ಭ್ರಷ್ಟಾಚಾರ ಪ್ರಕರಣ: ಪತಿಯ ಸಾವು ಪತ್ನಿಯನ್ನು ವಿಚಾರಣೆಯಿಂದ ರಕ್ಷಿಸುವುದಿಲ್ಲ - ಹೈಕೋರ್ಟ್

ಭ್ರಷ್ಟಾಚಾರ ಪ್ರಕರಣದ ವಿಚಾರಣೆ ವೇಳೆ ಅಥವಾ ಚಾರ್ಜ್ ಶೀಟ್ ದಾಖಲಿಸುವ ಮುನ್ನ ಆರೋಪಿ ಸಾವನ್ನಪ್ಪಿದರೆ, ಸಹ ಆರೋಪಿಯಾಗಿರುವ ಪತ್ನಿಯ ವಿರುದ್ಧದ ವಿಚಾರಣೆಯನ್ನು ಕೈಬಿಡುವುದಿಲ್ಲ...
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಭ್ರಷ್ಟಾಚಾರ ಪ್ರಕರಣದ ವಿಚಾರಣೆ ವೇಳೆ ಅಥವಾ ಚಾರ್ಜ್ ಶೀಟ್ ದಾಖಲಿಸುವ ಮುನ್ನ ಆರೋಪಿ ಸಾವನ್ನಪ್ಪಿದರೆ, ಸಹ ಆರೋಪಿಯಾಗಿರುವ ಪತ್ನಿಯ ವಿರುದ್ಧದ ವಿಚಾರಣೆಯನ್ನು ಕೈಬಿಡುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ.

ಐಪಿಸಿ ಸೆಕ್ಷನ್ 109 ರ ಅಡಿಯಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಸಹ-ಆರೋಪಿಯ ಪತಿ ಹಾಗೂ ಪ್ರಮುಖ ಆರೋಪಿ ವಿಚಾರಣೆ ವೇಳೆ ಮೃತಪಟ್ಟರೆ ಅದು "ಸಹ ಆರೋಪಿಯನ್ನು ಶಿಕ್ಷೆಯಿಂದ ಮುಕ್ತಗೊಳಿಸುವುದಕ್ಕೆ ಕುಮ್ಮಕ್ಕು ನೀಡುವುದಿಲ್ಲ" ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಹೇಳಿದ್ದಾರೆ.

ವಿಎಂ ಸರಸ್ವತಿ ಅವರು ತಮ್ಮ ಪತಿ ಮೃತಪಟ್ಟ ನಂತರ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1) (ಇ), ಹೆಚ್ಚುವರಿಯಾಗಿ 13(2) ಅಡಿ ಅವರ ಪತ್ನಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುವಂತೆ ವಿಶೇಷ ನ್ಯಾಯಾಧೀಶರು ನೀಡಿದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅರ್ಜಿದಾರರ ವಿರುದ್ಧ ಆರೋಪ ಹೊರಿಸಲು ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ. ಆದರೆ, ಕುಮ್ಮಕ್ಕು ನೀಡಿದ ಆರೋಪದಲ್ಲಿ ಆಕೆಯ ವಿರುದ್ಧ ವಿಚಾರಣೆ ಮುಂದುವರಿಸಲು ನ್ಯಾಯಾಲಯ ಒಪ್ಪಿಗೆ ನೀಡಿದೆ.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ತರಬೇತಿ ಕೇಂದ್ರ, ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ, ಕಾಫಿ ಸಂಶೋಧನಾ ಕೇಂದ್ರದ ಉಪನಿರ್ದೇಶಕ(ಸಂಶೋಧನೆ)ರಾಗಿದ್ದ ಅರ್ಜಿದಾರರ ಪತಿ ಎಂ ಸೆಲ್ವಕುಮಾರ್ ಅವರು ಅಕ್ರಮ ಆಸ್ತಿ ಗಳಿಸಿದ್ದು, ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ಪತ್ನಿಯ ಹೆಸರಿನಲ್ಲಿ ಅನೇಕ ಚರ ಮತ್ತು ಸ್ಥಿರಾಸ್ತಿಗಳನ್ನು ಖರೀದಿಸಲು ಪತಿಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಸರಸ್ವತಿ ಅವರ ವಿರುದ್ಧ ಆರೋಪಿಲಾಗಿದೆ. ತನಿಖೆಯ ನಂತರ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ. ಆದರೆ, ಚಾರ್ಜ್‌ಶೀಟ್ ಸಲ್ಲಿಸುವ ಮುನ್ನ ಪತಿ ಮಾರ್ಚ್ 29, 2017 ರಂದು ನಿಧನರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com