ಸಾಗರೋತ್ತರ ವಿದ್ಯಾರ್ಥಿಗಳನ್ನು ಸಿಇಟಿಗೆ ದಾಖಲು ಮಾಡಿಕೊಳ್ಳಿ: ಹೈಕೋರ್ಟ್ ಆದೇಶ

ಸಾಗರೋತ್ತರ ಭಾರತೀಯ ನಾಗರಿಕರು (ಒಸಿಐ) ಕಾರ್ಡು ಹೊಂದಿರುವವರನ್ನು ಜೂನ್ 14,2021ರ ಅಧಿಸೂಚನೆ ಪ್ರಕಾರ ಪ್ರಸಕ್ತ ಸಾಲಿನ ಸಿಇಟಿ ಎಂಜಿನಿಯರ್ ಸೀಟು ಪರೀಕ್ಷೆ ಬರೆಯಲು ಅರ್ಜಿದಾರರಿಗೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸುವಂತೆ ಹೈಕೋರ್ಟ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಕ್ಕೆ ಆದೇಶ ನೀಡಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಸಾಗರೋತ್ತರ ಭಾರತೀಯ ನಾಗರಿಕರು (ಒಸಿಐ) ಕಾರ್ಡು ಹೊಂದಿರುವವರನ್ನು ಜೂನ್ 14,2021ರ ಅಧಿಸೂಚನೆ ಪ್ರಕಾರ ಪ್ರಸಕ್ತ ಸಾಲಿನ ಸಿಇಟಿ ಎಂಜಿನಿಯರ್ ಸೀಟು ಪರೀಕ್ಷೆ ಬರೆಯಲು ಅರ್ಜಿದಾರರಿಗೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸುವಂತೆ ಹೈಕೋರ್ಟ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಕ್ಕೆ ಆದೇಶ ನೀಡಿದೆ.

ಕಳೆದ ಮಾರ್ಚ್ 4ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಅಲೆಖ್ಯ ಪೊನ್ನೆಕಾಂತಿ ಮತ್ತು ಇತರ ಹಲವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗಡುಮ್ ಈ ಆದೇಶ ಹೊರಡಿಸಿದರು.ಭಾರತೀಯ ನಾಗರಿಕರಿಗೆ ವಿಶೇಷವಾಗಿ ಮೀಸಲಿಟ್ಟಿರುವ ಸೀಟುಗಳಿಗೆ ಸಾಗರೋತ್ತರ ಭಾರತೀಯರು ಅನರ್ಹರು ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

ಅಲ್ಲದೆ ಕಳೆದ ಜೂನ್ 14ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೂಡ ಮತ್ತೊಂದು ಅಧಿಸೂಚನೆ ಹೊರಡಿಸಿತ್ತು. ಅದರಲ್ಲಿ ವೃತ್ತಿಶಿಕ್ಷಣ ಕೋರ್ಸ್ ಗೆ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಸಾಗರೋತ್ತರ ಭಾರತೀಯರಿಗೆ ಪ್ರವೇಶ ನಿರಾಕರಿಸಲಾಗಿತ್ತು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜೊತೆ ಅರ್ಜಿದಾರರು ನೋಂದಾಯಿಸಿಕೊಳ್ಳದಿದ್ದರೆ ತೀವ್ರ ನಷ್ಟಕ್ಕೆ ಒಳಗಾಗಬೇಕಾಗುತ್ತದೆ ಅಲ್ಲದೆ ಭವಿಷ್ಯಕ್ಕೂ ತೊಂದರೆಯಾಗಬಹುದು ಎಂದು ನ್ಯಾಯಾಧೀಶರು ನಿನ್ನೆ ತೀರ್ಪು ವೇಳೆ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com