ಶಾಲಾ ಶುಲ್ಕ ಪಾವತಿಸಿಲ್ಲವೆಂದು 10ನೇ ತರಗತಿ ಪರೀಕ್ಷೆ ಪ್ರವೇಶ ಪತ್ರ ನಿರಾಕರಣೆ: ಮೂಡಬಿದ್ರೆಯಲ್ಲಿ ವಿದ್ಯಾರ್ಥಿನಿ ಪೋಷಕರ ಆರೋಪ 

ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಲು ಉಳಿದಿರುವುದು ಇನ್ನು ಮೂರೇ ದಿನ. ಇಂತಹ ಸಂದರ್ಭದಲ್ಲಿ ಶಾಲೆಯ ಶುಲ್ಕ ಕಟ್ಟಲಿಲ್ಲವೆಂದು ವಿದ್ಯಾರ್ಥಿಯೊಬ್ಬಳಿಗೆ ಪರೀಕ್ಷೆಗೆ ಪ್ರವೇಶ ಪತ್ರ ನೀಡದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಲು ಉಳಿದಿರುವುದು ಇನ್ನುಮೂರು ದಿನ. ಇಂತಹ ಸಂದರ್ಭದಲ್ಲಿ ಶಾಲೆಯ ಶುಲ್ಕ ಕಟ್ಟಲಿಲ್ಲವೆಂದು ವಿದ್ಯಾರ್ಥಿಯೊಬ್ಬಳಿಗೆ ಪರೀಕ್ಷೆಗೆ ಪ್ರವೇಶ ಪತ್ರ ನೀಡದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದಿದೆ.

ಆದರೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿನಿಯ ಆರೋಪವನ್ನು ತಳ್ಳಿ ಹಾಕಿದ್ದು 10ನೇ ಪರೀಕ್ಷೆಗೆ ಆಕೆ ದಾಖಲಾತಿ ಮಾಡಿಕೊಂಡಿರಲಿಲ್ಲ. ಹೀಗಾಗಿ ಪ್ರವೇಶ ಪತ್ರ ಸಿಕ್ಕಿಲ್ಲ ಎನ್ನುತ್ತಾರೆ.

ಮೂಲತಃ ಕೃಷಿಕರಾಗಿರುವ ಬಾಲಕಿಯ ತಂದೆ ನರಸಿಂಹ ಮೂರ್ತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆಗೆ ಮಾತನಾಡಿ, ಕೊರೋನಾ ಸೋಂಕಿನ ಕಾರಣದಿಂದ ತಮ್ಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಕಳೆದ ವರ್ಷದ ಶಾಲಾ ಶುಲ್ಕದ ಒಂದು ಭಾಗ ಉಳಿದುಕೊಂಡಿದ್ದು ಈ ವರ್ಷ ಕೂಡ ಕಟ್ಟಲು ಸಾಧ್ಯವಾಗಿರಲಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮೂಡಬಿದ್ರೆಯ ಆಳ್ವ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ವಿಜಯ ಮೂರ್ತಿ, ವಿದ್ಯಾರ್ಥಿನಿಯ ಶಾಲೆ ಮತ್ತು ಹಾಸ್ಟೆಲ್ ಶುಲ್ಕ ಕಟ್ಟದೆ ಉಳಿಸಿಕೊಂಡಿದ್ದಾರೆ. ಕಳೆದ ಮೇ ತಿಂಗಳಲ್ಲಿ ಬಾಲಕಿಯ ಪೋಷಕರನ್ನು 10ನೇ ತರಗತಿಯ ಪ್ರವೇಶಕ್ಕೆ ಸಂಪರ್ಕಿಸಿದ್ದಾಗ ಅವರಿಂದ ಪ್ರತಿಕ್ರಿಯೆ ಬರಲಿಲ್ಲ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com