮತ್ತಿತರ ವೇದಿಕೆಗಳಲ್ಲಿ ಒತ್ತಾಯಗಳು ಕೇಳಿಬರುತ್ತಲೇ ಇವೆ. ರಾಜ್ಯದ ಎರಡನೇ ಅತಿದೊಡ್ಡ ನಗರ ಎಂದು ಕರೆಯುತ್ತೇವೆ ಆದರೆ, ಈಗಲೂ ಕೂಡಾ ಸರಿಯಾದ ರಸ್ತೆ, ಶೌಚಾಲಯ, ಪಾದಚಾರಿ ಮಾರ್ಗದಂತಹ ಮೂಲಭೂತ ಸೌಕರ್ಯಗಳೇ ಇಲ್ಲ. ಧಾರವಾಡದಲ್ಲಿನ ಅನೇಕ ರಸ್ತೆಗಳನ್ನು ಇದೀಗ ದುರಸ್ಥಿ ಮಾಡಲಾಗುತ್ತಿದೆ ಆದರೆ, ಪ್ರಗತಿಯಲ್ಲಿರುವ ಕಾಮಗಾರಿಗಳು ಅನೇಕ ಅಪಘಾತಗಳಿಗೆ ಕಾರಣವಾಗಿದೆ. ಇಂತಹ ವಿಷಯಗಳತ್ತ ಗಮನಹರಿಸಬೇಕಾಗಿದೆ ಎಂದು ಧಾರವಾಡದ ಮತ್ತೋರ್ವ ನಿವಾಸಿ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com