ಶಿವಮೊಗ್ಗದಲ್ಲಿ ಆಯುಷ್ ವಿಶ್ವವಿದ್ಯಾಲಯ ಸ್ಥಾಪನೆ; 'ಎಜುಕೇಷನ್ ಹಬ್' ಅಭಿವೃದ್ಧಿಗೆ ಒತ್ತು!

ಸಾಂಪ್ರದಾಯಿಕ ವೈದ್ಯ ಪದ್ಧತಿಯನ್ನು ಮುಖ್ಯವಾಹಿನಿಗೆ ಸೇರಿಸುವ ದೂರದೃಷ್ಟಿಯೊಂದಿಗೆ, ರಾಜ್ಯ ಸರ್ಕಾರ ಶಿವಮೊಗ್ಗ ನಗರದ ಸಮೀಪದ ಸೋಗಾನೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಆಯುಷ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಯೋಜಿಸಿದೆ. ಈ ಸಂಬಂಧಿತ ವಿಧೇಯಕ ಮೇಲ್ಮನೆಯಲ್ಲಿ ಬುಧವಾರ ಅಂಗೀಕಾರಗೊಂಡಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ/ ಶಿವಮೊಗ್ಗ: ಸಾಂಪ್ರದಾಯಿಕ ವೈದ್ಯ ಪದ್ಧತಿಯನ್ನು ಮುಖ್ಯವಾಹಿನಿಗೆ ಸೇರಿಸುವ ದೂರದೃಷ್ಟಿಯೊಂದಿಗೆ, ರಾಜ್ಯ ಸರ್ಕಾರ ಶಿವಮೊಗ್ಗ ನಗರದ ಸಮೀಪದ ಸೋಗಾನೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಆಯುಷ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಯೋಜಿಸಿದೆ. ಈ ಸಂಬಂಧಿತ ವಿಧೇಯಕ ಮೇಲ್ಮನೆಯಲ್ಲಿ ಬುಧವಾರ ಅಂಗೀಕಾರಗೊಂಡಿತು.

ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ, ಹೋಮಿಯೋಪಥಿ ಮತ್ತು ಟಿಬೆಟಿಯನ್ ಔಷಧ ಪದ್ಧತಿಗಳ ಮೇಲೆ ಆಯುಷ್ ವಿಶ್ವವಿದ್ಯಾಲಯ ಬೆಳಕು ಚೆಲ್ಲಲಿದೆ. ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಸ್ಥಾಪನೆಯಾಗಲಿರುವ ಇಂತಹ ವಿಶ್ವವಿದ್ಯಾನಿಲಯದಿಂದ ಹೆಚ್ಚಿನ ಸಂಶೋಧನೆ ಮತ್ತು ಅಭಿವೃದ್ಧಿ ಆಗಲಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು. 

ಆಯುಷ್ ವಿಶ್ವವಿದ್ಯಾಲಯದೊಂದಿಗೆ ಶಿವಮೊಗ್ಗ ಜಿಲ್ಲೆ ಇದೀಗ ಎಜುಕೇಷನ್ ಹಬ್  ಆಗಿ ಹೊರಹೊಮ್ಮಲಿದೆ. ಸುಮಾರು 100 ಎಕರೆ ಜಮೀನಿನಲ್ಲಿ ವಿಶ್ವವಿದ್ಯಾನಿಲಯ ತಲೆ ಎತ್ತಲಿದೆ. ರಾಜ್ಯ ಸರ್ಕಾರ ಈಗಾಗಲೇ 20 ಕೋಟಿ ರೂ.ಬಿಡುಗಡೆ ಮಾಡಿದೆ. ಈ ವಿಶ್ವವಿದ್ಯಾಲಯದಿಂದ 500 ಜನರಿಗೆ ನೇರ ಉದ್ಯೋಗ ಹಾಗೂ ಸುಮಾರು 5,000 ಜನರಿಗೆ ಪರೋಕ್ಷವಾಗಿ ಉದ್ಯೋಗ ದೊರೆಯಲಿದೆ. 

ಒಂದು ವೇಳೆ ಔಷಧ ಉತ್ಪಾದನೆ ಘಟಕವನ್ನು ವಿಶ್ವವಿದ್ಯಾಲಯ ಆರಂಭಿಸಿದ್ದರೆ ಮತ್ತಷ್ಟು ಉದ್ಯೋಗಗಳು ಸ್ಥಳೀಯ ಜನರಿಗೆ ದೊರೆಯಲಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಸಮಗ್ರ ರೀತಿಯಲ್ಲಿ ಅಭಿವೃದ್ಧಿಯಾಗಲಿದೆ ಎಂದು ಸಂಸದ ಬಿವೈ ರಾಘವೇಂದ್ರ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com