ಬಯಲು ಶೌಚ ಮುಕ್ತಗೊಳಿಸಲು ಗ್ರಾಮಕ್ಕೆ ಹೋಗಿ ಶಿಳ್ಳೆ ಊದಿದ ಗದಗ ಜಿಲ್ಲೆಯ ಪಂಚಾಯತ್ ಅಧಿಕಾರಿಗಳು!

21ನೇ ಶತಮಾನದ ಈ ಆಧುನಿಕ ಯುಗದಲ್ಲಿ ಇಂದಿಗೂ ಹಲವು ಹಳ್ಳಿಭಾಗಗಳಲ್ಲಿ ಬಯಲು ಶೌಚ ಮತ್ತು ಮಲ ವಿಸರ್ಜನೆಯನ್ನು ನೋಡುತ್ತೇವೆ.
ಶಿಳ್ಳೆ ಊದುತ್ತಿರುವ ಅಧಿಕಾರಿಗಳು
ಶಿಳ್ಳೆ ಊದುತ್ತಿರುವ ಅಧಿಕಾರಿಗಳು

ಗದಗ: 21ನೇ ಶತಮಾನದ ಈ ಆಧುನಿಕ ಯುಗದಲ್ಲಿ ಇಂದಿಗೂ ಹಲವು ಹಳ್ಳಿಭಾಗಗಳಲ್ಲಿ ಬಯಲು ಶೌಚ ಮತ್ತು ಮಲ ವಿಸರ್ಜನೆಯನ್ನು ನೋಡುತ್ತೇವೆ. ಅನೇಕ ಕಡೆಗಳಲ್ಲಿ ಇಂದಿಗೂ ಶೌಚಾಲಯ ವ್ಯವಸ್ಥೆಯಿಲ್ಲ, ಇದ್ದರೂ ಕೆಲವು ಹಳ್ಳಿಗರು ಬಯಲಿನಲ್ಲಿ ಮೂತ್ರ-ಮಲ ವಿಸರ್ಜನೆಯನ್ನು ಮಾಡುತ್ತಿರುತ್ತಾರೆ.

ಇಂತಹ ಪರಿಸ್ಥಿತಿ ಗದಗ ಜಿಲ್ಲೆಯ ಗ್ರಾಮಗಳಲ್ಲಿವೆ. ಜಿಲ್ಲಾಡಳಿತ ಜನರಲ್ಲಿ ಎಷ್ಟೇ ಅರಿವು ಮೂಡಿಸಲು ಯತ್ನಿಸಿದರೂ ಕೆಲವರು ಬುದ್ಧಿ ಕಲಿಯುತ್ತಿಲ್ಲ, ಶೌಚಾಲಯದ ಬಳಕೆ ಬಗ್ಗೆ, ಅದರ ಆರೋಗ್ಯದ ಅರಿವು ಇದ್ದಂತೆ ಕಂಡುಬರುತ್ತಿಲ್ಲ. ಗದಗ ಜಿಲ್ಲೆಯ ಜಿಲ್ಲೆ ಮತ್ತು  ಗ್ರಾಮ ಪಂಚಾಯತ್ ಅಧಿಕಾರಿಗಳು ಇದಕ್ಕೊಂದು ಉಪಾಯ ಮಾಡಿದ್ದಾರೆ. 

ಜನರು ಮನೆಗಳಲ್ಲಿ ಶೌಚಾಲಯಗಳನ್ನು ಬಳಸುವಂತೆ ಉತ್ತೇಜಿಸಲು  ಈ ಹಿಂದೆ ಕೊಪ್ಪಳ ಮತ್ತು  ಗದಗ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳು ವಿಶಿಷ್ಟ ವಿಧಾನಗಳನ್ನು ಪ್ರಯತ್ನಿಸಿ ಜನರ ಮನವೊಲಿಸಲು ಪ್ರಯತ್ನಿಸಿದ್ದರು. ಬಯಲಿನಲ್ಲಿ ಮಲವಿಸರ್ಜನೆ ಮಾಡುವವರಿಗೆ ಹೂಮಾಲೆ ಹಾಕುವುದು, ಗುಲಾಬಿ ಹೂ ಕೊಡುವುದು, ನಮನ ಸಲ್ಲಿಸುವುದು ಕೂಡ ಮಾಡಲಾಗಿದ್ದರೂ ಇನ್ನೂ ಸಮಸ್ಯೆ ಮುಂದುವರಿದಿದೆ. ಹೀಗಾಗಿ ಈ ಬಾರಿ ಬಯಲು ಶೌಚ ಮತ್ತು ಮಲ ವಿಸರ್ಜನೆಯನ್ನು ನಿಲ್ಲಿಸಲು ಗ್ರಾಮಗಳಿಗೆ ಅಲ್ಲಲ್ಲಿ ಹೋಗಿ ಶಿಳ್ಳೆ ಊದಿ ಎಚ್ಚರಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com