ಮೈಸೂರಿನಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ಪತ್ತೆ

ಮೈಸೂರಿನಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ವರದಿಯಾಗಿದ್ದು, ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿನಿಯೊಬ್ಬರ ಓಮಿಕ್ರಾನ್ ಒಕ್ಕರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಮೈಸೂರಿನಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ವರದಿಯಾಗಿದ್ದು, ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿನಿಯೊಬ್ಬರ ಓಮಿಕ್ರಾನ್ ಒಕ್ಕರಿಸಿದೆ.

ಈ ಹಿಂದೆ ಇದೇ ಮೈಸೂರಿನ 9 ವರ್ಷದ ಬಾಲಕಿಗೆ ಕೋವಿಡ್-19 ವೈರಸ್ ನ ನೂತನ ರೂಪಾಂತರ ದೃಢಪಟ್ಟಿತ್ತು. ಈ ಘಟನೆ ಇನ್ನೂ ಹಸಿರಾಗಿರುವಂತೆಯೇ ಮತ್ತೊಂದು ಪ್ರಕರಣ ವರದಿಯಾಗಿದೆ. ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿನಿಯೊಬ್ಬರ ಓಮಿಕ್ರಾನ್ ಟೆಸ್ಟ್ ವರದಿ ಪಾಸಿಟಿವ್ ಎಂದು ದೃಢಪಟ್ಟಿದ್ದಾರೆ. ಇದೀಗ ಸೋಂಕಿತ ರೋಗಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಪರ್ಕಗಳನ್ನು ಪರೀಕ್ಷಿಸಲು ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ. 

ಡಿಸೆಂಬರ್ 20 ರಂದು ಆಗಮಿಸಿದ ಈ ಯುವತಿ ತನ್ನ ಮಾದರಿಗಳನ್ನು ಪರೀಕ್ಷೆಗೆ ನೀಡಿದ್ದಳು ಮತ್ತು ಬಳಿಕ ವರದಿ ಪಾಸಿಟಿವ್ ಬಂದಿತ್ತು. ನಂತರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ಗಾಗಿ ಕಳುಹಿಸಲಾಗಿತ್ತು. ಇದೀಗ ಈ ವರದಿಯಲ್ಲಿಯೂ ಪಾಸಿಟಿವ್ ಬಂದಿದೆ.

ಆರೋಗ್ಯ ಅಧಿಕಾರಿಗಳು ಈ ವಿಷಯದ ಬಗ್ಗೆ ಮೌನವಾಗಿದ್ದರೂ, ನಗರದಲ್ಲಿ ಪದವಿ ಕೋರ್ಸ್ ಅನ್ನು ಅನುಸರಿಸುತ್ತಿರುವ ತಾಂಜಾನಿಯಾದ ವಿದ್ಯಾರ್ಥಿನಿಗೆ ಓಮಿಕ್ರಾನ್ ರೂಪಾಂತರ ದೃಢಪಟ್ಟಿದೆ. ಆ ಮೂಲಕ ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 39ಕ್ಕೇರಿದೆ ಎಂದು ಮೂಲಗಳು ತಿಳಿಸಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com