ನಂದಿ ಹಿಲ್ಸ್ ನಲ್ಲಿ ಧೂಳೆಬ್ಬಿಸಲಿರುವ ಕಾರ್- ಬೈಕ್ ರೇಸ್: ಅರಣ್ಯಾಧಿಕಾರಿಗಳು, ಪರಿಸರವಾದಿಗಳಿಂದ ವಿರೋಧ

ಆಗಸ್ಟ್ ತಿಂಗಳಲ್ಲಿ ನಂದಿ ಹಿಲ್ಸ್ ಪ್ರಾಂತ್ಯದಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು ಎನ್ನುವುದು ಗಮನಾರ್ಹ. ಚಿಕ್ಕಬಳ್ಳಾಪುರ ಸುತ್ತಲ ಪ್ರಾಂತ್ಯದಲ್ಲಿ ನಡೆಯುತ್ತಿರುವ ಡೈನಾಮೈಟ್ ಸ್ಫೋಟಗಳೇ ಅದಕ್ಕೆ ಕಾರಣ ಎನ್ನುವ ಅರೋಪ ಕೇಳಿಬಂದಿತ್ತು. 
ನಂದಿ ಹಿಲ್ಸ್
ನಂದಿ ಹಿಲ್ಸ್

ಬೆಂಗಳೂರು: ನಂದಿ ಹಿಲ್ಸ್ ನಲ್ಲಿ ಡಿಸೆಂಬರ್ 25- 26ರಂದು ಅಯೋಜನೆಗೊಂಡಿರುವ ಕಾರ್- ಬೈಕ್ ರೇಸು ನಡೆಸಲು ಆಕ್ಷೇಪ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಮತ್ತು ಕ್ರೀಡಾ ಇಲಾಖೆ ಅನುಮತಿ ನೀಡಿರುವ ಈ ಕಾರ್ಯಕ್ರಮವನ್ನು ಪರಿಸರವಾದಿಗಳು ಮತ್ತು ಅರಣ್ಯಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.  

ನಂದಿ ಹಿಲ್ಸ್ ಪ್ರಾಂತ್ಯ ಸೂಕ್ಷ್ಮ ಪ್ರದೇಶವಾಗಿದ್ದು, ಅಲ್ಲಿನ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ನಾಗರಿಕರ ಹೊಣೆ ಎಂದು ಪರಿಸರ ಸಂಘಟನೆಗಳು ಅಭಿಪ್ರಾಯಪಟ್ಟಿವೆ. 

ಆಗಸ್ಟ್ ತಿಂಗಳಲ್ಲಿ ನಂದಿ ಹಿಲ್ಸ್ ಪ್ರಾಂತ್ಯದಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು ಎನ್ನುವುದು ಗಮನಾರ್ಹ. ಚಿಕ್ಕಬಳ್ಳಾಪುರ ಸುತ್ತಲ ಪ್ರಾಂತ್ಯದಲ್ಲಿ ನಡೆಯುತ್ತಿರುವ ಡೈನಾಮೈಟ್ ಸ್ಫೋಟಗಳೇ ಅದಕ್ಕೆ ಕಾರಣ ಎನ್ನುವ ಅರೋಪ ಕೇಳಿಬಂದಿತ್ತು. 

ಕಾರ್ಯಕ್ರಮದ ಪೋಸ್ಟರ್ ನಲ್ಲಿ ರಾಜ್ಯ ಪ್ರವಾಸೋದ್ಯಮದ ಲಾಂಛನ ಕಂಡುಬಂದಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ಕಾರ್ಯಕ್ರಮದ ಬಗ್ಗೆ ತಮ್ಮ ಬಳಿ ಮಾಹಿತಿ ಇಲ್ಲವೆಂದು ಪ್ರವಾಸೋದ್ಯಮ ಅಧಿಕಾರಿಗಳು ಹೇಳಿದ್ದಾರೆ. 

ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ಮೋಟಾರ್ ಸ್ಪೋರ್ಟ್ಸ್ ಅಕಾಡೆಮಿಯ ಸಂತೋಷ್ ಅವರು ರೇಸ್ ಕುರಿತು ಮಾತನಾಡಿದ್ದು, ಈ ಕಾರ್ಯಕ್ರಮ ದೇಶದಲ್ಲೇ ಮೊದಲ ಬಾರಿ ನಡೆಯುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com