ರಾಮನಗರ: ಅನುಮಾನಾಸ್ಪದ ರೀತಿಯಲ್ಲಿ ಚಿಲುಮೆ ಮಠದ ಸ್ವಾಮೀಜಿ ಶವ ಪತ್ತೆ

ರಾಮನಗರ ಜಿಲ್ಲೆಯ ಚಿಲುಮೆ ಮಠದ ಪೀಠಾಧಿಪತಿ ಬಸವಲಿಂಗ ಶ್ರೀಗಳು ಆತ್ಮಹತ್ಯೆಗೆ ಶರಣಾಗಿರುವುದು ಎಲ್ಲರಲ್ಲೂ ಆಘಾತ ಮೂಡಿಸಿದೆ.
ಶ್ರೀ ಬಸವಲಿಂಗ ಸ್ವಾಮಿ
ಶ್ರೀ ಬಸವಲಿಂಗ ಸ್ವಾಮಿ

ರಾಮನಗರ : ರಾಮನಗರ ಜಿಲ್ಲೆಯ ಚಿಲುಮೆ ಮಠದ ಪೀಠಾಧಿಪತಿ ಬಸವಲಿಂಗ ಶ್ರೀಗಳು ಆತ್ಮಹತ್ಯೆಗೆ ಶರಣಾಗಿರುವುದು ಎಲ್ಲರಲ್ಲೂ ಆಘಾತ ಮೂಡಿಸಿದೆ.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿ ಚಿಲುಮೆ ಮಠದ ಬಸವಲಿಂಗ ಶ್ರೀಗಳು(62) ಮಠದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಮಠದ ಗೋಡೆಗೆ ಅಳವಡಿಸಿದ್ದ ಕಬ್ಬಿಣದ ಗ್ರಿಲ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೊಡ್ಡಬಳ್ಳಾಪುರ ಮೂಲದ ಬಸವಲಿಂಗಸ್ವಾಮಿಗಳು 1982 ರಿಂದಲೂ ಮಠದಲ್ಲಿದ್ದರು. ಬೆಳಗ್ಗೆ 5 ಗಂಟೆಗೆ ಎಂದು ಸ್ವಾಮೀಜಿ ಪೂಜಾ ಕೈಂಕರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಎಂದಿನಂತೆ ಮಠದಲ್ಲಿ ಇದ್ದ ಧನ ಕರುಗಳನ್ನು ಕಟ್ಟಿ ಹಾಕಲು ರಾಮಣ್ಣ ಬಂದಿದ್ದರು.  ಸಮಯ ಬೆಳಗ್ಗೆ 7.30 ಆಗಿದ್ದರೂ ಸ್ವಾಮೀಜೀ ಹೊರ ಬರಲಿಲ್ಲ. ಮಠದ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ,ಆದರೆ ತಮ್ಮ ಡೆರಿಯಲ್ಲಿ ಹಣಕಾಸು ಸಮಸ್ಯೆ ಬಗ್ಗೆ ಬರೆದಿದ್ದಾರೆ. ಕಳೆದ ಎರಡು ವಾರಗಳಿಂದ ಆರೋಗ್ಯ ಹದಗೆಟ್ಟಿತ್ತು ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ, ಸ್ವಾಮೀಜಿಗಳ  ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

ಮಠದ 14 ಎಕರೆ ಜಮೀನಿದ್ದು ಯಾವುದೇ ತಕರಾರುಗಳಿಲ್ಲ, ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಶ್ರೀ ಸಿದ್ದಗಂಗಾ ಮಠಾಧೀಶರು ಶ್ರೀಗಳ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com