ಮೈಸೂರಿನಲ್ಲಿ ಮೊಟ್ಟ ಮೊದಲ ಓಮಿಕ್ರಾನ್ ಪ್ರಕರಣ: 9 ವರ್ಷದ ಬಾಲಕಿಗೆ ಸೋಂಕು

ಕೊರೋನಾ ರೂಪಾಂತರಿ ಓಮಿಕ್ರಾನ್​ ವೈರಸ್​ ರಾಜ್ಯದಲ್ಲೆಡೆ ಆರ್ಭಟ ಜೋರಾಗಿದ್ದು, ಬೆಂಗಳೂರು, ಬೆಳಗಾವಿ ನಂತರ ಮೈಸೂರಿನಲ್ಲಿ ಕಾಣಿಸಿಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು : ಕೊರೋನಾ ರೂಪಾಂತರಿ ಓಮಿಕ್ರಾನ್​ ವೈರಸ್​ ರಾಜ್ಯದಲ್ಲೆಡೆ ಆರ್ಭಟ ಜೋರಾಗಿದ್ದು, ಬೆಂಗಳೂರು, ಬೆಳಗಾವಿ ನಂತರ ಮೈಸೂರಿನಲ್ಲಿ ಕಾಣಿಸಿಕೊಂಡಿದೆ.

ಸಾಂಸ್ಕೃತಿಕ ನಗರಿಯಲ್ಲಿ ಮೊದಲ ಹೊಸ ವೈರಸ್​​ ಪತ್ತೆಯಾಗಿದ್ದು, ವಿದೇಶದಿಂದ ಬಂದಿದ್ದ9 ವರ್ಷದ  ಬಾಲಕಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೈಸೂರು ಮೂಲದ ಕುಟುಂಬದವರು ಸ್ವಿಡ್ಜರ್​​ಲ್ಯಾಂಡ್​​ನಲ್ಲಿ ನೆಲೆಸಿದ್ದರು. ಕ್ರಿಸ್​​ಮಸ್​ ಸಲುವಾಗಿ ಭಾರತಕ್ಕೆ ಬಂದಿದ್ದರು. ಭಾರತಕ್ಕೆ ಬರುವ ಮುಂಚೆ ಅಬುದಾಬಿಗೆ ತೆರಳಿದ್ದರು .

ಸೋಂಕಿತ ಬಾಲಕಿಗೆ ಯಾವುದೇ ಲಕ್ಷಣಗಳಿಲ್ಲ. ವೈದ್ಯರು ಪ್ರತ್ಯೇಕವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಾಥಮಿಕ, ದ್ವಿತೀಯ ಸೋಂಕಿತರ ಪತ್ತೆ ಮಾಡುತ್ತಿದ್ದಾರೆ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿಯಿಂದ ಮಾಹಿತಿಯನ್ನು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com