ಯಾದಗಿರಿ: ಪುರಸಭೆ ಚುನಾವಣೆಯಲ್ಲಿ ಪೆಟ್ರೋಲ್ ಹಾಕುವ ಹುಡುಗ ಪರಶುರಾಮ ಗೆಲುವು
ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದಲ್ಲಿ ಅಚ್ಚರಿ ಎಂಬಂತೆ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕುವ ಯುವಕನೋರ್ವ ಚುನಾವಣೆ ಗೆದ್ದು ಅಚ್ಚರಿ ಮೂಡಿಸಿದ್ದಾರೆ.
Published: 30th December 2021 12:44 PM | Last Updated: 30th December 2021 01:15 PM | A+A A-

ಪೆಟ್ರೋಲ್ ಬಂಕ್ ನೌಕರ ಪರಶುರಾಮ ಗೆಲುವಿನ ಸಂಭ್ರಮ
ಯಾದಗಿರಿ: ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದಲ್ಲಿ ಅಚ್ಚರಿ ಎಂಬಂತೆ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕುವ ಯುವಕನೋರ್ವ ಚುನಾವಣೆ ಗೆದ್ದು ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ: ಸ್ವಕ್ಷೇತ್ರ ಹಾವೇರಿಯಲ್ಲೇ ಸಿಎಂ ಬೊಮ್ಮಾಯಿಗೆ ಹಿನ್ನಡೆ; ಕಾಂಗ್ರೆಸ್ ಕಮಾಲ್, ಬಂಕಾಪುರ, ಗುತ್ತಲ ಪಟ್ಟಣ ಪಂಚಾಯಿತಿ ಕೈ ತೆಕ್ಕೆಗೆ
ಹೌದು.. ಯಾದಗಿರಿ ಜಿಲ್ಲೆಯ ಕಕ್ಕೇರಾ ಪುರಸಭೆ ವಾರ್ಡ್ ನಂ6ರಲ್ಲಿ ಪೆಟ್ರೋಲ್ ಬಂಕ್ ನೌಕರ ಪರಶುರಾಮ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಯುವಕ ಪರಶುರಾಮ ತಮ್ಮ ವಿರುದ್ಧ ಸ್ಪರ್ಧಿಸಿದ್ದ 50 ಸ್ಪರ್ಧಿಗಳನ್ನು ಹಿಂದಿಕ್ಕಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ: ಬಿಡದಿ ಪುರಸಭೆ ಮತ್ತೆ ಜೆಡಿಎಸ್ ತೆಕ್ಕೆಗೆ, ಠೇವಣಿ ಕಳೆದುಕೊಂಡ ಬಿಜೆಪಿ
ಡಿ.27ರಂದು ಮತದಾನ ಪ್ರಕ್ರಿಯೆ ಮುಗಿದ ಮರುಕ್ಷಣದಿಂದಲೇ ಎರಡೂ ಪಕ್ಷದ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಮತದಾನ ಪ್ರಮಾಣ, ಜಾತಿವಾರು ಲೆಕ್ಕಾಚಾರ, ಶೇಕಡಾವಾರು ಮತದಾನ ಸೇರಿದಂತೆ ವಿವಿಧ ವಿಷಯಗಳು ಸಾರ್ವಜನಿಕ ಮತ್ತು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿತ್ತು.
ಇದನ್ನೂ ಓದಿ: ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ: ಎಂ.ಕೆ ಹುಬ್ಬಳ್ಳಿ ಪಕ್ಷೇತರರ ಕಮಾಲ್, ಎಲ್ಲ 14 ವಾರ್ಡ್ ಗಳಲ್ಲಿ ಜಯ
ಕಕ್ಕೇರಾ ಪುರಸಭೆಯಲ್ಲಿ ಶೇ 76.68 ಮತ್ತು ಕೆಂಭಾವಿ ಪುರಸಭೆಯಲ್ಲಿ ಶೇ 72.17 ಮತದಾನವಾಗಿತ್ತು. ಕಕ್ಕೇರಾ ಪುರಸಭೆಗೆ 51 ಮಂದಿ ಸ್ಪರ್ಧಿಸಿದ್ದರು. ಈ 51 ಮಂದಿಯಲ್ಲಿ ಪೆಟ್ರೋಲ್ ಬಂಕ್ ನೌಕರ ಪರುಶುರಾಮ ಕೂಡ ಇದ್ದರು.