ಮೂರನೇ ಅಲೆ ಊಹಿಸಲು ಕರ್ನಾಟಕದ ಸಿರೊ-ಸರ್ವೆ ದತ್ತಾಂಶ ನಿರ್ಣಾಯಕ: ತಜ್ಞರ ವಿಶ್ಲೇಷಣೆ ಹೀಗಿದೆ!

ನಿರೀಕ್ಷಿತ ಕೊರೋನಾ ಮೂರನೇ ಅಲೆ ಆತಂಕದ ನಡುವೆ ಕರ್ನಾಟಕ ಹಿಡಿತ ಸಾಧಿಸುತ್ತಿದೆ. ಇನ್ನು ಕರ್ನಾಟಕದ ಸೆರೋಸರ್ವಿಲೆನ್ಸ್ ದತ್ತಾಂಶ ಮುಖ್ಯವಾಗಿದ್ದು ಇದು ಮೂರನೇ ಅಲೆಯ ಪರಿಣಾಮವನ್ನು ಊಹಿಸಲು ರಾಜ್ಯಕ್ಕೆ ಸಹಾಯ ಮಾಡುತ್ತದೆ.

Published: 22nd July 2021 02:00 PM  |   Last Updated: 22nd July 2021 02:00 PM   |  A+A-


Covid

ಸಂಗ್ರಹ ಚಿತ್ರ

Posted By : Vishwanath S
Source : The New Indian Express

ಬೆಂಗಳೂರು: ನಿರೀಕ್ಷಿತ ಕೊರೋನಾ ಮೂರನೇ ಅಲೆ ಆತಂಕದ ನಡುವೆ ಕರ್ನಾಟಕ ಹಿಡಿತ ಸಾಧಿಸುತ್ತಿದೆ. ಇನ್ನು ಕರ್ನಾಟಕದ ಸೆರೋಸರ್ವಿಲೆನ್ಸ್ ದತ್ತಾಂಶ ಮುಖ್ಯವಾಗಿದ್ದು ಇದು ಮೂರನೇ ಅಲೆಯ ಪರಿಣಾಮವನ್ನು ಊಹಿಸಲು ರಾಜ್ಯಕ್ಕೆ ಸಹಾಯ ಮಾಡುತ್ತದೆ.

ಮೂಲಗಳ ಪ್ರಕಾರ, ಕರ್ನಾಟಕದ ಸಿರೊಪ್ರೆವೆಲೆನ್ಸ್ ಶೇಕಡಾ 14ರಷ್ಟಿದೆ. ಇದು ಮೊದಲ ಸಿರೊಸರ್ವಿಲೆನ್ಸ್ ಗಿಂತ ಕಡಿಮೆ ಇದೆ. ಇದಕ್ಕೂ ಮುನ್ನ ಸೆರೊಪ್ರೆವೆಲೆನ್ಸ್ ಅನ್ನು ಶೇಕಡಾ 27ರಷ್ಟು ತೋರಿಸಲಾಗಿತ್ತು.

'ಜನವರಿ ಅಂತ್ಯದಲ್ಲಿ ಪ್ರಾರಂಭವಾದ ಸಮೀಕ್ಷೆ ಮಾರ್ಚ್ ವೇಳೆಗೆ ಪೂರ್ಣಗೊಂಡಿದ್ದು ಏಪ್ರಿಲ್ ನಲ್ಲಿ ವಿಶ್ಲೇಷಿಸಲಾಗಿತ್ತು. ಈ ಮೂಲಕ ಹಿಂದಿನ ಸಮೀಕ್ಷೆಯಲ್ಲಿರುವುದಕ್ಕಿಂತ ರಾಜ್ಯದಲ್ಲಿ ಸಿರೊಪ್ರೆವೆಲೆನ್ಸ್ ಕಡಿಮೆ ಎಂದು ತಿಳಿಯಿತು. ಮೇ ತಿಂಗಳಲ್ಲಿ ಉಪ-ಸಮೀಕ್ಷೆ ಸಹ ವಿಶ್ಲೇಷಣೆ ನಡೆಸಲಾಗಿದ್ದು ಈ ಸಂಶೋಧನೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಕೋವಿಡ್- 19 ನಿರ್ವಹಿಸಲು ಸರ್ಕಾರ ರಚಿಸಿದ ತಜ್ಞರ ಸಮಿತಿಯ ಸದಸ್ಯರಾಗಿರುವ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ. ಅಲ್ಲದೆ ಕರ್ನಾಟಕದ ಸಿರೊ-ಸಮೀಕ್ಷೆಯ ದತ್ತಾಂಶವು ಐಸಿಎಂಆರ್ ಸಿದ್ಧಾಂತಕ್ಕೆ ವಿರುದ್ಧವಾಗಿದ್ದು ರಾಜ್ಯ ಉತ್ತಮ ಸಿರೊಪ್ರೆವೆಲೆನ್ಸ್ ಅನ್ನು ತೋರಿಸುತ್ತಿವೆ ಎಂದರು.

ಸಮೀಕ್ಷೆಯ ಫಲಿತಾಂಶಗಳನ್ನು ಇನ್ನೂ ಘೋಷಿಸದಿರಲು ಇದು ಒಂದು ಕಾರಣವಾಗಿರಬಹುದು ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ. ಆದಾಗ್ಯೂ, ಹೆಸರು ಹೇಳಲು ಇಚ್ಛಿಸದ ಮತ್ತೊಬ್ಬ ತಜ್ಞರು, ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯು ಕರ್ನಾಟಕದ ಜನಸಂಖ್ಯೆಯ ಉತ್ತಮ ಭಾಗದ ನಡುವೆ ಪ್ರತಿಕಾಯಗಳ ಉಪಸ್ಥಿತಿಯ ಹೆಚ್ಚಳವನ್ನು ತೋರಿಸಲು ಎರಡು ಸಿರೊಪ್ರೆವೆಲೆನ್ಸ್ ಸಮೀಕ್ಷೆಗಳನ್ನು ನಡೆಸಲಾಗಿದೆ ಎಂದರು.

ಎರಡು ಸಿರೊ ಸಮೀಕ್ಷೆಗಳನ್ನು ಹೋಲಿಸಲಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ
ಎರಡನೇ ಸಮೀಕ್ಷೆಯ ಮಾಹಿತಿಯು ಸರ್ಕಾರದ ಬಳಿ ಇದೆ. ಶೀಘ್ರದಲ್ಲೇ ದತ್ತಾಂಶವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಖ್ಯಾತ ವೈರಾಲಜಿಸ್ಟ್ ಮತ್ತು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿಯ ಭಾಗವಾಗಿರುವ ಡಾ.ವಿ.ರವಿ ಹೇಳಿದರು. ಎರಡು ಸಮೀಕ್ಷೆಗಳ ಸಿರೊಪ್ರೆವೆಲೆನ್ಸ್ ದತ್ತಾಂಶ ಕುರಿತು ಮಾತನಾಡಿದ ಅವರು, 'ಸಿರೊ-ಸಮೀಕ್ಷೆಗಳು ಸಂಯೋಜಕವಾಗಿವೆ ಏಕೆಂದರೆ ನಮ್ಮ ವಿನ್ಯಾಸವು ಮೊದಲ ಸುತ್ತಿನ ಜನಸಂಖ್ಯೆಯನ್ನು ಒಳಗೊಂಡಿರಲಿಲ್ಲ. ಇದು ಮೊದಲ ಸುತ್ತಿಗೂ ಮೇಲಿದೆ. ನಾವು ಒಂದೇ ರೀತಿಯ ಪರೀಕ್ಷೆಗಳನ್ನ ಮಾಡಿದ್ದೇವೆ. ಸರ್ಕಾರಕ್ಕೆ ಸಲ್ಲಿರುವ ವರದಿಯನ್ನು ಈ ರೀತಿಯೇ ವಿಶ್ಲೇಷಣೆ ಮಾಡಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮತ್ತೊಂದೆಡೆ, ಐಸಿಎಂಆರ್ ಇತ್ತೀಚೆಗೆ ಬಿಡುಗಡೆ ಮಾಡಿದ ಸಿರೊ-ಸಮೀಕ್ಷೆಯ ವರದಿಯ ಭಾಗವಾಗಿದ್ದ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್(ಐಸಿಎಂಆರ್)ನ ವಿಜ್ಞಾನಿ ಡಾ.ತರುಣ್ ಭಟ್ನಾಗರ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ. 'ನಾನು ಕರ್ನಾಟಕದ ಸಿರೊ ವರದಿಯನ್ನು ನೋಡಿಲ್ಲ. ಆದರೆ ಖಂಡಿತವಾಗಿಯೂ ನಾವು ಎರಡು ಸಮೀಕ್ಷೆಗಳನ್ನು ಸೇರಿಸಲು ಸಾಧ್ಯವಿಲ್ಲ. ಏಕೆಂದರೆ, ಎರಡು ಸಮೀಕ್ಷೆಗಳ ನಡುವಿನ ಅಂತರವನ್ನು ಅವಲಂಬಿಸಿ, ಪ್ರತಿಕಾಯಗಳ ಸ್ವಾಭಾವಿಕ ಕ್ಷೀಣತೆ ಇರುತ್ತದೆ. ಆದ್ದರಿಂದ, ಮೊದಲ ಸಮೀಕ್ಷೆಯಲ್ಲಿ ಪ್ರತಿಕಾಯ ಧನಾತ್ಮಕವಾಗಿದ್ದವರು ಸಹ ಅದು ಕ್ಷೀಣಿಸುತ್ತಿದೆ ಎಂದು ತೋರಿಸುತ್ತದೆ. ಮಾದರಿಗಳು ಎರಡು ವಿಭಿನ್ನ ಜನರಿದ್ದರೂ ಸಹ, ನಾವು ಅದನ್ನು ಸೇರಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ, ಪ್ರತಿಕಾಯಗಳು ಕಾಲಾನಂತರದಲ್ಲಿ ಕ್ಷೀಣಿಸುತ್ತವೆ. ಆ ಸಮಯದಲ್ಲಿ ಅದು ಅಂತಿಮವಾದುದನ್ನು ನಾವು ತೆಗೆದುಕೊಳ್ಳಬೇಕಾಗಿದೆ.

ಟಿಎನ್‌ಐಇಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಪ್ರಖ್ಯಾತ ವೈರೊಲೊಜಿಸ್ಟ್ ಮತ್ತು ಸಿಎಮ್‌ಸಿ ವೆಲ್ಲೂರು ಅವರೊಂದಿಗಿನ ಮೈಕ್ರೋಬಯಾಲಜಿ ಪ್ರಾಧ್ಯಾಪಕ ಡಾ.ಗಗನ್‌ದೀಪ್ ಕಾಂಗ್ ಅವರು, 'ಪರೀಕ್ಷೆಯ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ನೀವು ಕಳಪೆ ಪರೀಕ್ಷೆಯನ್ನು ಬಳಸಿದರೆ, ನಿಮಗೆ ಕಡಿಮೆ ಸಿರೊಪೊಸಿಟಿವಿಟಿ ಇರುತ್ತದೆ. ಸುಳ್ಳು ಸಕಾರಾತ್ಮಕತೆಯನ್ನು ತೋರಿಸುವ ಪರೀಕ್ಷೆಯನ್ನು ನೀವು ಬಳಸಿದರೆ, ನೀವು ಹೆಚ್ಚಿನ ಸಿರೊ-ಸಕಾರಾತ್ಮಕತೆಯನ್ನು ಹೊಂದಿರುತ್ತೀರಿ. ಆದರೆ ಎರಡು ಸಮೀಕ್ಷೆಗಳು ಒಂದೇ ಪರೀಕ್ಷೆಯಲ್ಲದಿದ್ದರೆ ಪರಸ್ಪರ ಹೋಲಿಸಲಾಗುವುದಿಲ್ಲ ಎಂದರು.


Stay up to date on all the latest ರಾಜ್ಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp